ಎಕ್ಸ್‍ಪ್ರೆಸ್ ಕೆನಾಲ್- ಕಾನೂನು ಹೋರಾಟ- ಸೊಗಡು ಶಿವಣ್ಣ

ತುಮಕೂರು : ತುಮಕೂರು ಜಿಲ್ಲೆಯ ಜನತೆಯ ಕೋರಿಕೆಯ ಮೇರೆಗೆ ಸರ್ಕಾರ ಈ ಯೋಜನೆಯನ್ನು ಕೂಡಲೇ ಕೈಬಿಡಬೇಕು. ಇಲ್ಲವಾದರೆ ಜಿಲ್ಲೆಯ ಅಳಿವು ಉಳಿವಿನ ಪ್ರಶ್ನೆಯಾಗಿರುವ ಈ ಯೋಜನೆಯ ವಿರುದ್ಧ ಹೋರಾಟವನ್ನು ಕಾನೂನಾತ್ಮಕವಾಗಿ ನ್ಯಾಯಾಲಯದಲ್ಲಿ ಮುಂದುವರೆಸುತ್ತೇವೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದರು.

ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿಗೆ ಪೂರ್ವ ನಿಯೋಜಿತ ಯೋಜನೆಯಂತೆ 3 ಟಿ.ಎಂ.ಸಿ. ನೀರು ಹರಿಸಲು ನಮಗೆ ಯಾವುದೇ ತಂಟೆ ತಕರಾರು ಇಲ್ಲ. ಆದರೆ ಹಾಲಿ ಆಧುನೀಕರಣಗೊಂಡಿರುವ ನಾಲೆಯಲ್ಲಿ ವಿನ್ಯಾಸಿತ 527 ಕ್ಯೂಸೆಕ್ಸ್ ನೀರನ್ನು ಅಂದರೆ ದಿನಕ್ಕೆ 45 ರಿಂದ 50 ಎಂ.ಸಿ.ಎಫ್.ಟಿ. ನೀರನ್ನು 60ರಿಂದ 65 ದಿನಗಳ ಕಾಲ ನಿರಂತರವಾಗಿ ಹರಿಸಿದರೆ, ನಿಗಧಿತ 3 ಟಿ.ಎಂ.ಸಿ. ಹರಿಯುತ್ತದೆ. ಹಾಗಿದ್ದರೂ ಸಹ ಟಿ.ಬಿ.ಸಿ. 70 ಕಿ.ಮೀ. ಯಿಂದ 167ನೇ ಕಿ.ಮೀ.ಗೆ ಎಕ್ಸ್‍ಪ್ರೆಸ್ ಪೈಪ್‍ಲೈನ್ ಲಿಂಕ್ ಕೆನಾಲ್ ಯೋಜನೆ ಅಂದಾಜು ಮೊತ್ತ 986 ಕೋಟಿ ವೆಚ್ಚದಲ್ಲಿ ಅನಗತ್ಯ ಮತ್ತು ಅನಾವಶ್ಯಕ ಯೋಜನೆ ಮಾಡುತ್ತಿರುವುದಾದರೂ ಏಕೆ? ಸಾವಿರಾರು ಕೋಟಿ ರೂ.ಗಳ ಅನಗತ್ಯ ಯೋಜನೆ ಮಾಡಿಸಿ, ನೂರಾರು ಕೋಟಿ ಸಾರ್ವಜನಿಕರ ತೆರಿಗೆ ಹಣ ಲೂಟಿ ಮಾಡುವ ಉದ್ಧೇಶವೇ? ಅಥವಾ ಆಡಳಿತ ಮತ್ತು ಅಧಿಕಾರಿ ವರ್ಗ ಟಿ.ಬಿ.ಸಿ. ಕೊನೆಯ ಭಾಗಕ್ಕೆ ನೀರು ಹರಿಸುವ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಉದ್ಧೇಶವಿರಬಹುದೇ? ಎಂದು ಪ್ರಶಿಸಿದರು.

ಟಿ.ಬಿ.ಸಿ. ನಾಲೆಯ ಮೊದಲನೇ ಮತ್ತು ಎರಡನೇ ಹಂತ ಅಂದರೆ 0 ಕಿ.ಮೀ ಯಿಂದ 70 ಕಿ.ಮೀ ಮತ್ತು 70 ಕಿ.ಮೀ ರಿಂದ 165 ಕಿ.ಮೀ. ಆಧುನೀಕರಣಗೊಳಿಸುವಾಗ ತಾವು ಅಂದರೆ ತಾಂತ್ರಿಕ ವರ್ಗ ಟಿ.ಬಿ.ಸಿ 0 ಕಿ.ಮೀ. ಯಿಂದ 165 ಕಿ.ಮೀ.ವರೆಗೆ ನಾಲೆ ಆಧುನೀಕರಣಗೊಳಿಸಿದರೆ ನಿಗಧಿತ ಪ್ರಮಾಣದ ನೀರನ್ನು ಕುಣಿಗಲ್ ತಾಲ್ಲೂಕಿಗೆ ಹರಿಸಬಹುದಾಗಿದೆ ಎಂದು ಎರಡು ಹಂತದ ಯೋಜನೆಗಳ ಅನುಮೋದನೆ ಪಡೆಯುವಾಗ ವರದಿಯಲ್ಲಿ ಹೇಳಿರುವುದು ಸುಳ್ಳೇ?
ಯಾವುದೇ ರೀತಿಯಲ್ಲಿ ನೋಡಿದರೂ ಈ ಎಕ್ಸ್‍ಪ್ರೆಸ್ ಪೈಪ್‍ಲೈನ್ ಲಿಂಕ್ ಕೆನಾಲ್ ಎನ್ನುವ ಅನಗತ್ಯ ಮತ್ತು ಅನಾವಶ್ಯಕ ಯೋಜನೆ ಎಂಬುದು ಸಾಮಾನ್ಯ ಜನರಿಗೂ ಅರ್ಥವಾಗುತ್ತಿರುವಾಗ. ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಿ ಹಣ ಮಾಡುವ ಈ ಯೋಜನೆಯ ವಿರುದ್ಧ ನಾವು ಹೋರಾಟ ಮಾಡುವುದರಲ್ಲಿ ತಪ್ಪೇನಿದೆ? ಎಂದುರು.

ಸರ್ಕಾರ ಮತ್ತು ನೀರಾವರಿ ಇಲಾಖೆ ಎಚ್ಚೆತ್ತುಕೊಂಡು ಈ ಅನಗತ್ಯ, ಅನಾವಶ್ಯಕ ಯೋಜನೆ ಕೈಬಿಡದಿದ್ದರೆ ಜಿಲ್ಲೆಯ ಜನತೆ ಎಲ್ಲಾ ರೀತಿಯ ಹೋರಾಟ ಮಾಡುವುದು ಅನಿವಾರ್ಯವಾಗಿರುತ್ತದೆ. ಕೂಡಲೇ ಈ ಯೋಜನೆಯನ್ನು ನಿಲ್ಲಿಸಲು ಜಿಲ್ಲೆಯ ಜನರಿಂದ ಸರ್ಕಾರಕ್ಕೆ ಈ ಪತ್ರಿಕಾಗೋಷ್ಠಿ ಮೂಲಕ ಮನವಿ ಮಾಡುತ್ತೇನೆ ಎಂದರು.

