ತುಮಕೂರು : ಆಶಾಡಭೂತಿತನದ ಜಂಗಮರಿಂದ ಬಸವಣ್ಣನವರ ಆಶಯಗಳಿಗೆ ಧಕ್ಕೆಯುಂಟಾಗಿದೆ ಮನುಷ್ಯ ದುರಾಸೆ ಬಿಡಬೇಕು ಆತ್ಮಶುದ್ಧಿ ಇರಬೇಕು, ವಚನಗಳ ಮೌಲ್ಯವೂ ಅದೇ ಆಗಿದ್ದು, ಇಂದಿಗೂ ಅದೇ ತೂಕವನ್ನು ಹೊಂದಿವೆ ಎಂದು ಡಾ.ಮಂಜುಳಾ ಹೇಳಿದರು.
ಅವರು ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆ ಹಮ್ಮಿಕೊಂಡಿದ್ದ “ವಚನ-ನಿರ್ವಚನ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶರಣರು ಸಕಲ ಜೀವಿಗಳಿಗೂ ಲೇಸನೇ ಬಯಸಿದರು ಎಂದು ಹೇಳಿದ ಅವರು, ವಚನಗಳು ನವನವೋನ್ಮೇಷ ಶಾಲಿನಿಯಾದವು . ವಚನಕಾರರು ನುಡಿದಂತೆ ನಡೆದ ಮಹಾನುಭಾವರು .ಜಾತಿ,ಕುಲ,ವರ್ಣಗಳನ್ನು ಮೀರಿ ನಡೆದರು.ದೈನಂದಿನ ಜೀವನದ ಅನುಭವಗಳನ್ನು ,ಅನುಭವ ಮಂಟಪದಲ್ಲಿ ಹಂಚಿಕೊಂಡರು.ಅನುಭವ ಮಂಟಪ ಎಂಬ ಹೆಸರೇ ವಿಶಿಷ್ಟವಾದುದು .ಅಕ್ಕ ಮಹಾದೇವಿಯಂತೆ ಓದು ಬರಹ ಕಲಿತವರ ಜೊತೆಗೆ ,ಓದು ಬರಹ ಗೊತ್ತಿಲ್ಲದ ಎμÉ್ಟೂ ಮಂದಿ ವಚನಗಳನ್ನು ರಚಿಸಿರುವರು. ವಚನಕಾರರಿಗೆ ಮನಸ್ಸೇ ಕಾನೂನಾಗಿ ,ಸಹಕಾರ ತತ್ವ ಮೂಲವಾಗಿತ್ತು.
ಸ್ತ್ರೀ ಸಬಲೀಕರಣವನ್ನೂ ಕೂಡಾ ಸಾಧಿಸಿದ್ದರು. ಯಾವುದೇ ಕೆಲಸ ಮಾಡುವ ಮೊದಲು ನಿಖರವಾಗಿರಬೇಕು .ಅದನ್ನು ಗಟ್ಟಿತನದಿಂದ ಮಾಡಬೇಕು ಎಂದು ಹೇಳಿದ ಅವರು ,ಲೇಖಕಿಯರ ಸಂಘವು ಹಮ್ಮಿಕೊಂಡಿರುವ ವಚನ -ನಿರ್ವಚನ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಶ್ಲಾಘಿಸಿದರು.
ಅತಿಥಿಗಳಾಗಿದ್ದ ಸಿ.ಎಲ್.ಸುನಂದಮ್ಮ ರವರು ಮಾತನಾಡಿ ನಿರ್ವಚನ ಪದವು ವಾಚ್ಯಾರ್ಥ, ಸೂಚ್ಯಾರ್ಥ ಮತ್ತು ಪ್ರಸ್ತುತ ಸಂದರ್ಭಕ್ಕೆ ಅನ್ವಯಿಸುವುದನ್ನು ಒಳಗೊಂಡಿದೆ ಎಂಬುದಾಗಿ ಅರ್ಥೈಸಿಕೊಳ್ಳಬಹುದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ,ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜುರವರು ಮಾತನಾಡುತ್ತಾ ,ವಚನಗಳು ಎಲ್ಲಾ ಕಾಲಕ್ಕೂ ಪ್ರಸ್ತುತ. ಸಮಕಾಲೀನ ಸವಾಲುಗಳಿಗೆ ವಚನಗಳಲ್ಲಿ ನಾವು ಉತ್ತರ ಪಡೆಯಬಹುದಾಗಿದೆ ಎಂದರು .
“ವಚನ – ನಿರ್ವಚನ ಸರಣಿ ಕಾರ್ಯಕ್ರಮ ದ” ಸಂಚಾಲಕರಾದ ಸುಮಾ ಪ್ರಸನ್ನ ರವರು ಪ್ರಸ್ತಾವನೆ ಮಾಡಿದರು .
ರಾಗಿಣಿ ಮತ್ತು ಅವರ ತಂಡದವರಾದ ರಾಚಮ್ಮ, ಸುಮಾ ,ಕುಮುದಾ ಮತ್ತು ವೀಣಾ ರವರು , ಅಕ್ಕನ ಆಯ್ದ ಐದು ವಚನಗಳನ್ನು ಹಾಡಿದರು.
ರಾಗಿಣಿ ಮತ್ತು ತಂಡದವರು ಹಾಡಿದ ವಚನಗಳನ್ನು ,ಪ್ರವೀಣ ,ಕಮಲಾ ರಾಜೇಶ್ ,ಪ್ರಭಾ ವಸಂತ ಮತ್ತು ದೀಪಿಕಾ ಮರಳೂರುರವರು ನಿರ್ವಚನಗೊಳಿಸಿದರು.
ಮಹದೇವಮ್ಮ ಸ್ವಾಗತಿ, ಗೀತಾ ನಾಗೇಶ್ ಕಾರ್ಯಕ್ರಮದ ನಿರೂಪಿಸಿದರು.