ತುಮಕೂರು : ತುಮಕೂರಿನ ಕೆ.ಆರ್. ಬಡಾವಣೆಯ ಶ್ರೀಮತಿ ಶಾಂತಮ್ಮ (82 ವರ್ಷ) ನವೆಂಬರ್ 16ರಂದು ನಿಧನ ಹೊಂದಿದ್ದು, ಮೃತರ ಕಣ್ಣುಗಳನ್ನು ಅವರ ಕುಟುಂಬ ವರ್ಗ ನೇತ್ರದಾನ ಮಾಡುವುದರ ಮೂಲಕ ಇಬ್ಬರ ದೃಷ್ಠಿಗೆ ಶಾಂತಮ್ಮ ಕಾರಣರಾಗಿದ್ದಾರೆ.
ತುಮಕೂರು ಜನರಲ್ ಆಸ್ಪತ್ರೆಯ ನೇತ್ರತಜ್ಞರಾದ ಡಾ|| ದಿನೇಶ್‍ಕುಮಾರ್ ಮತ್ತು ಸಹಾಯಕರಾದ ಮನೋಜ್ ಇವರ ಸಹಕಾರದಿಂದ ಮೃತರಿಂದ ಎರಡು ನೇತ್ರಗಳನ್ನು ತೆಗೆದರು. ಈ ಎರಡು ನೇತ್ರಗಳನ್ನು ಎನ್.ಎಸ್.ಐ ಫೌಂಡೇಶನ್ ಮುಖ್ಯಸ್ಥರಾದ ನಾಗದೀಶ್ ಎನ್.ಎಸ್. ರವರ ಸಹಕಾರದಿಂದ ಬೆಂಗಳೂರಿನ ಲಯನ್ಸ್ ಇಂಟರ್‍ನ್ಯಾಷನಲ್ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಇದರಿಂದ ಇಬ್ಬರು ದೃಷ್ಠಿಹೀನರಿಗೆ ದೃಷ್ಠಿ ಕೊಟ್ಟಂತಾಗಿ ಪಡೆದ ಭಾಗ್ಯವಂತರು ಫೌಂಡೇಷನ್ನಿನ ಸದಸ್ಯರುಗಳು ಮೃತರಿಗೆ ಶಾಂತಿ ಸಿಗಲೆಂದು ಹಾಗೂ ಅವರ ಕುಟುಂಬದವರಿಗೆ ದುಃಖ ಸಹಿಸುವಂತಹ ಶಕ್ತಿ ದೇವರು ಕರುಣಿಸಲೆಂದು ಪ್ರಾರ್ಥಿಸುತ್ತಾರೆ.
ಇದೇ ರೀತಿ ತುಮಕೂರು ಜಿಲ್ಲೆಯಲ್ಲಿ ನೇತ್ರದಾನ ಮಾಡುವವರು ನಾಗದೀಶ್ ಎನ್.ಎಸ್. ಮುಖ್ಯಸ್ಥರು, ಎನ್.ಎಸ್. ಐ ಫೌಂಡೇಶನ್, ಎನ್.ಎಸ್. ಪೈಂಟ್ಸ್ & ಹಾರ್ಡ್‍ವೇರ್, ಜೆ.ಸಿ. ರಸ್ತೆ, ಮಂಡಿಪೇಟೆ ಸರ್ಕಲ್, ತುಮಕೂರು ಮೊ :+919590066066 ಸಂಪರ್ಕಿಸಬೇಕೆಂದು ಕೋರಲಾಗಿದೆ.