ತುಮಕೂರು: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ನ್ಯಾಯಪತ್ರ’ ಎಂಬ ಹೆಸರಿನಲ್ಲಿ ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಪಂಚ ಗ್ಯಾರಂಟಿ ಸೇರಿದಂತೆ 25 ಭರವಸೆಗಳ ಮುಖ್ಯಾಂಶಗಳನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಪ್ರಮುಖ ಅಂಶಗಳು ಈ ಕೆಳಕಂಡಂತೆ ವಿವರಿಸಿದರು. ಯುವ ನ್ಯಾಯ, ನಾರಿ ನ್ಯಾಯ, ಕಿಸಾನ್ ನ್ಯಾಯ, ಶ್ರಮಿಕ ನ್ಯಾಯ ಮತ್ತು ಹಿಸ್ಸೇದಾರಿ ನ್ಯಾಯ ಎಂಬ ಪಂಚ ನ್ಯಾಯದ ಅಡಿಯಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳನ್ನು ಘೋಷಿಸಿದೆ. ದೇಶದಾದ್ಯಂತ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯನ್ನು ಕೈಗೊಳ್ಳುವುದು. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯಗಳ ಮೀಸಲಾತಿಯನ್ನು ಶೇ.50ಕ್ಕೆ ಹೆಚ್ಚಿಸಲು ಕಾನೂನು ತಿದ್ದುಪಡಿ ತರುವುದು ಹಾಗೂ ಎಲ್ಲಾ ಜಾತಿ ಮತ್ತು ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ. 10ರಷ್ಟು ಮೀಸಲಾತಿ ಒದಗಿಸಲಾಗುವುದು. ಡಿಪೆÇ್ಲಮಾ ಅಥವಾ ಪದವಿ ಹೊಂದಿರುವ 25 ವರ್ಷದೊಳಗಿನವರಿಗೆ ಒಂದು ವರ್ಷದ ಅಪ್ರೆಂಟಿಸ್ಕಿಪ್ ಒದಗಿಸಲು ಕಾಯ್ದೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ (ಒಖಕ) ಕಾನೂನು ಖಾತರಿ ನೀಡುವುದು, ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ರಾಜ್ಯ ಸ್ಥಾನಮಾನವನ್ನು ತಕ್ಷಣವೇ ಮರುಸ್ಥಾಪಿಸುವುದು. ಅಗ್ನಿಪಥ ಯೋಜನೆಯನ್ನು ರದ್ದುಗೊಳಿಸುವುದು ಎಂದರು. ಕಾರ್ಮಿಕರ ರಾಷ್ಟ್ರೀಯ ಕನಿಷ್ಠ ವೇತನ ದಿನಕ್ಕೆ ರೂ. 400ಕ್ಕೆ ಏರಿಕೆ, ಕೇಂದ್ರ ಸರ್ಕಾರದಲ್ಲಿ ವಿವಿಧ ಹಂತಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ ಸುಮಾರು 30 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು, ಸರ್ಕಾರಿ ಉದ್ಯೋಗಗಳು ಹಾಗೂ ಪರೀಕ್ಷೆಗಳ ಅರ್ಜಿ ಶುಲ್ಕಗಳ ರದ್ದು ಮಾಡಲಾಗುವುದು ಸೇರಿದಂತೆ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದಡಿ (ಎನ್ಎಸ್ಎಪಿ) ಹಿರಿಯ ನಾಗರೀಕರು, ವಿಧವೆಯರು ಮತಿತು ಅಂಗವಿಕಲ ವ್ಯಕ್ತಿಗಳ ಪಿಂಚಣಿಗೆ ಕೇಂದ್ರವು ನೀಡುವ ನೆರವಿನ ಮೊತ್ತವನ್ನು ರೂ. 1000ಕ್ಕೆ ಏರಿಸಲಾಗುವುದು, 2025 ರಿಂದ ಹೊಸದಾಗಿ ಸೃಜಿಸುವ ಕೇಂದ್ರ ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ, 21 ವರ್ಷ ಒಳಗಿನ ಪ್ರತಿಭಾವಂತ ಮತ್ತು ಉದಯೋನ್ಮುಖ ಕ್ರೀಡಾಪಟುಗಳಿಗೆ ತಿಂಗಳಿಗೆ ರೂ. 10000 ಕ್ರೀಡಾ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದರು.
