ತುಮಕೂರು: ಪ್ರತಿಯೊಬ್ಬ ಮನುಷ್ಯರಲ್ಲಿಯೂ ಕಣ್ಣುಗಳು ಬಹಳ ಮುಖ್ಯವಾದ ಅಂಗವಾಗಿದೆ. ಪೋಲೀಸರು ಸದಾ ಕರ್ತವ್ಯನಿರತರಾಗಿರುತ್ತಾರೆ, ವರ್ಷಕ್ಕೊಮ್ಮೆ ಕಣ್ಣುಗಳ ತಪಾಸಣೆ ಅವಶ್ಯಕ ಈ ನಿಟ್ಟಿನಲ್ಲಿ ವಾಸನ್ ಐ ಕೇರ್‍ರವರು ಪೊಲೀಸರಿಗೆ ಉಚಿತ ಕಣ್ಣಿನ ತಪಾಸಣೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ದೃಷ್ಟಿಗೆ ಸಂಬಂಧಿಸಿದಂತೆ ಎಲ್ಲರೂ ಕಣ್ಣನ್ನು ಚೆನ್ನಾಗಿ ಕಾಪಾಡಿಕೊಳ್ಳಿ, ಸಾರ್ವಜನಿಕರಿಗೆ ವಾಸನ್ ಐ ಕೇರ್‍ರವರು ಉತ್ತಮ ಸೇವೆ ಸಲ್ಲಿಸುತ್ತಿದೆ. ಪೊಲೀಸ್ ಇಲಾಖೆಯವರಿಗೆ ಉಚಿತವಾಗಿ ಕಣ್ಣು ತಪಾಸಣೆ ಮಾಡುತ್ತಿದ್ದು ಎಲ್ಲರೂ ಕಣ್ಣನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ತುಮಕೂರಿನ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಗೋಪಾಲ್.ಸಿ.ರವರು ತಿಳಿಸಿದರು.
ನಗರದ ಎಸ್.ಎಸ್.ಪುರಂದ ವಾಸನ್ ಐ ಕೇರ್‍ನಲ್ಲಿ ಡಿ.26ರಂದು ಶುಕ್ರವಾರ ಸಂಜೆ 4 ಗಂಟೆಗೆ “ಪೊಲೀಸ್ ಹೀರೋಸ್” ಶೀಷಿಕೆಯ ಅಡಿಯಲ್ಲಿ ಜಿಲ್ಲಾ ಪೋಲೀಸ್, ಭಾರತೀಯ ಸೈನಿಕರು, ಅರೆಸೈನಿಕ ಸಿಬ್ಬಂದಿಗಳು ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ 10 ಡಿಸೆಂಬರ್- 2025 ರಿಂದ 30 ಜನವರಿ 2026 ರವರೆಗೆ ಉಚಿತ ಕಣ್ಣಿನ ತಪಾಸಣೆ ಕುರಿತು ಪತ್ರಿಕಾಗೋಷ್ಟಿಯನ್ನು ಹಮ್ಮಿಕೊಳ್ಳಲಾಗಿತ್ತು.
ತುಮಕೂರಿನ ಹೆಚ್ಚುವರಿ ಪೋಲೀಸ್ ಅಧೀಕ್ಷಕರಾದ ಗೋಪಾಲ್.ಸಿ.ರವರು ಮಾತನಾಡುತ್ತಾ “ಪೋಲೀಸ್ ಹಿರೋಸ್” ಎಂಬ ಕಾರ್ಯಕ್ರಮವನ್ನು ಪ್ರಪ್ರಥಮ ಬಾರಿಗೆ ಪರಿಚಯಿಸುತ್ತಿದ್ದೇವೆ, ಪೋಲೀಸರು, ನಿವೃತ್ತ ಪೋಲೀಸರು ಮತ್ತು ಭಾರತದ ಸೈನಿಕರು ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ ಅಂತಹ ವ್ಯಕ್ತಿಗಳ ಕಣ್ಣು ರಕ್ಷಣೆ ನಮ್ಮ ಹೊಣೆ, ಮಿಲಿಟರಿ, ಪ್ಯಾರಾ ಮಿಲಿಟರಿ, ಬಿಎಸ್.ಎಫ್,ಸಿ.ಆರ್.ಪಿ.ಎಫ್ ಹಾಗೂ ಇತರೆ ಭಾರತ ಸರ್ಕಾರದ ಎಲ್ಲಾ ಸೈನಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಲ್ಲರೂ ಈ ಶಿಬಿರದಲ್ಲಿ ಪಾಲ್ಗೊಂಡು ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಿ ಎಂದು ಪೋಲೀಸರು ಮತ್ತು ಸೈನಿಕರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪತ್ರಿಕಾಗೋಷ್ಟಿಯಲ್ಲಿ ನೇತ್ರತಜ್ಞರಾದ ಡಾ.ಶೃತಿರವರು ಮಾತನಾಡುತ್ತಾ ಪೋಲೀಸರು ಮತ್ತು ಸೈನಿಕರಿಗೆ ಪೋಲೀಸ್ ಹಿರೋಸ್ ಎಂಬ ಕಾರ್ಯಕ್ರಮ ಮಾಡುತ್ತಿದ್ದು ಇದರಲ್ಲಿ ಉಚಿತ ಕಣ್ಣಿನ ತಪಾಸಣೆ ಮಾಡಲಾಗುತ್ತದೆ, ಆಪ್ಟಿಕಲ್ ಶೇ 10% ರಿಯಾಯಿತಿ ಇರುತ್ತದೆ. ಡಯಾಗ್ನೋಸ್ಟಿಕ್‍ಗೆ ಶೇ 15% ರಿಯಾಯಿತಿ ಹೊಂದಿರುತ್ತದೆ. ತಮ್ಮ ಇಲಾಖೆಯ ಐಡಿ ಕಾರ್ಡ್ ತೆಗೆದುಕೊಂಡು ಬರುವುದು, ಆರೋಗ್ಯಭಾಗ್ಯ, ಯಶಸ್ವಿನಿ ಇತ್ಯಾದಿ ಸರ್ಕಾರಿ ಯೋಜನೆಗಳು ನಮ್ಮಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ವಾಸನ್ ಐ ಕೇರ್ ಕೇಂದ್ರಕ್ಕೆ ಭೇಟಿ ನೀಡಿ ಅಥವಾ 1800 571 3333 ಸಂಖ್ಯೆಗೆ ಕರೆ ಮಾಡಿ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ವಾಸನ್ ಐ ಕೇರ್‍ನ ಮಾರ್ಕೆಟಿಂಗ್ ವ್ಯವಸ್ಥಾಪಕರಾದ ನಾಗೇಂದ್ರರವರು ಮಾತನಾಡುತ್ತಾ 175 ಕ್ಕೂ ಹೆಚ್ಚು ಕೇಂದ್ರಗಳು, 95 ಕ್ಕೂ ಹೆಚ್ಚು ನಗರಗಳಲ್ಲಿ ಹಾಜರಾತಿ, ಮತ್ತು 650ಕ್ಕೂ ಹೆಚ್ಚು ಪರಿಣಿತ ವೈದ್ಯರ ತಂಡ ಹೊಂದಿರುವ ವಾಸನ್ ಐ ಕೇರ್, ಭಾರತದೆಲ್ಲೆಡೆ ಅತ್ಯಾಧುನಿಕ ಹಾಗೂ ರೋಗಿ ಕೇಂದ್ರಿತ ನೇತ್ರಚಿಕಿತ್ಸಾ ಸೇವೆಗಳನ್ನು ಒದಗಿಸುತ್ತಿದೆ. ಈ ಪ್ರತಿಕಾಗೋಷ್ಟಿಯಲ್ಲಿ ವಾಸನ್ ಐ ಕೇರ್‍ನ ವೈದ್ಯರಾದ ಡಾ.ಕೇಶವಮೂರ್ತಿ, ಡಾ.ಕೌಸರ್, ವಾಸನ್ ಐ ಕೇರ್‍ನ ವ್ಯವಸ್ಥಾಪಕರಾದ ನವೀನ್, ಮಾರ್ಕೆಟಿಂಗ್ ವ್ಯವಸ್ಥಾಪಕರಾದ ನಾಗೇಂದ್ರ ಹಾಗೂ ವಾಸನ್ ಐ ಕೇರ್ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.