ತುಮಕೂರು : ಸೆಪ್ಟೆಂಬರ್ 21 ರಂದು ತುಮಕೂರಿನಲ್ಲಿ ನೆಡೆಯಲಿರುವ ಭಜರಂಗದಳದ ಗಣಪತಿ ವಿಸರ್ಜನಾ ಸಮಾರಂಭದ ಬಗ್ಗೆ ಅರಿವು ಮೂಡಿಸಲು ಪೊಲೀಸರಿಂದ ಪಥ ಸಂಚಲನ ನಡೆಸಿದರು.
ಭಜರಂಗದಳದ ನಾಗರಕಟ್ಟೆ ಗಣಪತಿ ವಿಸರ್ಜನಾ ಮೆರವಣಿಗೆ ಯ ಬಂದೋಬಸ್ತ್ ಕರ್ತವ್ಯಕ್ಕಾಗಿ 02 ಡಿಎಸ್ಪಿ, 9 ಇನ್ಸ್‌ಪೆಕ್ಟರ್,20 ಸಬ್ ಇನ್ಸ್‌ಪೆಕ್ಟರ್,62 ಎಎಸ್ಐ, 520 ಪೊಲೀಸ್ ಕಾನ್ಸ್‌ಟೇಬಲ್, 100 ಹೋಂ ಗಾರ್ಡ್ಸ್,03 ಕೆಎಸ್ಆರ್ಪಿ,05 ಡಿಎಆರ್. ನೇಮಿಸಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುಂಜಾಗ್ರತೆ ವಹಿಸಿದ್ದು, ಗಣಪತಿ ಸಾಗುವ ರಸ್ತೆಗಳಲ್ಲಿ ಇಂದು ಪೊಲೀಸ್ ಪಥ ಸಂಚಲನ ನಡೆಸಲಾಯಿತು.