ತುಮಕೂರು : ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮಿಷನ್-500ನಲ್ಲಿ ಮುಳುಗಿ ಹೋಗಿರುವುದರಿಂದ ಹಾಸ್ಟಲ್ ಸಮಸ್ಯೆಗಳ ಕಡೆ ಗಮನ ಹರಿಸದ ಕಾರಣ ಸಿಇಓ ಮತ್ತು ಸಮಾಜ ಕಲ್ಯಾಣಾಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಾಸ್ಟಲ್‍ನಲ್ಲಿದ್ದ ಪದವಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ತುಮಕೂರಿನಲ್ಲಿ ಕಳೆದ 3ತಿಂಂಗಳಿಂದ ಯುವತಿಯರು ಮತ್ತು ಯುವಕರ ವಿದ್ಯಾರ್ಥಿ ನಿಲಯಗಳಲ್ಲಿ ಹಲವಾರು ಸಮಸ್ಯೆಗಳು ಮತ್ತು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೂ, ತಮ್ಮ ಇಲಾಖೆಯ ಅಡಿಯಲ್ಲಿ ಬರುವ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಕೂಲಂಕುಷವಾಗಿ ವಿಚಾರಣೆಗೆ ಒಳ ಪಡಿಸದೆ, ಹಾಸ್ಟಲ್‍ಗಳಿಗೆ ಭೇಟಿ ನೀಡದೆ ನನ್ನದು ಏನಿದ್ದರೂ ಉದ್ಯೋಗ ಖಾತ್ರಿ ಯೋಜನೆಯ ಮಿಷನ್-500 ಮಾತ್ರ ನನ್ನ ಕೆಲಸವೆಂದುಕೊಂಡು ಜಿಲ್ಲೆಯಲ್ಲಿ ಉದಿಬದು ಹಾಕಿಸುವುದೇ ಜಿಲ್ಲಾ ಪಂಚಾಯಿತಿ ಸಿಇಓ ಕೆಲಸ ಅಂದುಕೊಂಡಿದ್ದರಿಂದ ತಮ್ಮ ಇಲಾಖೆಯ ವಿದ್ಯಾರ್ಥಿಗಳು ಬೀದಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಯಾವ ಕ್ರಮ ಕೈಗೊಳ್ಳದೆ, ಸಮಸ್ಯೆ ಆಲಿಸದೆ ಬೇಜವಾಬ್ದಾರಿ ಎಸಗಿರುವ ಸಿಇಓ ಅವರು, ಕೆಲ ದಿನಗಳ ಹಿಂದೆ ತುಮಕೂರಿನಲ್ಲಿ ವಿದ್ಯಾರ್ಥಿನಿಯರು ಮತ್ತು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಸ್ಟಲ್‍ಗಳ ಸೌಲಭ್ಯ ಸರಿಯಲ್ಲವೆಂದು ಪ್ರತಭಟಿಸಿದ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದರೂ, ಇಲಾಖೆಯ ಅಧಿಕಾರಿಯಾಗಿದ್ದರೂ ಸೌಜನ್ಯಕ್ಕಾದರೂ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ.

ಆತ್ಮಹತ್ಯೆ ಮಾಡಿಕೊಂಡಿರುವ ಎಸ್ಸಿ-ಎಸ್ಟಿ ಹಾಸ್ಟಲ್ ವಿದ್ಯಾರ್ಥಿ ಅಂಜನಕುಮಾರ್
ಇತ್ತೀಚೆಗೆ ತುಮಕೂರಿನ ಗೆದ್ದಲಹಳ್ಳಿಯ ಮಹಿಳಾ ಹಾಸ್ಟಲ್‍ನ ಡಾನ್ಸ್ ಪ್ರಕರಣವಿರಬಹದು, ಮಧುಗಿರಿಯ ವಿದ್ಯಾರ್ಥಿನಿಯರ ಹಾಸ್ಟಲ್‍ನಲ್ಲಿ ಅಪ್ರಾಪ್ತ ವಿದ್ಯಾರ್ಥಿನಿ ಗರ್ಭಿಣಿಯಾದ ಪ್ರಕರಣವಿರಬಹುದು, ತುಮಕೂರಿನಲ್ಲಿ ನಡೆದ ಹಾಸ್ಟಲ್ ಅವ್ಯವಸ್ಥೆಯ ಬಗ್ಗೆಯಾಗಲಿ ಕ್ರಮಕೈಗೊಳ್ಳದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಮತ್ತು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳಿಗೆ ಸಿಇಓ ಅವರು ಚಾಟಿ ಬೀಸದೆ ಉದಿಬದು ಅಳತೆ ಮಾಡಲು ಟೇಪು ತೆಗೆದುಕೊಂಡು ಹಳ್ಳಿಗಳಿಗೆ ಹೋಗುವುದು ಅವರ ಕೆಲಸವೇ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಇಬ್ಬರು ದಲಿತ ಸಚಿವರಿದ್ದರೂ ಹಿಂದುಳಿದ ಮತ್ತು ದಲಿತ ವಿದ್ಯಾರ್ಥಿನಿಲಯಗಳಲ್ಲಿ ಸೌಲಭ್ಯಗಳಿಲ್ಲದೆ ವಂಚಿತರಾಗಿರುವುದು, ಕಾನೂನು ಬಾಹಿರ ಚಟುವಟಿಕೆಗಳು ಅಧಿಕಾರಿಗಳಿಂದಲೇ ನಡೆಯುತ್ತಿದ್ದರೂ, ಬರೀ ಹಾಸ್ಟಲ್ ವಾರ್ಡನ್‍ಗಳ ಮೇಲಷ್ಟೇ ಕ್ರಮ ವಹಿಸುತ್ತಿರುವುದರ ಹಿಂದಿನ ಮರ್ಮವೇನು ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಈಗ ತುಮಕೂರಿನ ಹನುಮಂತಪುರದ ಹಾಸ್ಟಲ್-2ರಲ್ಲಿ ಪದವಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡು ದೇಹ ಕೊಳೆಯುವ ಸ್ಥಿತಿಗೆ ಬರುವ ತನಕ ನಿಲಯದ ಪಾಲಕರು ಏನು ಮಾಡುತ್ತಿದ್ದರು, ಹಾಸ್ಟಲ್ ಸಮಸ್ಯೆಗಳಿಂದ ಕೂಡಿವೆ ಎಂದು ತಿಳಿದಿದ್ದರೂ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಹಾಗೂ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳು ಎಲ್ಲಿ, ಏನು ಕೆಲಸ ಕಡಿದು ಹಾಕುತ್ತಿದ್ದರು.
ಒಬ್ಬ ಪ್ರತಿಭಾವಂತ ದಲಿತ ವಿದ್ಯಾರ್ಥಿ ಆತ್ನಹತ್ಯೆ ಮಾಡಿಕೊಳ್ಳುವಂತಹ ಕಾರಣ ಏನಿತ್ತು, ಈ ಆತ್ಮಹತ್ಯೆ ಮುಚ್ಚಿ ಹಾಕಲು ಅಥವಾ ತನಿಖೆಯೇ ನಡೆಯದಂತೆ ನೋಡಿಕೊಳ್ಳುವ ಎಲ್ಲಾ ಹುನ್ನಾರಗಳು ಈಗಾಗಲೇ ನಡೆಯುತ್ತಿವೆ ಎನ್ನಲಾಗುತ್ತಿದ್ದು, ದಲಿತ ಸಚಿವರಿಬ್ಬರೂ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವರೋ ಅಥವಾ ತಿಪ್ಪೆ ಸಾರಿಸುವರೋ ಕಾದು ನೋಡ ಬೇಕಿದೆ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಜಿಲ್ಲೆಯಲ್ಲಿ ವಿದ್ಯಾರ್ಥಿನಿಲಯಗಳಲ್ಲಿ ಬೃಹತ್ ಸಮಸ್ಯೆಗಳಿದ್ದರೂ ಹಾಸ್ಟಲ್‍ಗಳಿಗೆ ದಿಂಬು, ಹಾಸಿಗೆ, ಬೆಡ್‍ಶೀಟ್ ಕೊಟ್ಟಿದ್ದೇವೆ ಎಂದು ಬಿಂಬಿಸಿಕೊಳ್ಳುವ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು, ಹಾಸ್ಟಲ್ ವಿದ್ಯಾರ್ಥಿಗಳೊಂದಿಗೆ ಎಂದು ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳು ಎಲ್ಲಿದ್ದಾರೆ, ಯಾವ ಸಮಾಜ ಕಲ್ಯಾಣದಲ್ಲಿ ಮುಳುಗಿದ್ದಾರೆ ಎಂಬುದನ್ನು ಈಗಲಾದರೂ ಇದಕ್ಕೆಲ್ಲಾ ಮುಖ್ಯಸ್ಥರಾಗಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯಾನಿರ್ವಹಣಾಧಿಕಾರಿಗಳು ಕೇಳುವರೋ ಅಥವಾ ಉದ್ಯೋಗ ಖಾತ್ರಿಯ ಮಿಷನ್-500 ಅಡಿ ಟೇಪ್ ಹಿಡಿದು ಉದಿಬದಿ ಅಳೆಯುವರೋ ಜಿಲ್ಲಾ ಉಸುವಾರಿ ಸಚಿವರು ಕೇಳಲಿ ಎಂದು ದಲಿತ ಸಂಘಟನೆಗಳು ಒತ್ತಾಯಿಸಿವೆ.
ವಿವಾದಗಳಿಂದಲೇ ಮುನ್ನಲೆಗೆ ಬರುತ್ತಿದೆ ಸಮಾಜ ಕಲ್ಯಾಣ ಇಲಾಖೆ: ಎಸ್ ಎಸ್ಟಿ ಹಾಸ್ಟೆಲ್ ನಲ್ಲಿ ಪದವಿ ವಿದ್ಯಾರ್ಥಿ ಆತ್ಮಹತ್ಯೆ…..!!!!!
ತುಮಕೂರು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ತೀವ್ರ ವಿವಾದಗಳಿಂದಲೇ ಮುನ್ನಲೆಗೆ ಬರುತ್ತಿದೆ.
ತುಮಕೂರು ಗೆದ್ದಲಹಳ್ಳಿಯ ಮಹಿಳಾ ಹಾಸ್ಟೆಲ್ ಡ್ಯಾನ್ಸ್ ಪ್ರಕರಣ,ಮಧುಗಿರಿ ಹಾಸ್ಟೆಲ್ ಬಾಲಕಿ ಗರ್ಭಿಣಿಯಾದ ಪ್ರಕರಣ ಮಾಸುವ ಮೊದಲೇ ತುಮಕೂರಿನ ಹನುಮಂತಪುರದ ಎಸ್- ಎಸ್ಟಿ ಹಾಸ್ಟೆಲ್ ನಲ್ಲಿ ಪದವಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಧುಗಿರಿ ತಾಲ್ಲೂಕು ಕಸಬಾ ಹೋಬಳಿ ಮುದ್ದೇನಹಳ್ಳಿ ಗ್ರಾಮದ
ಅಂಜನ್ ಕುಮಾರ್ (20) ಮೃತ ವಿದ್ಯಾರ್ಥಿಯಾಗಿದ್ದಾನೆ, ಹಾಸ್ಟೆಲ್ ವಿದ್ಯಾರ್ಥಿಗಳು ಸಂಕ್ರಾಂತಿ ರಜೆಗೆ ತೆರಳಿದ ವೇಳೆ ಹಾಸ್ಟೆಲ್ ನಲ್ಲಿ ಒಬ್ಬನೇ ಇದ್ದ ಅಂಜನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ
ಮೃತ ಅಂಜನ್ ಕುಮಾರ್ ತುಮಕೂರು ವಿ ವಿ ಯಲ್ಲಿ ದ್ವಿತೀಯ ಬಿ ಎ ಪದವಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ನನ್ನ ಸಾವಿಗೆ ನಾನೇ ಕಾರಣ ಎಂದು ಯುವಕ ಆತ್ಮಹತ್ಯೆಗೆ ಶರಣಾಗಿರುವ ಡೆತ್ ನೋಟ್ ಸಿಕ್ಕಿದೆ.
ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಈ ರೀತಿ ಅನೇಕ ಘಟನೆಗಳು ನಡೆಯುತ್ತಿದ್ದರೂ ಸಹ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ಧೇಶಕರು ಹಾಗೂ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ಘಟನೆಗಳಿಗೂ ನಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ದಲಿತ ಸಮುದಾಯದ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.
ಹಿಂದುಳಿದ ಮತ್ತು ದಲಿತ ವಿದ್ಯಾರ್ಥಿಗಳನ್ನು ಕಡೆಗಣಿಸಿರುವ
ಈ ಅಧಿಕಾರಿಗಳು ನಾವು ನಡೆದಿದ್ದೇ ದಾರಿ ಎಂದು ತಮ್ಮ ಮೂಗಿನ ನೇರಕ್ಕೆ ಆಡಳಿತ ನಡೆಸುತ್ತಿದ್ದಾರೆ ಎಂದು ದಲಿತ ಸಂಘಟನೆ ಮುಖಂಡರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.