ಆ.16 ಮತ್ತು 17 ರಂದು ಈಶ ಫೌಂಡೇಷನ್ ವತಿಯಿಂದ  ಗ್ರಾಮೋತ್ಸವ

ತುಮಕೂರು : ಈಶ ಫೌಂಡೇಷನ್ ವತಿಯಿಂದ  ಆ.16 ಮತ್ತು 17 ರಂದು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಗ್ರಾಮೀಣ ಕ್ರೀಡಾ ಉತ್ಸವ ಜರುಗಲಿದೆ ಎಂದು ಫೌಂಡೇಶನ್ ಸ್ವಯಂ ಸೇವಕ ವಿನಯ್ ನಂಜುಡಪ್ಪ ತಿಳಿಸಿದರು.

ಅವರು ಮಂಗಳವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 17ನೇ ಆವೃತ್ತಿಯಾದ ಈ ವರ್ಷದ ಈಶ ಗ್ರಾಮೋತ್ಸವವು ಕರ್ನಾಟಕದಾದ್ಯಂತ 700ಕ್ಕೂ ಹೆಚ್ಚು ತಂಡಗಳ ಸ್ಪರ್ಧೆಗಳಿಗೆ ಸಾಕ್ಷಿಯಾಗಲಿದೆ.ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಪುದುಚೇರಿ ಮತ್ತು ಮೊದಲ ಬಾರಿಗೆ ಒಡಿಶಾ ಸೇರಿದಂತೆ 35,000 ಕ್ಕೂ ಹೆಚ್ಚು ಗ್ರಾಮಗಳನ್ನು ಒಳಗೊಂಡಿರುವ 2025ರ ಈಶ ಗ್ರಾಮೋತ್ಸವ ಇದಾಗಿದೆ ಎಂದರು.

 ಭಾರತದ ಅತಿದೊಡ್ಡ ಗ್ರಾಮೀಣ ಕ್ರೀಡಾ ಉತ್ಸವವಾದ ಈಶ ಗ್ರಾಮೋತ್ಸವದ 17ನೇ ಆವೃತ್ತಿ ಆಗಸ್ಟ್ 10ರಂದು ಕರ್ನಾಟಕದಲ್ಲಿ ಆರಂಭವಾಯಿತು.

ಈಶ ಗ್ರಾಮೋತ್ಸವ ಕರ್ನಾಟಕದ 18 ಜಿಲ್ಲೆಗಳಲ್ಲಿ 19 ಕ್ಲಸ್ಟರ್‌ಗಳಲ್ಲಿ ನಡೆಯುತ್ತಿದೆ, ಇವುಗಳಲ್ಲಿ ಎಂಟು ಕ್ಲಸ್ಟರ್‌ಗಳಲ್ಲಿ ಥ್ರೋಬಾಲ್ ಪಂದ್ಯಾವಳಿಗಳು ನಡೆಯುತ್ತವೆ, ಪುರುಷರ ವಿಭಾಗದಲ್ಲಿ ವಾಲಿಬಾಲ್ ಮತ್ತು ಮಹಿಳೆಯರ ವಿಭಾಗದಲ್ಲಿ ಥ್ರೋಬಾಲ್ ಇರುತ್ತದೆ, ಫೈನಲ್‌ನಲ್ಲಿ ಪ್ಯಾರಾ ವಾಲಿಬಾಲ್‌ನ ಪ್ರದರ್ಶನ ಪಂದ್ಯವೂ ಜರುಗಲಿದೆ. ರಾಜ್ಯದಲ್ಲಿ ಕ್ಲಸ್ಟರ್ ಪಂದ್ಯಗಳು ಈಗಾಗಲೇ ಆರಂಭವಾಗಿದ್ದು, ವಿಭಾಗೀಯ ಪಂದ್ಯಗಳು ಆ. 31ರಂದು ಉಡುಪಿಯಲ್ಲಿ ಮತ್ತು ಸೆ. 7ರಂದು ಸದ್ಗುರು ಸನ್ನಿಧಿ, ಚಿಕ್ಕಬಳ್ಳಾಪುರದಲ್ಲಿ ನಿಗದಿಯಾಗಿವೆ.

ದೇಶದಾದ್ಯಂತ, ಈಶ ಗ್ರಾಮೋತ್ಸವವು ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಪುದುಚೇರಿ ಮತ್ತು ಮೊದಲ ಬಾರಿಗೆ ಒಡಿಶಾ ಸೇರಿದಂತೆ 35,000 ಕ್ಕೂ ಹೆಚ್ಚು ಗ್ರಾಮಗಳನ್ನು ವ್ಯಾಪಿಸಲಿದೆ. ಈ ವರ್ಷ 5,000ಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ 50,000ಕ್ಕೂ ಹೆಚ್ಚು ಗ್ರಾಮೀಣ ಆಟಗಾರರು ಸ್ಪರ್ಧಿಸುತ್ತಿದ್ದು, 6,000ಕ್ಕೂ ಹೆಚ್ಚು ತಂಡಗಳು ರಚನೆಯಾಗಿವೆ,

ಗ್ರಾಮೋತ್ಸವವು ಮೂರು ಹಂತಗಳಲ್ಲಿ ನಡೆಯಲಿದೆ ಕ್ಲಸ್ಟರ್ ಹಂತ, ವಿಭಾಗೀಯ ಹಂತ ಮತ್ತು ಫೈನಲ್ ಇರಲಿದೆ ಎಂದು ವಿವರಿಸಿದರು.

 ಫೈನಲ್ ಪಂದ್ಯವು ಸೆ. 21 ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರನ ಆದಿಯೋಗಿ ಸ್ಥಳದಲ್ಲಿ ನಡೆಯಲಿದೆ. ವಾಲಿಬಾಲ್ ಹಾಗೂ ಥ್ರೋಬಾಲ್ ವಿಭಾಗದಲ್ಲಿ ತಲಾ ಐದು ಲಕ್ಷ ರೂ ಬಹುಮಾನ ವಿರಲಿದೆ ಎಂದರು.

ಗೋಷ್ಠಿಯಲ್ಲಿ ಈಶ ಫೌಂಡೇಶನ್ ನ ಹರೀಶ್, ಅರುಣ್ ಹಾಗೂ ಡಾ.ವತ್ಸಲ ಇದ್ದರು.

Leave a Reply

Your email address will not be published. Required fields are marked *