ತುಮಕೂರು:ದೊಡ್ಡನಾರವಂಗಲ ಗ್ರಾಮ ಪಂಚಾಯತಿಯಲ್ಲಿನ ಅತ್ಯುತ್ತಮ ಅಭಿವೃದ್ಧಿ ಕಾರ್ಯ ನಿರ್ವಹಣೆಗಾಗಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಲಭಿಸಿದೆ.
ಸೋಮವಾರ ವಿಧಾನ ಸೌಧದಲ್ಲಿ ನಡೆದ ಗಾಂಧಿಗ್ರಾಮ ಪುರಸ್ಕಾರ ಕಾರ್ಯಕ್ರಮದಲ್ಲಿ ಗ್ರಾಮಾಂತರದ ಬೆಳ್ಳಾವಿ ಹೋಬಳಿಯ ದೊಡ್ಡನಾರವಂಗಲ ಗ್ರಾಮ ಪಂಚಾಯಿತಿಯು ಸ್ವಚ್ಛತೆ, ನರೇಗಾ ಅನುಷ್ಠಾನ, ಕುಡಿಯುವ ನೀರು ಸರಬರಾಜು, ಉತ್ತಮ ಕಾರ್ಯವೈಖರಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿರುವುದಕ್ಕೆ ಸರಕಾರ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಗೌರವಿಸಿದೆ.
ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ ಖರ್ಗೆ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಲತಾ, ಉಪಾಧ್ಯಕ್ಷ ಶಶಿಧರ್,ಪಿಡಿಒ ರವಿಕುಮಾರ್ ಅವರಿಗೆ ವೇದಿಕೆಯಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.
ಪೋಟೋ ಕ್ಯಾಪ್ಷನ್: ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ ಖರ್ಗೆ ಅವರು ದೊಡ್ಡನಾರವಂಗಲ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಪುಷ್ಪಲತಾ, ಉಪಾಧ್ಯಕ್ಷ ಶಶಿಧರ್,ಪಿಡಿಒ ರವಿಕುಮಾರ್ ಅವರಿಗೆ