ಇಡೀ ದೇಶಕ್ಕೆ ಕಾಂಗ್ರೆಸ್ ಪ್ರನಾಳಿಕೆ ಬಿಡುಗಡೆ ಮಾಡಿದೆ. ಪ್ರನಾಳಿಕೆಯನ್ನ ನ್ಯಾಯ ಪತ್ರ ಅಂತ ಘೋಷಣೆ ಮಾಡಲಾಗಿದೆ. 10 ವರ್ಷದಲ್ಲಿ ಬಿಜೆಪಿ ಮಹಿಳಾ, ಶೈಕ್ಷಣಿಕ, ಯುವ, ಶ್ರಮಿಕರಿಗೆ, ರೈತರಿಗೆ, ಪಾಲುದಾರಿಕೆಯ ನ್ಯಾಯದಲ್ಲಿ ಅನ್ಯಾಯ ಮಾಡಿದು ಇದಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ನ್ಯಾಯ ಒದಗಿಸುತ್ತವೆ ಎಂದರು. ನ್ಯಾಯ ಪತ್ರದಲ್ಲಿ ಸಾಮಾಜಿಕ, ಧಾರ್ಮಿಕ, ಲಿಂಗ ನ್ಯಾಯ, ಒದಗಿಸುತ್ತೇವೆ ಘೋಷಣೆ ಮಾಡಲಾಗಿದೆ, ಸೋಷಿಯೋ ಎಕನಾಮಿಕ್ ಹಾಗೂ ಜಾತಿ ಗಣತಿ ಮಾಡುತ್ತೇವೆ. ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಲಾಗುವುದು. ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ 30 ಲಕ್ಷ ಉದ್ಯೋಗ ನೀಡುತ್ತೇವೆ ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಉದ್ಯೋಗ ಕೊಡುತ್ತೇವೆ, ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಲು ಸೂಕ್ತ ಕ್ರಮ ವಹಿಸಲಾಗುವುದು ಎಂದರು.
ಯುವಕರಿಗೆ ಐದು ಸಾವಿರ ಆರಂಭಿಕ ಹಣ ಜಮಾವಣೆ ಮಾಡಿ ಆದ್ಯತೆಯ ಮೇರೆಗೆ ಉದ್ಯೋಗ ಸೃಷ್ಟಿಸಿ 30ಲಕ್ಷ ಉದ್ಯೋಗ ನೀಡಲು ಐದು ಸಾವಿರ ಕೋಟಿ. ಪ್ರತಿ ಜಿಲ್ಲೆಗೆ ಮೀಸಲಿಡಲಾಗುವುದು ಎಂದರು. ಆಶಾ ಅಂಗನವಾಡಿ ಕಾರ್ಯಕರ್ತರು ಗೆ ಒತ್ತಾಯ ಮೇರೆಗೆ ಬಿಸಿಯೂಟ ಸಹಾಯಕರಿಗೂ ಕೇಂದ್ರಸರ್ಕಾರ ವೇತನದಲ್ಲಿ%2ರಷ್ಟು ಏರಿಕೆ ಕಾನೂನು ಹಕ್ಕುಗಳ ಸಹಾಯಕರಿಗೆ ಎಲ್ಲಾ ಗ್ರಾ.ಪಂ ಗಳಿಂದ ಕಾನೂನು ಅರಿವು ಮೂಡಿಸುವ ಯೋಜನೆಯನ್ನು ಜಾರಿ ಮಾಡಲಾಗುವುದು ಎಂದರು.
ರೈತರಿಗೆ ವಿರುದ್ಧ ಕಾನೂನುಗಳು ಇದ್ದು ಇದರ ವಿರುದ್ಧ ರೈತರ ಪ್ರತಿಭಟಿಸಿದರು ಪುರಸ್ಕರಿಸಲಿಲ್ಲ ರೈತರ ಬೇಡಿಕೆ ಇಡೇರಿಲ್ಲ 300 ಕ್ಕೂ ರೈತರ ಸಾಯಿಸಿದರು, ಸ್ವಾಮಿ ನಾಥನ್ ವರದಿ ಜಾರಿಯಾಗಲಿಲ್ಲ ಪ್ರತಿ ಬೆಳೆ ಬೆಂಬಲ ಬೆಲೆ ನೀಡಬೇಕೆಂದು ಶಿಫಾರಸು ಮಾಡಲಾಯಿತು. ಆದರೆ ಬೇಡಿಕೆ ಇಡೇರಿಲ್ಲ ನಾವು ಅಧಿಕಾರಕ್ಕೆ ಬಂದರೆ ಅದನ್ನ ಮಾಡುತ್ತೇವೆ ಎಂದರು.
ಅನೇಕ ಕೃಷಿ ಸಂಬಂಧಿಸಿದಂತೆ ಮಾಡಲಾಗಿರುವ ಜಿಎಸ್ ಟಿಯನ್ನು ವಜಾ ಮಾಡುತ್ತೇವೆ, ಡಬ್ಲ್ಯೂ ಟಿಸಿ ರಫ್ತು ಮಾಡುವ ಆಮದು ಮಾಡುವ ಹೊಸ ನೀತಿ ಜಾರಿಗೊಳಿಸಲಾಗುವುದು. ರೈತರ ಸಾಲ ಮನ್ನಾವನ್ನ ಈ ಹಿಂದೆ ಕಾಂಗ್ರೆಸ್ ಸರ್ಕಾರ 72 ಸಾವಿರ ಕೋಟಿ. ಮನ್ನಾ ಮಾಡಲಾಯಿತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಾಲ ಮನ್ನಾ ಮಾಡಿದೆ. ಆದರೆ ಇವರೆಗೂ ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಲಿಲ್ಲ. ನಾವು ಅಧಿಕಾರಕ್ಕೆ ಬಂದರೆ ಕಾಲಕ್ಕೆ ತಕ್ಕಂತೆ ಕೃಷಿ ಸಾಲ ಮನ್ನಾ ಆಯೋಗ ರಚನೆ ಮಾಡಿ ರೈತರ ಸಾಲ ಮನ್ನಾ ಮಾಡಲಾಗುವುದು ರೈತರ ಬೆಳೆಗೆ ಕ್ರಾಪ್ ಇನ್ಸುರೇನ್ ಗೆ ಗ್ಯಾರಂಟಿ ಮೂಲಕ ಬೆಳೆ ಹಾನಿ ವರದಿ ಪರಿಗಣಿಸಿ ಮೊವತ್ತು ದಿನಗಳೊಳಗಾಗಿ ರೈತನ ಅಕೌಂಟ್ ಗೆ ಸಹಾಯಧನ ಬಿಡುಗಡೆ ಮಾಡುತ್ತೇವೆ ಎಂದರು ಬರಗಾಲ ಸಮಯದಲ್ಲಿ ಇದು ಉಪಯೋಗ ವಂತೆ ಮಾಡುತ್ತೇವೆ. ಜಮ್ಮು ಕಾಶ್ಮೀರಕ್ಕೆ ರಾಜ್ಯ ಅನುದಾನ ಬಿಡುಗಡೆ ಮಾಡಲಾಗುವುದು. ವಿದ್ಯಾರ್ಥಿಗಳಿಗೆ ಸಾಲ ತೆಗೆದುಕೊಂಡ. ವಿದ್ಯಾರ್ಥಿಗಳಿಗೆ ಅದರ ಬಡಿ ಮನ್ನಾ ಮಾರ್ಚ್ 2024ರ ವರೆಗೆ ಇರುವ ಸಾಲ ಮನ್ನಾ ಮಾಡುತ್ತೇವೆ ಎಂದರು.
ಜಿಎಸ್ ಟಿ ಯನ್ನ ಒಂದೇ ತೆರವಾದ ಕಾನೂನು ಅಡಿಯಲ್ಲಿ ತರುವುದು ಯೂನಿಪಾರಂನಿಟಿ ತರುತ್ತೇವೆ, ನರೆಗಾ ಕೂಲಿಯನ ನಾಲ್ಕು ನೂರಕ್ಕೆ ಏರಿಕೆ ಮಾಡುತ್ತವೆ. ದೇಶದ ಆರ್ಥಿಕ ವ್ಯವಸ್ಥೆ ಬಗ್ಗೆ ಚಿಂತನೆ ಮಾಡಿತ್ತೇವೆ ಎರಡನೇ ಸ್ಥಾನಕ್ಕೆ ಏರಲು ಎಲ್ಲಾ ಪಾಲುದಾರಿಕೆ ಬೆಳವಣಿಗೆ, ಜನಸಂಖ್ಯೆ ಅನುಗುಣವಾಗಿ ಥೀಮ್ ಘೋಷಣೆ ಎಲ್ಲಾರ ಪಾಲುದಾರಿಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಒಕ್ಕೂಟದ ವ್ಯವಸ್ಥೆ ಗಟ್ಟಿಯಾಗಲು ಸರ್ಕಾರಗಳ ನಡುವೆ ಗೊಂದಲ ನಿವಾರಣೆಗೆ ಆರೋಗ್ಯಕರ ಬೆಳವಣಿಗೆಯಾಗಲು ರಕ್ಷಣಾ ವಲಯ, ಸಾಮಾಜಿಕ ನ್ಯಾಯ ಆರ್ಥಿಕ ವ್ಯವಸ್ಥೆ ಗಟ್ಟಿ, ಸಂವಿಧಾನ ಬದಲಾವಣೆ ಮಾಡುವ ದು ಸುಲಭವಲ್ಲ ವಿವಿದತೆ ಏಕತೆಯಲ್ಲಿರುವ ನಮ್ಮ ದೇಶದಲ್ಲಿ ಅಸಾದ್ಯ ಡೆಮಾಕ್ರೆಟಿಕ್ ಗಟ್ಟಿ ಮಾಡುವ ಜನರಿಗೆ ಧೈರ್ಯ ತುಂಬುವುದು. ಸ್ವಾತಂತ್ರ್ಯದ ಬಗ್ಗೆ ಎಲ್ಲಾರಿಗೂ ತಿಳಿ ಹೇಳುವುದು ಜನರನ್ನು ಭಯದ ವಾತಾವರಣದಿಂದವಾಪಸ್ ತರುವುದು ಸ.ವಿಧಾನ ರಕ್ಷಣೆಗೆ ಬದ್ದ ವಾಗಿದೆ ಇಂಡಿಯಾ ಪಕ್ಷ ಅಧಿಕಾರಕ್ಕೆ ಬಂದಾಗ ಮಾಡುವುದಾಗಿ ನ್ಯಾಯ ಪತ್ರದ ಮೂಲಕ ಘೋಷಣೆ ಮಾಡಿದ್ದೇವೆ. ದೇಶದ ಜನರಿಗೆ ಬರಪೂರ ಕೊಡುಗೆ ಘೋಷಣೆಯನ್ನು ಇಂಡಿಯಾ ಒಕ್ಕೂಟ ಮಾಡಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಮುರಳೀಧರ ಹಾಲಪ್ಪ, ಮಾಜಿ ಶಾಸಕ ಡಾ. ರಫೀಕ್ ಅಹಮದ್, ಶಫೀ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಇಕ್ಬಾಲ್ ಅಹ್ಮದ್ ಉಪಸ್ಥಿತರಿದ್ದರು.