ತುಮಕೂರು-ತುಮಕೂರು ಮಹಾನಗರ ಪಾಲಿಕೆಯೆಂದರೆ ರಸವತ್ತಾದ ಹುಲ್ಲುಗಾವಲು, ಎಷ್ಟು ಬೇಕಾದರೂ ಮೇಯಬಹುದು.
ಇಂತಹ ಪಾಲಿಕೆ ತುಮಕೂರು ನುಂಗಣ್ಣÉಂದು ಕರೆಯಲಾಗುತ್ತಿದೆ, ಇಂತಹ ನುಂಗಣ್ಣ ಇಲಾಖೆಗೆ ಇಂದು ಬೆಳಿಗ್ಗೆಯೇ ಲೋಕಾಯುಕ್ತರು ದಾಳಿ ನಡೆಸಿ ಚೆನ್ನಾಗಿ ನುಂಗಿ ದಪ್ಪಗಾಗಿರುವ ಕೆಲ ಮಂಗಣ್ಣಗಳಿಗೆ ಕಾದ ಕಬ್ಬಿಣದಿಂದ ಬರೆ ಹಾಕಿದ್ದಕ್ಕೆ ಹಗಲೊತ್ತಿನಲ್ಲೇ ಪಾಲಿಕೆ ಹೊಸ ಕಟ್ಟಡದ ಕಂಬಗಳಿಗೆ ಜಿಗಿದವಂತೆ.
ಲೋಕಯುಕ್ತರು ಒಂದೊಂದೇ ಕಡತ ತೆಗೆದಾಗಲೆಲ್ಲಾ, ಆರೋಗ್ಯ, ಕಂದಾಯ, ಇಂಜಿನಿಯರ್ ವಿಭಾಗದ ಗಡವ ಕೋತಿಗಳ ಮೂತಿ ಎತ್ತತ್ತಲೋ ತಿರುಗಿ ಮಾತೆ ಹೊರಡಲಿಲ್ಲವಂತೆ.
ಪಾಪ ತುಮಕೂರು ನಾಗರೀಕರ ಹಣವನ್ನು ನೀರಿನಂತೆ ದಿನಾ ಕುಡಿಯುತ್ತಿದ್ದ ಪಾಲಿಕೆ ಅಧಿಕಾರಿಗಳಿಗೆ ಇಂದು ಕುಡಿಯಲೂ ನೀರು ಸಿಗಲಿಲ್ಲವಂತೆ ಹಾಗೆ ಪಾಲಿಕೆ ಅಧಿಕಾರಿಗಳನ್ನು ಲೋಕಾಯುಕ್ತರು ತಪಾಸಣೆ ಮಾಡಿದರಂತೆ.
ಕೆಲ ಇಂಜಿಯರ್‍ಗಳ ಗಂಟಲಲ್ಲಿ ಪಾಪ ಮಾತೆ ಹೊರಡಲಿಲ್ಲವಂತೆ, ಅವರ ಗಂಟಲಲ್ಲಿ ಕಂಟ್ರಾಕ್ಟರ್ ನಾಮದೇಯಗಳು ಹೊರಡಲು ಹಾಗೆ ಹಾಗೆ ಕಟ್ಟಿಕೊಂಡು ಬಿಟ್ಟವಂತೆ, ಆಗ ಲೋಕಯುಕ್ತರು ಕಬ್ಬಿಣ ನುಂಗಿದ ಅಧಿಕಾರಿಗಳಿಗೆ ಕಬ್ಬಿಣದ ರಾಡ್ ಬರೆ ಹಾಕಿದಾಗ ಕುಂಡಿ ಮುಟ್ಟಿ ನೋಡಿಕೊಳ್ಳುವುದಕ್ಕೂ ಪುರುಷೊತ್ತು ಇರಲಿಲ್ಲವಂತೆ.
6ಮಂದಿ ದಲ್ಲಾಳಿಗಳನ್ನು ವಶಕ್ಕೆ ಪಡೆದಿರುವ ಲೋಕಯುಕ್ತ ಪೊಲೀಸರು, ಯಾವ ಯಾವ ಅಧಿಕಾರಿಗಳ ತಲೆ ದಂಡವಾಗುತ್ತದೆ ಕಾದು ನೋಡಬೇಕಿದೆ.
ಪಾಲಿಕೆಯಲ್ಲಿ ಒಂದು ಸೈಟ್‍ನ್ನೇ ಐದಾರು ಮಂದಿಗೆ ಖಾತೆ ಮಾಡಿರುವುದು, ಕಾಮಗಾರಿಗಳಲ್ಲಿ ಕಳಪೆ, ದಲ್ಲಾಳಿಗಳ ಆಟಟೋಪ, ಆರೋಗ್ಯಾಧಿಕಾರಿಗಳು ಸ್ವಚ್ಚತೆಗೆ ಆದ್ಯತೆ ನೀಡದಿರುವುದು, ಇಂಜಿನಿಯರ್‍ಗಳು ತಮಗೆ ಹೆಚ್ಚಿಗೆ ಕಮೀಷನ್ ನೀಡುವವರಿಗೆ ಮಾತ್ರ ಗುತ್ತಿಗೆ ನೀಡುವುದು, ಕಳಪೆ ಸಾಮಗ್ರಗಳನ್ನು ತರಿಸುವುದು ಒಂದೇ-ಎರಡೇ ಪಾಲಿಕೆ ನುಂಗಳಗಳ ಕಥೆ.