ಕುಣಿಗಲ್ ಮತ್ತು ಮಾಗಡಿ ತಾಲ್ಲೂಕು ಕುಡಿಯುವ ನೀರು ಯೋಜನೆಗಳಿಗೆ ನೀರನ್ನು ಖಾತರಿಪಡಿಸುವ ಎಕ್ಸ್‍ಪ್ರೆಸ್ ಪೈಪ್‍ಲೈನ್ ಲಿಂಕ್ ಕೆನಾಲ್ ಎನ್ನುವುದು ಅಂದಾಜು ಮೊತ್ತ 986ಕೋಟಿ ರೂ.ಗಳ ಅನಾವಶ್ಯಕ ಮತ್ತು ಅನಗತ್ಯ ಯೋಜನೆಯ ಕಾಮಗಾರಿ ಪ್ರಾರಂಭಿಸಿದ್ದು, ಈ ಪೈಪ್‍ಲೈನ್ ನಾಲೆಯ ಉದ್ದ 35.40 ಕಿ.ಮೀ ಇರುವುದು ಸರಿಯಷ್ಟೇ. ಸದರಿ ಪೈಪ್‍ಲೈನ್ ಗುಬ್ಬಿ ವಿಧಾನಸಭಾ ಕ್ಷೇತ್ರ ಮತ್ತು ತುರುವೇಕೆರೆ ವಿಧಾನಸಭಾ ಕ್ಷೇತ್ರದ ಸುಮಾರು ಹಳ್ಳಿಗಳ ರೈತರ ಜಮೀನು, ಜಿಲ್ಲಾ ಪಂಚಾಯತ್ ಮತ್ತು ಲೋಕೋಪಯೋಗಿ ಇಲಾಖೆಗೆ ಒಳಪಡುವ ರಸ್ತೆಗಳು ಮತ್ತು ಕೆರೆಗಳಲ್ಲಿ ಹಾದು ಹೋಗುತ್ತಿದ್ದು, ಕಾಮಗಾರಿಗಾಗಿ ರೈತರ ಜಮೀನು ಪಡೆಯಲು ಐಚಿಟಿಜ ಂquesಣioಟಿ ಂಛಿಣ 2013ರ ಪ್ರಕಾರ ಯಾವುದೇ ರೀತಿಯ ನಡವಳಿಕೆ ಪ್ರಕ್ರಿಯೆ ಮಾಡಿರುವುದಿಲ್ಲ ಮತ್ತು ಸಂಬಂಧಪಟ್ಟ ಇಲಾಖೆಗಳಿಂದ ರಸ್ತೆಯಲ್ಲಿ ಕಾಮಗಾರಿ ನಡೆಸಲು ರಸ್ತೆಯ ಹಸ್ತಾಂತರ ಸಹ ಮಾಡಿಕೊಂಡಿಲ್ಲ. ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದಲೂ ಸಹ ಅನುಮತಿ ಪಡೆದಿಲ್ಲ. ಹೀಗಿದ್ದರೂ ಸಹ ದಬ್ಬಾಳಿಕೆಯಿಂದ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾಮಗಾರಿಗಾಗಿ ರೈತರ ಜಮೀನುಗಳಲ್ಲಿ ಅನಧಿಕೃತವಾಗಿ ಪ್ರವೇಶ ಮಾಡಿ, ಕಾನೂನು ಬಾಹಿರವಾಗಿ ಅಡಿಕೆ, ತೆಂಗು ಗಿಡಗಳನ್ನು ಕಡಿದು ಹಾಕಿದ್ದಾರೆ ಮತ್ತು ರಸ್ತೆ ಅಗೆದು ಸಾರ್ವಜನಿಕರಿಗೆ ತುಂಬಾ ತೊಂದರೆ ಮಾಡಿದ್ದಾರೆ ಮತ್ತು ಕೆರೆಗಳಲ್ಲಿಯೂ ಸಹ ನಾಲಾ ಕಾಮಗಾರಿಯನ್ನು ಅನಧಿಕೃತವಾಗಿ ಹಾಗೂ ಕಾನೂನುಬಾಹಿರವಾಗಿ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ ಎಂದರು.

ಈ ರೀತಿ ದರ್ಪ ದಬ್ಬಾಳಿಕೆಯಿಂದ ಕಾಮಗಾರಿ ಕೈಗೊಂಡಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಸ್ವಯಂಪ್ರೇರಿತವಾಗಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಪ್ರಕರಣವನ್ನು ದಾಖಲಿಸಿ ಬಂಧಿಸಬಾರದೇಕೆ? ಇವರು ಕಾಮಗಾರಿ ಮುಂದುವರೆಸಿ ಇವರ ದರ್ಪ ದಬ್ಬಾಳಿಕೆಗೆ ಹೆದರಿ ಯಾವುದೇ ರೈತರು ಅಥವಾ ನಾಗರಿಕರು ಆತ್ಮಹತ್ಯೆ ಮಾಡಿಕೊಂಡರೆ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರೇ ನೇರ ಹೊಣೆಗಾರರಾಗಿರುತ್ತಾರೆ.
ಕುಣಿಗಲ್ ತಾಲ್ಲೂಕು ನಿಗಧಿಪಡಿಸಿರುವ 3 ಟಿಎಂಸಿ ನೀರನ್ನು ಇದುವರೆವಿಗೂ ಹರಿಸಿಲ್ಲ ಎಂದು ದಾರಿ ತಪ್ಪಿಸುವ ಹೇಳಿಕೆ ಕೊಡುತ್ತಿರುವವರು ಮೊದಲು ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ ಎಂದರ.

ಟಿ.ಬಿ.ಸಿ. ನಾಲೆಯ 167ನೇ ಕಿ.ಮೀ. ನಂತರ ಅಂದರೆ ವಿತರಣಾ ನಾಲೆ-26 ಕಿ.ಮೀ ಯಿಂದ ಮುಂದೆ ಅಚ್ಚುಕಟ್ಟು ಪ್ರದೇಶದ ನೋಟೀಫಿಕೇಷನ್ ಆಗಿದೆಯೇ?, ಕುಡಿಯುವ ನೀರಿನ ಯೋಜನೆಗಳಾದ ಕುಣಿಗಲ್ ಪಟ್ಟಣ ಮತ್ತು ಮಾಗಡಿ ತಾಲ್ಲೂಕು ಶ್ರೀರಂಗ ಕುಡಿಯುವ ನೀರಿಗೆ ಕೆರೆ ತುಂಬಿಸುವ ಯೋಜನೆಗಳಿಗೆ ನಿಗಧಿಯಾಗಿರುವ ನೀರಿನ ಪ್ರಮಾಣ ಎಷ್ಟು….? ಮತ್ತು ಶ್ರೀರಂಗ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ, ಪೈಪ್‍ಲೈನ್ ಮತ್ತು ಇನ್ನಿತರೆ ಕಾಮಗಾರಿ ಪೂರ್ಣಗೊಂಡಿದೆಯೇ? ಟಿಬಿಸಿ ನಾಲೆಯ 185ನೇ ಕಿ.ಮೀ.ನಿಂದ ನಾಲೆಯ ಕೊನೆ ಅಂದರೆ 228ಕಿ.ಮೀ. ತಂಗಚಿಹಳ್ಳಿ ವ್ಯಾಲಿಯವರೆಗೆ ನಾಲಾ ಕಾಮಗಾರಿ ಪೂರ್ಣಗೊಂಡಿದೆಯೇ? ಈ ಮೇಲ್ಕಂಡ ಎಲ್ಲಾ ಅಂಶಗಳ ಅರಿವೇ ಇಲ್ಲದೆ ಸುಖಾಸುಮ್ಮನೆ ನಮ್ಮ ಪಾಲಿನ 3 ಟಿಎಂಸಿ ನೀರನ್ನು ಹರಿಸಿಲ್ಲ ಎಂದು ವ್ಯರ್ಥ ಆರೋಪ ಮಾಡುವುದು ಎಷ್ಟು ಸರಿ….? ಎಂದರು.

4) ಈಗ ರಿ. ಮಾಡೆಲಿಂಗ್ ಆಗಿರುವ ಟಿಬಿಸಿ ನಾಲೆಯಲ್ಲಿ ಕುಣಿಗಲ್ ತಾಲ್ಲೂಕಿಗೆ ನಿಗಧಿಯಾಗಿರುವ 3 ಟಿಎಂಸಿ ನೀರನ್ನು ಹರಿಸಲು ಸಾಧ್ಯವೇ ಇಲ್ಲ ಎಂಬುದಾಗಿ ನಿಖರವಾದ ವರದಿ ನೀಡಲು ಸಂಬಂಧಿಸಿದ ತಾಂತ್ರಿಕ ಇಲಾಖೆ ತಯಾರಿದೆಯೇ?
