ತುಮಕೂರು: ಸೆಪ್ಟೆಂಬರ್ 18ರ ಬೆಳಗ್ಗೆ ಬೆಳಿಗ್ಗೇನೆ ಜಿಲ್ಲಾ ಪೊಲೀಸ್ ಅದೀಕ್ಷಕರಾದ ಅಶೋಕ್ ಕೆ.ವೆಂಕಟ್ ರವರ ನೇತೃತ್ವದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತುಮಕೂರು ನಗರದ ವಿವಿಧ ರಸ್ತೆಗಳಲ್ಲಿ ಪೊಲೀಸ್ ಪಥಸಂಚಲನ ನೆಡೆಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ನಗರದ ಜೆಸಿ ರಸ್ತೆ, ಮಂಡಿಪೇಟೆ, ಬಿಜಿ ಪಾಳ್ಯ, ಪಿ.ಹೆಚ್.ಕಾಲೋನಿ, ಕುರಿಪಾಳ್ಯ, ಬನಶಂಕರಿ ವೃತ್ತ ದಿಂದ ಮರಳೂರಿನ ರಸ್ತೆಗಳಲ್ಲಿ ಪಥಸಂಚಲನ ನೆಡೆಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ನಗರ ಡಿಎಸ್ಪಿ ಶ್ರೀನಿವಾಸ್,ನಗರದ ಇನ್ಸ್ಪೆಕ್ಟರ್ ಗಳು ಮತ್ತು ತುಮಕೂರು ನಗರ ಉಪವಿಭಾಗ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.