ಫೆ.9 : ಒಳಮೀಸಲಾತಿ ಒಲವು-ನಿಲುವು ಪುಸ್ತಕ ಬಿಡುಗಡೆ

ಸಂಶೋಧನೆ ಪ್ರಕಾಶನ, ದವನಭೂಮಿಕ ಸಾಂಸ್ಕೃತಿಕ ಟ್ರಸ್ಟ್ ಮತ್ತು ಅರುಣೋದಯ ಶೈಕ್ಷಣಿಕ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಪ್ರಕೃತಿ ಜನಸೇವಾ ಟ್ರಸ್ಟ್ ವತಿಯಿಂದ ಪ್ರೊ.ಎಲ್.ಮಣಿಗಯ್ಯ ಅವರು ಬರೆದಿರುವ ಒಳಮೀಸಲಾತಿ ಒಲವು-ನಿಲುವು ಪುಸ್ತಕ ಬಿಡುಗಡೆ ಸಮಾರಂಭವನ್ನು ಫೆ.9ರಂದು ಬೆಳಗ್ಗೆ 10.30 ಗಂಟೆಗೆ ತುಮಕೂರಿನ ಆರ್.ಟಿ.ನಗರದಲ್ಲಿರುವ ರವೀಂದ್ರ ಕಲಾ ನಿಕೇತನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಬೆಂಗಳೂರಿನ ಬಾಬು ಜಗಜೀವನರಾಂ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಗಂಗಾಧರ ಬಿ. ಕೃತಿ ಬಿಡುಗಡೆ ಮಾಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ.ಮ.ಲ.ನ. ಮೂರ್ತಿ ವಹಿಸುವರು. ಕೃತಿ ಕುರಿತು ವಿವಿ ವಿಜ್ಞಾನ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ನಾಗಭೂಷಣ್ ಬಗ್ಗನಡು ಮಾತನಾಡುವರು.

ಮುಖ್ಯ ಅತಿಥಿಗಳಾಗಿ ಜನಪರ ಚಿಂತಕ ಕೆ.ದೊರೈರಾಜ್, ಕತೆಗಾರ ತುಂಬಾಡಿ ರಾಮಯ್ಯ, ಸಾಹಿತಿ ಡಾ.ಓ.ನಾಗರಾಜು, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ನರಸಿಂಹಮೂರ್ತಿ, ಯುವ ಮುಖಂಡ ಡ್ಯಾಗೇರಹಳ್ಳಿ ವಿರೂಪಾಕ್ಷ, ಗ್ರಂಥಕರ್ತ ಎಲ್.ಮಣಿಗಯ್ಯ ಭಾಗವಹಿಸುವರು.

ಎ.ಸಿ.ರಂಗಯ್ಯ, ಮಂಟೇಸ್ವಾಮಿ, ಡಾ.ರಘುಕುಮಾರ್, ಸಿದ್ದಲಿಂಗಸ್ವಾಮಿ ಹಿರೇಮಠ್, ಪಿ.ಮಹಿಮಾರಾಜು, ನಾಗರಾಜು ಗೂಳರಿವೆ, ಬಿ.ಜಿ.ಸಾಗರ್, ಕುಪ್ಪೂರು ಶ್ರೀಧರ, ಡಾ.ಎಲ್.ಮುಕುಂದ, ರಂಜನ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು.

Leave a Reply

Your email address will not be published. Required fields are marked *