ತುಮಕೂರು : ತುಮಕೂರಿನ ಮಧ್ಯಭಾಗದಲ್ಲಿರುವ ಬಿರಿಯಾನಿ ಹೋಟಲ್‍ಗೆ ಬೆಂಕಿ ಹತ್ತಿಕೊಂಡು ಭಿತಿ ಉಂಟಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಸಕಾಲಕ್ಕೆ ಮುನ್ನೆಚ್ಚರಿಕೆ ವಹಿಸಿದ ಕಾರಣ ಭಾರೀ ಅನಾವುತವೊಂದು ತಪ್ಪಿದೆ.

ತುಮಕೂರಿನ ಎಸ್‍ಐಟಿ ಕಾಲೇಜಿನ ಹಿಂಭಾಗದ ಗಂಗೋತ್ರಿ ನಗರದ ಮುಖ್ಯ ರಸ್ತೆಯಲ್ಲಿರುವ ಬಿರಿಯಾನಿ ಹೌಸ್ ಹೋಟೆಲ್‍ನಲ್ಲಿ ಮೆಗಾ ಗ್ಯಾಸ್ ಪೈಪ್‍ಲೈನ್ ಅಳವಡಿಸಲಾಗಿದ್ದು, ಇಂದು ಸ್ಟೌವ್ ಮೇಲೆ ಎಣ್ಣೆ ಬಾಂಡಲಿ ಇಟ್ಟಿದ್ದಾಗ ಏಕಾಏಕಿ ಬೆಂಕಿ ಹತ್ತಿಕೊಂಡಿದ್ದು ಇಡೀ ಹೋಟೆಲ್‍ಗೆ ಅವರಿಸಿದೆ.
ಸಕಾಲಕ್ಕೆ ಬಂದ ಅಗ್ನಿಶಾಮಕದಳದವರು ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯಿಂದ ಬಿರಿಯಾನಿ ಮಾಡಲು ತಂದಿದ್ದ ಮಾಂಸ, ಅಕ್ಕಿ ಇತರೆ ಸುಟ್ಟಿದ್ದು, ಪಾತ್ರಗಳೆಲ್ಲಾ ಸುಟ್ಟಿವೆ, ಬೆಂಕಿಯಿಂದ ಹೋಟೆಲ್‍ಗೆ ಹಾನಿಯಾದೆ.
ಹೋಟೆಲ್ ಸಿಬ್ಬಂದಿ ಕೂಡಲೇ ಜಾಗ್ರತೆ ವಹಿಸಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ನಾಳೆ ಚುನಾವಣೆ ನಡೆಯುತ್ತಿರುವುದರಿಂದ ಹೋಟೆಲ್‍ಗೆ ಹೆಚ್ಚಿನ ಗ್ರಹಕರು ಬರುವ ನಿರೀಕೆ ಇತ್ತೆನ್ನಲಾಗಿದೆ.

ಸೊಗಡು ಶಿವಣ್ಣ ಭೇಟಿ: ಮಾಜಿ ಸಚಿವ ಸೊಗಡು ಶಿವಣ್ಣಮವರು ಸ್ಥಳಕ್ಕೆ ಭೇಟಿ ನೀಡಿ, ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳುವಂತೆ ಸೂಚಿಸಿದರು.