ತುಮಕೂರು:ಸರಕಾರಿ ಶಾಲೆಯ ಮಕ್ಕಳು ಕೀಳಿರಿಮೆಯನ್ನು ಬಿಟ್ಟು, ನಾನು ಸರಕಾರಿ ಶಾಲೆಯ ಮಗು ಎಂದು ಹೇಳುವ ಹೆಗ್ಗಳಿಕೆಯನ್ನು ಬೆಳೆಸಿಕೊಳ್ಳಬೇಕಿದೆ ಎಂದು ಹಿರಿಯ ಹರಿಕಥಾ ವಿದ್ವಾನ ಕಲಾಶ್ರೀ ಡಾ.ಲಕ್ಷ್ಮಣದಾಸ್ ತಿಳಿಸಿದರು.
ಗುಬ್ಬಿ ತಾಲೂಕು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಡುಶೆಟ್ಟಿಹಳ್ಳಿಯ ಜಿ.ವಿ.ಮಾಲತಮ್ಮ ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ಚಿಗುರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಸರಕಾರಿ ಶಾಲೆಗಳಲ್ಲಿ ಓದಿದ ಅನೇಕರು ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಾಗಿ,ರಾಜಕಾರಣಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಇಂದು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಕಡಬ ಗ್ರಾ.ಪಂ.ನ ಅಧ್ಯಕ್ಷೆಯಾಗಿರುವ ಜಯಶ್ರೀ ಸಹ ಇದೇ ಸರಕಾರಿ ಶಾಲೆಯ ವಿದ್ಯಾರ್ಥಿನಿ. ಇಂತಹವರು ನಿಮಗೆ ಮಾದರಿಯಾಗಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಹಿರಿಯರಾದ ಕಾಡಶೆಟ್ಟಿಹಳ್ಳಿ ಸತೀಶ್ ಹಾಗೂ ಶಾಲೆಯ ಶಿಕ್ಷಕ ವೃಂದ ಮತ್ತು ಎಸ್.ಡಿ.ಎಂ.ಸಿಯ ನಿರಂತರ ಪ್ರಯತ್ನದಿಂದಾಗಿ ಇಂದು ಶಾಲೆಗೆ ಬಹಳ ಉನ್ನತಿಗೆ ಬೆಳೆದಿದೆ.ಸುತ್ತಮುತ್ತಲ ಹತ್ತಾರು ಹಳ್ಳಿಗಳ ಮಕ್ಕಳು ಈ ಶಾಲೆಗೆ ಪ್ರವೇಶ ಪಡೆಯುತ್ತಿದ್ದಾರೆ. ಪಟ್ಟಣ ಪ್ರದೇಶದ ಖಾಸಗಿ ಶಾಲೆಗಳನ್ನು ನಾಚಿಸುವಂತೆ ಮೂಲಭೂತ ಸೌಕರ್ಯದ ಜೊತೆಗೆ,ಪಾಠ ಪ್ರವಚನಗಳು ನಡೆಯುತ್ತಿವೆ.ಇದರ ಸದುಪಯೋಗವನ್ನು ನೀವೆಲ್ಲರೂ ಪಡೆದುಕೊಳ್ಳಬೇಕು.ಕನ್ನಡ ಮತ್ತು ಸಂಸ್ಕøತಿ ಇಲಾಖೆ ಚಿಗುರು ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗೆ ವೇದಿಕೆ ಒದಗಿಸಿ, ಮಕ್ಕಳಲ್ಲಿ ಸಾಂಸ್ಕøತಿಕ ಅಭಿರುಚಿಯನ್ನು ಬೆಳೆಸಲು ಮುಂದಾಗಿದೆ. ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠ ಶಾಲೆ, ತಂದೆ ತಾಯಿಗಳಿಗೆ ಗೌರವ ನೀಡಿ, ನಂತರ ಪಾಠ ಕಲಿಸಿದ ಗುರುಗಳಲ್ಲಿ ಭಕ್ತಿ ಇದ್ದರೆ,ನೀವು ಕಲಿತ ಪಾಠವೂ ನಿಮ್ಮಲ್ಲಿ ಉಳಿಯುತ್ತದೆ ಎಂದು ಡಾ.ಲಕ್ಷ್ಮಣದಾಸ್ ತಿಳಿಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮೇಲ್ವಿಚಾರಕರಾದ ಸುರೇಶಕುಮಾರ್ ಮಾತನಾಡಿ,ಚಿಗುರು ಬೆಳೆಯುವ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಸರಕಾರ ರೂಪಿಸಿದ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ 8 ವರ್ಷದಿಂದ 15 ವರ್ಷದವರೆಗಿನ ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ತೋರ್ಪಡಿಸಲು ಯೋಜನೆ ರೂಪಿಸಲಾಗಿದೆ.ಯುವ ಸೌರಭದಲ್ಲಿ ಯುವಜನರಿಗೆ, ಹಾಗೂ ಸಾಂಸ್ಕøತಿಕ ಸೌರಭದಲ್ಲಿ ವಯಸ್ಕರ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗಿದೆ.ಮನುಷ್ಯ ಯಾವುದೇ ಹಂತದಲ್ಲಿ ಸಾಂಸ್ಕøತಿಕ ವ್ಯಕ್ತಿಯಾದರೆ ಆತನ ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಕೆಲಸ ಮಾಡುವಂತಹ ಆತ್ಮಸ್ಥೈರ್ಯವನ್ನು ಹೊಂದುತ್ತಾನೆ.ಹಾಗಾಗಿಯೇ ಮಕ್ಕಳಲ್ಲಿ ಸಾಂಸ್ಕøತಿಕ ಮನಸ್ಥಿತಿಯನ್ನು ಹುಟ್ಟು ಹಾಕಲು ಈ ಕಾರ್ಯಕ್ರಮ ಆಯೋಜಿಸ ಲಾಗುತ್ತಿದೆ.ಬಹು ಕಲಾಪ್ರಕಾರದ ಚಿಗುರು ಕಾರ್ಯಕ್ರಮ ಎಲ್ಲಾ ಪ್ರಕಾರದ ಕಲೆಗಳ ಪ್ರದರ್ಶನಕ್ಕೆ ವೇದಿಕೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಡುಶೆಟ್ಟಿಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶೃತಿನಾ ವಹಿಸಿದ್ದರು. ಕಡಬ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಜಯಶ್ರೀ,ಕಡಬ ಗ್ರಾ.ಪಂ.ಸದಸ್ಯರಾದ ಕಾಡುಶೆಟ್ಟಿಹಳ್ಳಿ ಸತೀಶ್, ಸಾಹಿತಿ ಪತ್ರಕರ್ತ ರಾಜೇಶ್ ಗುಬ್ಬಿ,ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಸುಧಾರಾಣಿ,ಮುಖ್ಯ ಶಿಕ್ಷಕರಾದ ಆರ್.ಬಿ.ಗಂಗಾಧರಯ್ಯ ಉಪಸ್ಥಿತರಿದ್ದರು.
ಚಿಗುರು ಕಾರ್ಯಕ್ರಮದ ಅಂಗವಾಗಿ ತುಮಕೂರಿನ ಶಿರಾಗೇಟ್‍ನ ಶಾರದ ಸ್ಕೂಲ್ ಫೈನ್ ಆಟ್ರ್ಸ್‍ನ ಮಕ್ಕಳಿಂದ ಶಾಸ್ತ್ರೀಯ ಸಂಗೀತ, ಭಾವಾಲಯ ಟ್ರಸ್ಟ್‍ನ ಮಕ್ಕಳಿಂದ ಸುಗಮ ಸಂಗೀತ, ಗುಬ್ಬಿಯ ರೇವತಿ ನೃತ್ಯ ಕಲಾಮಂದಿರದ ಮಕ್ಕಳಿಂದ ನೃತ್ಯ ರೂಪಕ, ಕಾಡುಶೆಟ್ಟಿಹಳ್ಳಿ ಸರಕಾರಿ ಶಾಲೆ ಮಕ್ಕಳಿಂದ ಬಿಲ್ಲಹಬ್ಬ ನಾಟಕ,ಧನಲಕ್ಷ್ಮಿ ಮತ್ತು ತಂಡದಿಂದ ಜನಪದ ನೃತ್ಯ,ಸಿದ್ದೇಶ ಮತ್ತು ರಾಘವೇಂದ್ರ ಹಾಗೂ ತಂಡದಿಂದ ವೀರಭದ್ರ ಕುಣಿತ ಮತ್ತಿತರರ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು