ಸಂಜೆ ಪದವಿ ಕಾಲೇಜು ಪ್ರಾರಂಭ : ಉದ್ಯೋಗಸ್ಥರಿಗೆ ಸುವರ್ಣಾವಕಾಶ

ತುಮಕೂರು : ಕಾಲೇಜು ಶಿಕ್ಷಣ ಇಲಾಖೆಯು ಜಿಲ್ಲೆಯ ಉದ್ಯೋಗಸ್ಥರು ಸಂಜೆಯ ಅವಧಿಯಲ್ಲಿ ತಮ್ಮ ಪದವಿ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ನಗರದ ರೈಲ್ವೆ ಸ್ಟೇಶನ್ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡದಲ್ಲಿ ಸರಕಾರಿ ಸಂಜೆ ಪದವಿ ಕಾಲೇಜು ಪ್ರಾರಂಭಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

ಪದವಿ ತರಗತಿಗಳನ್ನು ಸಂಜೆ 5 ರಿಂದ ರಾತ್ರಿ 9 ಗಂಟೆಯವರೆಗೆ ನಡೆಸಲಾಗುವುದು. ಇಲ್ಲಿ ಬಿ.ಸಿ.ಎ(BCA)ಮತ್ತು ಬಿ.ಕಾಂ (BCom) ಪದವಿ ಕೋರ್ಸ್‍ಗಳು ನಡೆಯುತ್ತಿದ್ದು, ಆಸಕ್ತರು ಈ ಸಂಜೆ ಕಾಲೇಜಿನಲ್ಲಿ ನಡೆಸಲಾಗುತ್ತಿರುವ ಪದವಿಗಳಿಗೆ ಆನ್‍ಲೈನ್/ಆಫ್‍ಲೈನ್ ಮೂಲಕ ಪ್ರವೇಶಾತಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಜಾಲ ತಾಣ: https://gfgc.kar.nic.in/tumakuru/ ಅಥವಾ ನೀಲಕಂಠಪ್ಪ(ಮೊ.ಸಂ. 9449238178) ಇವರನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *