ಸ .ನೌ. ಸಂಘದ ಅಧ್ಯಕ್ಷ ಸ್ಥಾನಕ್ಕೆ  5 ನಾಮಪತ್ರ

ತುಮಕೂರು: ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಇಂದು ಕಡೇದಿನವಾಗಿದ್ದು ಮೂರುಮಂದಿ ಐದು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ರಮೇಶ್ ಮತ್ತು ನರಸಿಂಹರಾಜು ತಲಾ ಎರಡು ಹಾಗೂ ಪರಶಿವಮೂರ್ತಿ ಒಂದು ನಾಮಪತ್ರ ಸಲ್ಲಿಸಿದ್ದಾರೆ.
ಖಜಾಂಚಿ ಸ್ಥಾನಕ್ಕೆ ಹರೀಶ್ ಕುಮಾರ್,ಷಡಕ್ಷರಿ ಮತ್ತು ತೇಜೇಶ್ ನಾಮಪತ್ರ ಸಲ್ಲಿಸಿದ್ದರೆ, ರಾಜ್ಯಪರಿಷತ್ ಸ್ಥಾನಕ್ಕೆ ಗಂಗಾಧರ್,ನರಸಿಂಹ ಮೂರ್ತಿ ಮತ್ತು ಮಂಜುನಾಥ್ ಎಂಬುವರು ಆಯ್ಕೆ ಬಯಸಿದ್ದಾರೆ.
ನಾಮಪತ್ರ ವಾಪಸ್ ಪಡೆಯಲು ಇದೇ 29 ಕಡೇದಿನವಾಗಿದ್ದು, ಅಗತ್ಯ ಬಿದ್ದರೆ ಡಿಸೆಂಬರ್ ನಾಲ್ಕರಂದು ಮತದಾನ ನಡೆಯಲಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *