ತುಮಕೂರು ಜ.14 : ಮಂಗಳೂರಿನಲ್ಲಿ ಜನವರಿ 2025ರಲ್ಲಿ ನಡೆದ ಮೊದಲ ಸೌತ್ ಏಷ್ಯಯನ್ ಮಾಸ್ಟರ್ಸ್ ಅಥ್ಲೆಟಿಕ್ ಓಪನ್ ಚಾಂಪಿಯನ್ ಶಿಪ್‍ನಲ್ಲಿ 4×100 ರಿಲೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ.
ತುಮಕೂರಿನ ಅಂತರಾಷ್ಟ್ರೀಯ ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್‍ರವರು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ 2025ರ ಜನವರಿ 10 ಮತ್ತು 11ರಂದು ನಡೆದ 75ವರ್ಷದ ವಯೋಮಿತಿ ವಿಭಾಗದಲ್ಲಿ ಭಾಗವಹಿಸಿ ಮೊದಲ ಸೌತ್ ಏಷ್ಯಯನ್ ಮಾಸ್ಟರ್ಸ್ ಅಥ್ಲೆಟಿಕ್ ಓಪನ್ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಿ 4×100 ರಿಲೆ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಪಡೆದು ದೇಶ ಮತ್ತು ರಾಜ್ಯಕ್ಕೆ ಕೀರ್ತಿಯನ್ನು ತಂದಿರುತ್ತಾರೆ.
ಇವರು 2ನೇ ಬಾರಿಗೆ ಏಷ್ಯಾ ಕ್ರೀಡಾಕೂಡದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ.