ತುಮಕೂರು : ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವವರು ಕಡ್ಡಾಯವಾಗಿ ಸುರಕ್ಷತೆಯನ್ನು ಕಾಪಾಡಿಕೊಂಡು ಹೋಗಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವವರು ಪೆಂಡಾಲ್ ಗಳಿಗೆ ಅಳವಡಿಸುವ ವಿದ್ಯುತ್ ಸಂಪರ್ಕವನ್ನು ಸುರಕ್ಷಿತವಾಗಿ ಬೆಸ್ಕಾಂ ನ ಅನುಮತಿ ಪತ್ರದೊಂದಿಗೆ ಪಡೆಯಬೇಕೆಂದು ಸೂಚಿಸಲಾಗಿದೆ.
ಧ್ವನಿವರ್ದಕಗಳ ಬಳಕೆಗೆ ಸಂಬಂಧಪಟ್ಟವರಿಂದ ಅನುಮತಿ ಪಡೆದು ಬೆಳಗ್ಗೆ 6 ಗಂಟೆಗೆ ಮುಂಚಿತವಾಗಿ ಮತ್ತು ರಾತ್ರಿ 10 ಗಂಟೆಯ ನಂತರ ಧ್ವನಿವರ್ದಕಗಳನ್ನು ಉಪಯೋಗಿಸಬಾರದು. ಡಿ.ಜೆ ಸೌಂಡ್ ಸಿಸ್ಟಮ್ ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದಾಕಾಲ ಪೆಂಡಾಲ್‍ನಲ್ಲಿ ಸ್ವಯಂ ಸೇವಕರು ಇರುವುದು. ಗಣೇಶ ಮೂರ್ತಿಗಳ ಮೆರವಣಿಗೆಯಿಂದ ಇತರೆ ಸಾರ್ವಜನಿಕರಿಗೆ ಅನಗತ್ಯವಾಗಿ ತೊಂದರೆಯಾಗದಂತೆ ನಡೆದುಕೊಳ್ಳುವುದು. ಆದಷ್ಟು ಬೇಗನೆ ಸೂರ್ಯಾಸ್ತದೊಳಗೆ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವುದು, ಹಬ್ಬದ ಪ್ರಯುಕ್ತ ಪೆÇಲೀಸ್ ಇಲಾಖೆ ವತಿಯಿಂದ ನೀಡಲಾದ ನಿರ್ದೇಶನಗಳನ್ನು ತಪ್ಪದೇ ಪಾಲಸತಕ್ಕದ್ದು. ತುರ್ತು ಸಂದರ್ಭಗಳಲ್ಲಿ 112 ಸಹಾಯ ಪಡೆದುಕೊಳ್ಳುವುದು ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.