ಈ ಹಿನ್ನಲೆಯಲ್ಲಿಯೇ ತುಮಕೂರು ಮಹಾನಗರ ಪಾಲಿಕೆ ಕಚೇರಿ ಮೇಲೆ ಲೋಕಾಯುಕ್ತ ಪೆÇಲೀಸರು ಇಂದು ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ನಗರದ ಟೌನ್‍ಹಾಲ್ ವೃತ್ತದಲ್ಲಿರುವ ಮಹಾನಗರ ಪಾಲಿಕೆ ಕಚೇರಿಗೆ ಎಂದಿನಂತೆ ಕಚೇರಿ ಸಮಯಕ್ಕೆ ಬಂದ ಸಿಬ್ಬಂದಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದರು.
ಇಂದು ಬೆಳಿಗ್ಗೆ 11 ಗಂಟೆಗೆ ಲೋಕಾಯುಕ್ತ ಎಸ್ಪಿ ವಲಿಬಾಷ ನೇತೃತ್ವದಲ್ಲಿ ಬೆಂಗಳೂರು ಮತ್ತು ತುಮಕೂರಿನ ಸುಮಾರು 25ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿ ಇಡೀ ಕಚೇರಿಯನ್ನು ತಮ್ಮ ಹಿಡಿತಕ್ಕೆ ಪಡೆದು ವಿವಿಧ ಶಾಖೆಗಳಲ್ಲಿ ಅಗತ್ಯ ದಾಖಲಾತಿಗಳ ಪರಿಶೀಲನೆ ನಡೆಸಿದರು.
6 ವಾಹನಗಳಲ್ಲಿ ಬಂದಿದ್ದ ಲೋಕಾಯುಕ್ತ ಅಧಿಕಾರಿಗಳು ಮಹಾನಗರ ಪಾಲಿಕೆಯ ಕಂದಾಯ ಶಾಖೆ, ಇಂಜಿನಿಯರ್ ಶಾಖೆ, ಆರೋಗ್ಯ ಶಾಖೆ, ಯುಜಿಡಿ ಸೇರಿದಂತೆ ವಿವಿಧ ಶಾಖೆಗಳಿಗೆ ತೆರಳಿ ಅಗತ್ಯ ಕಡತಗಳು, ದಾಖಲಾತಿಗಳ ತಪಾಸಣೆ ನಡೆಸಿದರು.
ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಕೇಳಿ ಬಂದಿರುವ ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪಾಲಿಕೆಯ ವಿವಿಧ ಶಾಖೆಗಳನ್ನು ಜಾಲಾಡಿದರು.
ಮಹಾನಗರ ಪಾಲಿಕೆ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದಾಗ ಕಚೇರಿಯ ಆವರಣದಲ್ಲಿ ಮಧ್ಯವರ್ತಿಗಳನ್ನು ವಶಕ್ಕೆ ಪಡೆದು ಅವರ ಕೆಲಸ ಕಾರ್ಯಗಳ ಬಗ್ಗೆ ವಿಚಾರಣೆ ನಡೆಸಿದರು.
ಮಹಾನಗರ ಪಾಲಿಕೆಯ ಹೊಸ ಆಡಳಿತ ಕಚೇರಿ ಸೇರಿದಂತೆ ಇಡೀ ಮಹಾನಗರ ಪಾಲಿಕೆಯ ಕಚೇರಿ ಆವರಣವನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು ಸಂಪೂರ್ಣ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಗೆ ತಮ್ಮ ಕೆಲ ಕಾರ್ಯಗಳಿಗಾಗಿ ಪಾಲಿಕೆ ಕಚೇರಿಗೆ ಬಂದಿದ್ದ ಸಾರ್ವಜನಿಕರು ಸಹ ಹೊರ ಬರಲಾಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಹಾನಗರ ಪಾಲಿಕೆಯ ಎಲ್ಲ ಶಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ.
ದಾಳಿಯಲ್ಲಿ ಲೋಕಾಯುಕ್ತ ಎಸ್ಪಿ ವಲಿಭಾಷ, ಡಿವೈಎಸ್ಪಿ ಉಮಾಶಂಕರ್, ಇನ್ಸ್‍ಪೆಕ್ಟರ್ ರಾಮಕೃಷ್ಣ ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.