ಅನಾಥಾಶ್ರಮ-ವೃದ್ಧಾಶ್ರಮದಲ್ಲಿ ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಹುಟ್ಟು ಹಬ್ಬ ಆಚರಿಸಿದ ಮಗ ರಾಹುಲ್

ತುಮಕೂರು : ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಅವರ ೪೭ ವರ್ಷದ ಹುಟ್ಟು ಹಬ್ಬವನ್ನು ಅನಾಥಾಶ್ರಮ ಮಕ್ಕಳಿಗೆ ಮತ್ತು ವೃದ್ದಾಶ್ರಮದ ವೃದ್ದರಿಗೆ ಸಹಾಯ ನೀಡುವ ಮೂಲಕ ಮಗ ರಾಹುಲ್ ಆಚರಿಸಿದರು.

ಮೈದಾಳದ ಶಿವಶೈಕ್ಷಣಿಕ ಅನಾಥಾಶ್ರಮದ ೧೩೫ ಮಕ್ಕಳಿಗೆ ನೋಟ್ ಪುಸ್ತಕ, ಪೆನ್, ಪನ್ಸಿಲ್ ಮತ್ತು ಬ್ಯಾಗ್ ವಿತರಣೆ ಮತ್ತು ವೃದ್ದಾಶ್ರಮಕ್ಕೆ ಹಣ್ಣು ಹಂಪಲು ಹಾಗೂ ಅನಾಥಾಶ್ರಮ ಮತ್ತು ವೃದ್ಧಾಶ್ರಮಕ್ಕೆ ಹತ್ತು ಕ್ವಿಂಟಾಲ್ ಅಕ್ಕಿ, ದವಸ ಧಾನ್ಯ ವಿತರಿಸಿದ ರಾಹುಲ್, ನಮ್ಮ ತಂದೆಯ ಹುಟ್ಟು ಹಬ್ಬವನ್ನು ಅರ್ಥ ಪೂರ್ಣವಾಗಿ ಆಚರಿಸಬೇಕೆಂದು ಈ ಬಾರಿ ಅನಾಥಾಶ್ರಮದ ಮಕ್ಕಳಿಗೆ ಮತ್ತು ವೃದ್ಧರಿಗೆ ಸಹಾಯ ಮಾಡುತ್ತಿರುವುದಾಗಿ ಹೇಳಿದರು.

ಗ್ರಾಮಾಂತರ ಕ್ಷೇತ್ರದ ಜನತೆ ನಮ್ಮ ತಂದೆಯವರ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಕೆಂದು ಅಂದುಕೊAಡಿದ್ದರು, ಆದರೆ ನಮ್ಮ ತಂದೆಗೆ ಸ್ವಲ್ಪ ಮಂಡಿ ನೋವಿನ ಕಾರಣ ಚಿಕಿತ್ಸೆ ಪಡೆಯುತ್ತಿರುವುದರಿಂದ ಈ ಬಾರಿ ಸರಳವಾಗಿ ಅನಾಥಾಶ್ರಮ ಮತ್ತು ವೃದ್ಧಾಶ್ರಮದಲ್ಲಿ ಆಚರಣೆ ಮಾಡುತ್ತಿದ್ದು, ಗ್ರಾಮಾಂತರದ ಜನತೆ ನಮ್ಮ ತಂದೆಯವರನ್ನು ಮನೆ ಮಗ ಅಂದುಕೊAಡಿದ್ದಾರೆ, ಅವರ ಋಣ ನಮ್ಮ ಮೇಲಿದೆ ಆದ್ದರಿಂದಲೇ ಬಳ್ಳಗೆರೆಯಲ್ಲಿ ಮನೆ ಮಾಡಿ ಅಲ್ಲಿಯೇ ಇದ್ದೇವೆ, ನಮ್ಮ ತಂದೆಯ ಉಸಿರಿರುವ ತನಕ À ತುಮಕೂರು ಗ್ರಾಮಾಂತರ ಕ್ಷೇತ್ರದ ಜನರ ಜೊತೆಯೇ ಇರಲಿದ್ದಾರೆ ಎಂದು ಹೇಳಿದರು.

ವೃದ್ದಾಶ್ರಮದ ವೃದ್ಧರಿಗೆ ಹಣ್ಣು-ಹಂಪಲು ಜೊತೆಗೆ ಸೆಟರ್‌ಗಳು ಮತ್ತು ಬೆಡ್‌ಶೀಟ್‌ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮುಖಂಡ ಸುರೇಶ್, ರಾಮಣ್ಣ, ಅನಾಥಾಶ್ರಮದ ಲೇಪಾಕ್ಷಯ್ಯ, ಹೆತ್ತೇನಹಳ್ಳಿ ಮಂಜುನಾಥ್. ಐಟಿವಿಂಗ ಅಧ್ಯಕ್ಷ ತಿಮ್ಮಸಂದ್ರ ಕುಮಾರ್. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್. ಗ್ರಾಮ ಪಂಚಾಯತಿ ಸದಸ್ಯ ಜನರ‍್ಧನ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *