ಗುಬ್ಬಿ : ಇಲ್ಲಿಯ ಎಪಿಎಂಸಿ ಆವರಣದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ 2022-2023ನೇ ಸಾಲಿನ ರಾಗಿ ಖರೀದಿ ಕೇಂದ್ರವನ್ನು ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಆರ್.ಶ್ರೀನಿವಾಸ್, ರೈತರುಗಳು ಗುಣಮಟ್ಟದ ರಾಗಿಯನ್ನು ರಾಗಿ ಖರೀದಿ ಕೇಂದ್ರಕ್ಕೆ ತರಬೇಕು, ಕ್ವಿಂಟಾಲ್ ರಾಗಿ ಬೆಲೆ 2550 ರೂಗಳಿದ್ದು, ಇದಕ್ಕೆ ಸರ್ಕಾರದ 1000ರೂ.ಳ ಬೆಂಬಲ ಸೇರಿ 3550 ರೂ.ಗಳು ರೈತರಿಗೆ ಸಿಗಲಿದೆ, ಸರ್ಕಾರದ ಬೆಂಬಲ ಬೆಲೆಯ ಉಪಯೋಗವನ್ನು ಪ್ರತಿ ರೈತರೂ ಪಡೆಯ ಬೇಕೆಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಅಣ್ಣಪ್ಪಸ್ವಾಮಿ, ಪಟ್ಟಣ ಪಂಚಾಯತಿ ಸದಸ್ಯರುಗಳಾದ ಜಿ.ಆರ್.ಶಿವಕುಮಾರ್, ಜಿ.ಆರ್. ಪ್ರಕಾಶ್, ಮೋಹನ್, ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶಣ್ಣ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಟಿ.ಜಿ.ಜಗದೀಶ್, ರಾಗಿ ಖರೀದಿ ಕೇಂದ್ರದ ನಿರ್ವಾಹಕ ಚಂದ್ರಪ್ಪ, ದರ್ಶನ್, ಆಹಾರ ಇಲಾಖೆಯ ನಿರ್ದೇಶಕರಾದ ಸಿದ್ದೇಗೌಡರು ಉಪಸ್ಥಿತರಿದ್ದರು.