ತುಮಕೂರು : ಶೈಕ್ಷಣಿಕ ಕ್ಷೇತ್ರದಲ್ಲಿ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿದ್ದು ಈ ಸಂಶೋಧನೆಗಳ ಪಲಿತಾಂಶಗಳು ಸಮಾಜಕ್ಕೆ ಉಪಯೋಗವಾಗುತ್ತಿರುವುದು ವಿಜ್ಞಾನ ಕ್ಷೇತ್ರಕ್ಕೂ ಮತ್ತು ಸಮಾಜ ವಿಜ್ಞಾನಗಳ ಕ್ಷೇತ್ರಕ್ಕೂ ಅಂತರವಿರುವುದನ್ನು ಕಾಣಬಹುದು ಎಂದು ಚಿಂತಕರು ಹಾಗೂ ಹಿರಿಯ ಕಲಾವಿದರಾದ ಡಾ.ಸಿ ಚಂದ್ರಶೇಖರ್ ಹೇಳಿದರು.
ಅವರು ಜನವರಿ 3ರಂದು ನಾಟಕ ಮನೆ ತುಮಕೂರು ಹಾಗೂ ಕರ್ನಾಟಕ ಸಂಸ್ಕøತಿ ಇಲಾಖೆ ಇವರ ಸಹಯೋಗದಲ್ಲಿ ಜನಪದ ಗೀತ ಗಾಯನ, ರಂಗ ಪ್ರಯೋಗ, ಹಾಗೂ ಡಾ.ಲಕ್ಲ್ಮೀ ರಂಗಯ್ಯ ನವರಿಗೆ ಅಭಿನಂದನ ಸಮಾರಂಭವನ್ನು ಡಾ. ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕವಿಜ್ಞಾನಗಳ ಸಂಶೋಧನೆಯು ಸಂಶೋಧಕನ ಆಯ್ಕೆಯ ಆಸಕ್ತಿ, ಅಭಿರುಚಿ ಮತ್ತು ಉತ್ಸುಕತೆಯ ಮನೋದೋರಣೆಯಿಂದ ಕೂಡಿದ್ದರೆ ಹೆಚ್ಚು ಪರಿಣಾಮಕಾರಿಯಾಗಿ ಸಮಾಜಕ್ಕೆ ಫಲಪ್ರಧಾಯಕವಾಗಿತ್ತವೆ ಎಂಬಂತೆ ಭಾರತೀಯ ನೆಲದ ಪರಂಪರೆಗೆ ಒಗ್ಗುವ ರೀತಿಯಲ್ಲಿ ರಾಷ್ಟೀಯವಾದವನ್ನು ಪ್ರತಿಪಾದಿಸುವಲಿ, ಮಾನವೀಯ ಮೌಲ್ಯಗಳ ನೈತಿಕತೆಯನ್ನು ಸಮಾಜದಲ್ಲಿ ಪುನಾರುತ್ಥಾನಗೊಳಿಸುವಲ್ಲಿ ಏಷ್ಯಾದ ಬೆಳಕು ಭಗವಾನ್ ಬುಧ್ದರ ಚಿಂತನೆಗಳು ಇಂದಿಗೂ ಪ್ರಸ್ತುವಾಗಿವೆ ಎನ್ನುವ ಅಂಶವನ್ನು ಸಂಶೋಧನೆಯಿಂದ ಅನ್ವೇಷಿಸಿ ಸಂಶೋಧಕರಾದ ಡಾ.ಲಕ್ಲ್ಮೀರಂಗಯ್ಯನವರು ಶಿಕ್ಷಣ ವಲಯದಲಿ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಪ್ರಾದ್ಯಾಪಕರಾದ ಪ್ರೊ.ಬಿ.ರಮೇಶ್ ರವರು ಅಭಿನಂದನಾ ನುಡಿಗಳನ್ನಾಡುತ್ತಾ ತುಮಕೂರಿನ ನೆಲದಲ್ಲಿ ಶಿಕ್ಷಣ, ಸಾಹಿತ್ಯ, ಕಲೆ, ಸಂಸ್ಕøತಿ.ಕ್ರೀಡೆ, ರಂಗಭೂಮಿ, ಜನಪದ, ಮುಂತಾದ ಕ್ಷೇತ್ರದ ಸಾಧಕರನ್ನು ಪ್ರೋತ್ಸಾಹಿಸುವಂತೆ ಚಳುವಳಿಗಳನ್ನು ಪ್ರೋತ್ಸಾಹಿಸಿ ಬೆಳೆಸುತ್ತಿರುವುದು ಮೊದಲುನಿಂದಲೂ ರೂಡಿಯಾಗಿ ಬಂದಿದೆ, ನಾಟಕಮನೆ ರಂಗಭೂಮಿಯ ಜೊತೆಯಲ್ಲಿ ಈ ನಾಡಿನ ಯುವ ಸಾಧಕರನ್ನು ಗುರುತಿಸಿ ಅಭಿನಂದಿಸುವುದರ ಮೂಲಕ ಮತಷ್ಟು ತನ್ನ ಘನತೆಯ ಮೆರಗನ್ನು ಹೆಚ್ಚಿಸಿಕೊಂಡಿದೆ ಎಂದರು.

ಪ್ರೊ.ದೊರೈರಾಜು ಕೆ ರವರು ಮಾತನಾಡಿ ಇಂದಿ ಯುವಕರಲ್ಲಿ ಹೋರಾಟದ ಮನೋಭಾವ ಮತ್ತ ಸೈದ್ದಾಂತಿಕ ಬದ್ದತೆ ಕ್ಷೀಣಿಸುತ್ತಿದೆ ಸಮಾಜದಲ್ಲಿನ ಸಮಸ್ಯೆಗಳು ಅರ್ಥವಾಗದೆ ಯುವ ಸಮುದಾಯ ದಿಕ್ಕು ತಪ್ಪುತ್ತಿದೆ ಇದರ ಕಡೆ ಸಂಶೋದನೆಗಳು ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿನಿರ್ದೇಶಕರಾದ ಪ್ರೊ.ಟಿ ಗಂಗಾಧರಯ್ಯನವರು ಮಾತನಾಡಿ ನಮ್ಮ ನಡವಳಿಕೆಗಳು ನಮ್ಮನ್ನು ಸತ್ಪ್ರಜೆಗಳನ್ನಾಗಿ ರೂಪಿಸುತ್ತವೆ ಸಾಧನೆಗೆ ಸಮಾಜದ ಪಿಡುಗುಗಳು ಅಡೆತಡೆ ಎಂದು ಭಾವಿಸದೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಅವಕಾಶಗಳು ಎಂದು ತಿಳಿದಾಗ ಮನುಷ್ಯ ನಿಜವಾಗಿಯು ಸಾದಕನಾಗುತ್ತಾನೆ ಎಂದರು.
ಡಾ. ಲಕ್ಷ್ಮೀರಂಗಯ್ಯ ಕೆ.ಎನ್ ರವರಿಗೆ ಅಭಿನಂದಿಸುವುದರ ಜೊತೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ಬಸವರಾಜಪ್ಪ ಆಪಿನಕಟ್ಟೆರವರಿಗೆ ಗೌರವ ಸನ್ಮಾನದೊಂದಿಗೆ ಬಿಳ್ಕೋಡುಗೆಯನ್ನು ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕಲಾವಿದರಾದ ಡಾ. ಲಕ್ಷ್ಮಣದಾಸ್ ವಹಿಸಿದ್ದರು ಕವಿಗಳಾದ ಡಾ.ಓ ನಾಗರಾಜು ಪ್ರಾಸ್ತವಿಕ ಮಾತುಗಳನ್ನಾಡಿದರು.ಹಿರಿಯ ರಂಗಕರ್ಮಿ ಹೆಚ್ ಎಂ ರಂಗಯ್ಯ, ಮಲ್ಲಿಕಾಬಸವರಾಜು, ನಾಟಕ ಮನೆ ಮಹಾಲಿಂಗು, ಡಾ. ಮಣಿಗಯ್ಯ ಎಲ್ ,ಡಾ.ಬಾಲಕೃಷ್ಣಪ್ಪ ವೈ.ಕೆ.ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಕುಮಾರ್ ಡಿ ಎಂ,ಡಿ ವಿ. ಸುರೇಶ್ ಕುಮಾರ್ ,ವಿರೂಪಾಕ್ಷ ಡ್ಯಾಗೇರಹಳ್ಳಿ ಮಂಟೇಸ್ವಾಮಿ, ಮಲ್ಲಿಕಾರ್ಜುನ ಕೆಂಕೆರೆ ಉಪಸ್ಥಿತರಿದ್ದರು ಮಲ್ಲಿಕಾರ್ಜುನ ಕೆಂಕೆರೆ ಮತ್ತು ತಂಡದವರು ಜನಪದ ಗೀತಾ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು ನವೀನ್ ತಿಪಟೂರು ರವರ ನಿರ್ದೇಶನದಲ್ಲಿ ಸರಸತಿಯಾಗಲೊಲ್ಲೆ ಎಂಬ ನಾಟಕವನ್ನು ಸಾವಿತ್ರಿ ಬಾಫುಲೆರವರ ಜನ್ಮದಿನಾಚಾರಣೆಯ ಅಂಗವಾಗಿ ರಂಗ ಪ್ರಯೋಗನ್ನು ಪ್ರದರ್ಶಿಸಲಾಯಿತು. ದೇವರಾಜು ಮೆಳೆಹಳ್ಳಿ ಕಾರ್ಯಕ್ರಮ ನಿರೂಪಿಸಿದರು, ಸೋರೆಕುಂಟೆ ಸಿದ್ದೇಶ್ ಸ್ವಾಗತಿಸಿ, ಪ್ರಕಾಶ್ ವಂದಿಸಿದರು.