ಬೆಳಗುಂಬ ಸಮೀಪದ ಬೆಟ್ಡಕ್ಕೆ ಬೆಂಕಿ-ವನ್ಯಜೀವಿಗಳ ಪ್ರಾಣಕ್ಕೆ ಅಪಾಯ

ತುಮಕೂರು : ಬೆಳಗುಂಬ ಸಮೀಪವಿರುವ ಬೆಟ್ಟಕ್ಕೆ ಬೆಂಕಿ ಬಿದಿದ್ದು, ದಗ ದಗನೆ ಉರಿಯುತ್ತಾ ಇದೆ.

ಬೆಟ್ಟದಲ್ಲಿ ಹಲವಾರು ಬೆಲೆ ಬಾಳುವ ಮರಗಳು, ಸಣ್ಣಪುಟ್ಟ ವನ್ಯಜೀವಿಗಳು ವಾಸಿಸುತ್ತಿರುತ್ತವೆ.
ಕಾಡ್ಗಿಚ್ಚಿನಿಂದ ಸಣ್ಣಪುಟ್ಟ ವನ್ಯ ಜೀವಿಗಳು ಸಾವನ್ನಪ್ಪುವ ಸಂಭವ ಹೆಚ್ಚಿದೆ.

ಅರಣ್ಯ ರಕ್ಷಕರು ದನಗಾಯಿಗಳು ಮತ್ತು ಸೌದೆ ಆಯುವವರ ಬಗ್ಗೆ ನಿಗಾ ವಹಿಸದಿರುವುದೇ ಬೆಂಕಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಬೆಟ್ಟದ ಸಮೀಪವೇ ನಾಮದ ಚಿಲುಮೆ ಅರಣ್ಯ ವಿದ್ದು, ಕಾಡ್ಗಿಚ್ಚು  ಹಬ್ಬಿದಿರೆ   ಸಾವಿರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗುವ ಸಂಭವವಿದೆ.

Leave a Reply

Your email address will not be published. Required fields are marked *