5) ಕುಣಿಗಲ್ ಮತ್ತು ಮಾಗಡಿ ತಾಲ್ಲೂಕು ಕುಡಿಯುವ ನೀರು ಖಾತರಿಪಡಿಸುವ ಯೋಜನೆ ಇದಾಗಿದ್ದರೆ ತುಮಕೂರು ಜಿಲ್ಲೆಗೂ ಸಹ ನಿಗಧಿಯಾಗಿರುವ 25.32 ಟಿಎಂಸಿ ನೀರನ್ನು ಇದುವರೆವಿಗೂ ಹರಿಸಲು ಸಾಧ್ಯವಾಗಿಲ್ಲ. ಹಾಗಾಗಿ ನಮ್ಮ ಜಿಲ್ಲೆಯ ಪಾಲಿನ ನೀರನ್ನು ಖಾತರಿಪಡಿಸಲು ನಮಗೂ ಸಹ ತುಮಕೂರು ಜಿಲ್ಲೆಗೆ ನಿಗಧಿತ ನೀರು ಹರಿಸುವುದನ್ನು ಖಾತರಿಪಡಿಸಲು ಮತ್ತೊಂದು ಎಕ್ಸ್‍ಪ್ರೆಸ್ ಪೈಪ್‍ಲೈನ್ ಯೋಜನೆಯನ್ನು ಮಾಡಬಹುದಲ್ಲವೇ?
ಮೇಲ್ಕಂಡ ವಿಷಯಗಳನ್ನು ಪರಿಗಣಿಸಿ ತಾಂತ್ರಿಕವಾಗಿ ಕಾರ್ಯಸಾಧುವಲ್ಲದ, ರಾಜಕೀಯ ಪ್ರೇರಿತ ಹಾಗೂ ಭ್ರಷ್ಟಹಿತಾಸಕ್ತಿಯಿಂದ ಕೂಡಿರುವ ಈ ಅನಾವಶ್ಯಕ ಮತ್ತು ಅನಗತ್ಯ ಯೋಜನೆಯನ್ನು ರದ್ದುಪಡಿಸಿ, ಸದರಿ ಯೋಜನೆಯ ಹಣದಿಂದ ಟಿಬಿಸಿ ನಾಲೆಯ 167 ಕಿ.ಮೀಯಿಂದ ನಾಲೆಯ ಕೊನೆ ಅಂದರೆ 228ನೇ ಕಿ.ಮೀವರೆಗೆ ಬಾಕಿ ಇರುವ ಕಾಮಗಾರಿಯನ್ನು ಪೂರ್ಣಗೊಳಿಸಲು ವಿನಿಯೋಗಿಸಲು ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಹೇಳಿದರು.

ತುಮಕೂರು ಜಿಲ್ಲೆಯ ಜನತೆಯ ಕೋರಿಕೆಯ ಮೇರೆಗೆ ಸರ್ಕಾರ ಈ ಯೋಜನೆಯನ್ನು ಕೂಡಲೇ ಕೈಬಿಡಬೇಕು. ಇಲ್ಲವಾದರೆ ಜಿಲ್ಲೆಯ ಅಳಿವು ಉಳಿವಿನ ಪ್ರಶ್ನೆಯಾಗಿರುವ ಈ ಯೋಜನೆಯ ವಿರುದ್ಧ ಹೋರಾಟವನ್ನು ಕಾನೂನಾತ್ಮಕವಾಗಿ ನ್ಯಾಯಾಲಯದಲ್ಲಿ ಮುಂದುವರೆಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣನವರು ಮತ್ತೊಂದು ಪ್ರಮುಖವಾದ ವಿಚಾರ ಪ್ರಸ್ತಾವನೆ ಮಾಡಿ ಮಾತನಾಡುತ್ತಾ, ಹೇಮಾವತಿ ಎಕ್ಸ್‍ಪ್ರೆಸ್ ಪೈಪ್ ಲೈನ್ ಲಿಂಕ್ ಕೆನಾಲ್ ಯೋಜನೆ ಅನಾವಶ್ಯಕ ಹಾಗೂ ಅನಗತ್ಯ ಯೋಜನೆಯಾಗಿದ್ದು, ಸಾಧಕಭಾದಕಗಳ ಬಗ್ಗೆ ಪರಿಶೀಲಿಸಿ ವರದಿ ನೀಡಲು ಸರ್ಕಾರದಿಂದ ರಚಿಸಿರುವ ತಾಂತ್ರಿಕ ತಜ್ಞರ ಸಮಿತಿ ಮಾಡಬೇಕಿದೆ. ತುಮಕೂರು ಶಾಖಾ ನಾಲೆಯಲ್ಲಿ ಹಾಲಿ ಆಧುನೀಕರಣಗೊಂಡಿರುವ ವಿನ್ಯಾಸಿತವಾಗಿರುವ ಕುಣಿಗಲ್ ತಾಲ್ಲೂಕಿಗೆ ನಿಗಧಿಯಾಗಿರುವ ಟಿ ಎಂ ಸಿ ಪ್ರಮಾಣದ ನೀರನ್ನು ಹರಿಸಲು ಸಾಧ್ಯವೇ ಅಥವಾ ಸಾಧ್ಯವಿಲ್ಲವೇ ಎಂಬುದರ ಬಗ್ಗೆಯೂ ಸಹ ತಜ್ಞರ ಸಮಿತಿ ಪರಿಶೀಲಿಸಿ ವಿಸ್ತೃತ , ವಿಸ್ತಾರವಾದ ವರದಿ ಸಲ್ಲಿಸಲಿ ಎಂದಿದ್ದಾರೆ.
ಈ ಬಗ್ಗೆ ಸಮಗ್ರ ವರದಿ ನೀಡಲು ಸಾಧ್ಯವಿಲ್ಲ ಎನ್ನುವುದಾದರೆ ತಾಂತ್ರಿಕವಾಗಿ ಮತ್ತು ಆಡಳಿತಾತ್ಮಕವಾಗಿ ಆಗಿರುವ ಲೋಪದೋಷಗಳೇನು ಎಂಬುದರ ಬಗ್ಗೆಯೂ ಸಹ ಸವಿಸ್ತಾರವಾದ ವರದಿ ನೀಡಲಿ. ತದನಂತರ ಎಕ್ಸ್‍ಪ್ರೆಸ್ ಪೈಪ್ ಲೈನ್ ಲಿಂಕ್ ಕೆನಾಲ್ ಯೋಜನೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿ ಎಂದರು.
ಇಲ್ಲವೇ ಏಕಾಏಕಿ ದಬ್ಬಾಳಿಕೆಯ ಮುಖಾಂತರ ತಾಂತ್ರಿಕ ಇಲಾಖೆ ಮತ್ತು ಗುತ್ತಿಗೆದಾರರು ಕೆಲಸ ಪ್ರಾರಂಭಿಸಿದರೆ ಸಾರ್ವಜನಿಕ ಹಿತದೃಷ್ಟಿಯಿಂದ ನಾವೂ ಸಹ ತುಮಕೂರು ಜಿಲ್ಲೆಯ ರೈತರು, ನಾಗರೀಕರು, ಜನಜಾನುವಾರು, ಪ್ರಾಣಿಪಕ್ಷಿಗಳ ಕುಡಿಯುವ ನೀರಿಗಾಗಿ ಉಗ್ರ ಹೋರಾಟ ಮಾಡಲು ಹಣಿಯಾಗಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನು ರಾಜ್ಯ ಸರ್ಕಾರ , ಹೇಮಾವತಿ ನಾಲಾ ವಲಯದ ಇಲಾಖೆ ಮತ್ತು ಗುತ್ತಿಗೆದಾರರಿಗೆ ಸೊಗಡು ಶಿವಣ್ಣ ನೀಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ತುಮಕೂರು-ಕೊರಟಗೆರೆ ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ, ಮಹಾನಗರಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ, ಪ್ರಮುಖವಾದ ಕೆ.ಹರೀಶ್, ತರಕಾರಿ ಮಹೇಶ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *