
ತುಮಕೂರು : ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯು 2020-21ನೇ ಸಾಲಿನ ಕರ್ನಾಟಕ ರಾಜ್ಯದ ಉತ್ತಮ ಜಿಲ್ಲಾ ಶಾಖೆ ಎಂದು ದ್ವಿತೀಯ ಸ್ಥಾನ ಪಡೆದಿದ್ದು, ರಾಜ್ಯಪಾಲರು ಹಾಗೂ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆಯ ಅಧ್ಯಕ್ಷರಾದ ಥಾವರ್ ಚಂದ್ ಗೆಹ್ಲೋಟ್ ಅವರು ಡಿಸೆಂಬರ್ 19ರಂದು ರಾಜಭವನದಲ್ಲಿ ಜರುಗಿದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಾಖೆಯ ಸಭಾಪತಿ ಟಿ.ಬಿ. ಶೇಖರ್, ಗೌರವ ಕಾರ್ಯದರ್ಶಿ ಡಾ: ಜಿ.ಕೆ. ಸನತ್ ಕುಮಾರ್, ಖಜಾಂಚಿ ಶಿವಕುಮಾರ್, ರಾಷ್ಟ್ರ ಸಮಿತಿ ಸದಸ್ಯ ಎಸ್. ನಾಗಣ್ಣ, ಆರೋಗ್ಯ ಇಲಾಖೆ ಉಪನಿರ್ದೇಶಕ ಡಾ|| ವೀರಭದ್ರಯ್ಯ, ನಿರ್ದೇಶಕ ಡಿ.ಬಸವರಾಜು, ಡಾ: ಅಪರ್ಣ ಪ್ರಸನ್ನ, ಜಿ.ವೆಂಕಟೇಶ್, ಸುಭಾಷಿಣಿ ರವೀಶ್ ಹಾಗೂ ಟಿ.ಆರ್. ಲೋಕೇಶ್ ಉಪಸ್ಥಿತರಿದ್ದರು.