ಜಿಎಸ್‍ಟಿದರ ಪರಿಷ್ಕರಣೆ: 17ರಂದು ವಿಚಾರ ವಿನಿಮಯ

ತುಮಕೂರ : ಕೇಂದ್ರ ಸರ್ಕಾರಜಾರಿಗೆತರಲು ಉದ್ದೇಶಿಸಿರುವ ಜಿಎಸ್‍ಟಿದರಪರಿಷ್ಕರಣೆಯ‘ಜಿಎಸ್‍ಟಿ-2.0 ಸುಧಾರಣೆಗಳು-2025’ ವಿಷಯವಾಗಿ ಜಿಲ್ಲಾ ವಾಣಿಜ್ಯ ಮತ್ತರು ಕೈಗಾರಿಕಾ ಸಂಸ್ಥೆ ಈ ತಿಂಗಳ 17ರಂದು ನಗರದಲ್ಲಿವಿಚಾರ ವಿನಿಮಯಕಾರ್ಯಕ್ರಮ ಹಮ್ಮಿಕೊಂಡಿದೆ.

ಭಾನುವಾರ ಸಂಸ್ಥೆಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಸಂಬಂಧಮಾಹಿತಿ ನೀಡಿದ ಸಂಸ್ಥೆಯ ಅಧ್ಯಕ್ಷ ಪಾಂಡುರಂಗ ಕುರಂದವಾಡ ಅವರು, ತೆರಿಗೆದರ ಪರಿಷ್ಕರಣೆಯ ಅನುಕೂಲಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಹಾಗೂ ಅವರಅಭಿಪ್ರಾಯ ಪಡೆಯುವ ಈ ಕಾರ್ಯಕ್ರಮವನ್ನು 17ರಂದು ಮಧ್ಯಾಹ್ನಾ 2 ಗಂಟೆಗೆ ನಗರದ ಅರ್ಬನ್ ರೆಸಾರ್ಟ್‍ನಲ್ಲಿ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಕಾರ್ಯಕ್ರಮ ಉದ್ಘಾಟನೆ ಮಾಡುವರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೆ 25 ವರ್ಷ ತುಂಬಿರುವ ಸಂದರ್ಭದಲ್ಲಿ ಸಚಿವ ಸೋಮಣ್ಣನವರು ಸಂಸ್ಥೆಯ ಬೆಳ್ಳಿ ಹಬ್ಬ ಆಚರಣೆಯ ಲೋಗೊವನ್ನು ಅನಾವರಣ ಮಾಡುವರು ಎಂದು ಹೇಳಿದರು.

ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‍ಗೌಡ ಮತ್ತಿತರ ಮುಖಂಡರು ಅತಿಥಿಗಳಾಗಿ ಭಾಗವಹಿಸುವರು.ಜಿಲ್ಲೆಯಎಲ್ಲಾ ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು, ಜನಸಾಮಾನ್ಯರು, ಸಂಘಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಕಾರ್ಯಕಾರಿ ಮಂಡಳಿ ಸದಸ್ಯರು, ಚಾರ್ಟೆಡ್ ಅಕೌಂಟೆಂಟ್ಸ್‍ಗಳು, ಲೆಕ್ಕಪರಿಶೋಧಕರು, ಸಾರ್ವಜನರಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆಕೋರಿದರು.

ಕೇಂದ್ರ ಸರ್ಕಾರದ ಪರಿಷ್ಕøತ ದರದ ತೆರಿಗೆ ಪದ್ಧತಿ ಈ ತಿಂಗಳ 22ರಿಂದ ಜಾರಿಗೆ ಬರಲಿದೆ. ಹೊಸತೆರಿಗೆ ಪದ್ದತಿಯಿಂದಎಲ್ಲಾಕ್ಷೇತ್ರದ, ಎಲ್ಲಾ ವರ್ಗದವರಿಗೂ ಅನುಕೂಲವಾಗುತ್ತದೆ. ಇಂತಹತೆರಿಗೆ ಪದ್ಧತಿಜಾರಿ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಪಾಂಡುರಂಗ ಕುರಂದವಾಡ ಅಭಿನಂದನೆ ಸಲ್ಲಿಸಿದರು.

ಜನರಿಗೆ ತೆರಿಗೆ ಹೊರೆ ಕಡಿಮೆ ಮಾಡಲು ಜಿಎಸ್‍ಟಿದರ ಪರಿಷ್ಕರಣೆ ಮಾಡಿರುವ ಕೇಂದ್ರ ಸರ್ಕಾರದ ನೀತಿಯಿಂದ ಎಲ್ಲಾ ವರ್ಗದವರಿಗೂ ಪ್ರಯೋಜನ ಆಗಲಿದ್ದು, ಗ್ರಾಹಕರ ಖರೀದಿ ಸಾಮಥ್ರ್ಯ ಹೆಚ್ಚಾಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಮೂಲಕ ದೇಶದಲ್ಲಿ ಜನರಪರವಾದ ಆರ್ಥಿಕ ಕ್ರಾಂತಿ ಸಾಧ್ಯವಾಗಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ಸಂಜಯ್, ಪ್ರಧಾನ ಕಾರ್ಯದರ್ಶಿ ಶ್ರೀಕಂಠಸ್ವಾಮಿ, ಖಜಾಂಚಿ ರವಿಶಂಕರ್, ನಿಕಟ ಪೂರ್ವ ಅಧ್ಯಕ್ಷ ಟಿ.ಜೆ.ಗಿರೀಶ್, ಮಾಜಿ ಅಧ್ಯಕ್ಷ ಸುಜ್ಞಾನ್ ಹಿರೇಮಠ್, ನಿರ್ದೇಶಕರಾದ ಆಶಿದ್, ಟಿ.ಆರ್.ಆನಂದ್ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *