ಹಾಸನ : ಹಾಸನ ಜಿಲ್ಲಾ ಸಂತೆ ಪೇಟೆ ಹಂದಿ ಮಾಂಸದ ವ್ಯಾಪಾರಿಗಳು ಹಾಗು ಹಾಸನ ಜಿಲ್ಲಾ ಹಂದಿಜೋಗಿ ಸಂಘದ ಮಾಜಿ ಜಿಲ್ಲಾಧ್ಯಕ್ಷರಾದ ಹೆಚ್.ಆರ್.ಗೋಪಾಲ್ (ಗೋವಿಂದಪ್ಪ) ಅವರು ಭಾನುವಾರ ರಾತ್ರಿ ನಿಧನ ಹೊಂದಿದರು.
ಹೆಚ್.ಆರ್.ಗೋಪಾಲ್ ಅವರು ರಾಜ್ಯ ಹಂದಿಜೋಗಿ ಸಂಘದ ಸಂಸ್ಥಾಪಕರು ಹಾಗೂ ಹಾಸನದಲ್ಲಿ ಹಂದಿ ಮಾಂಸ ಪ್ರಮುಖ ವ್ಯಾಪಾರಸ್ಥರಾಗಿದ್ದರು, ಹಾಸನ ನಗರಸಭೆ ಚುನಾವಣೆಗೂ ನಿಂತು ಪರಾಭವಗೊಂಡಿದ್ದರು. ಮೃತರು ಮಗ ಮತ್ತು ಮೂವರು ಹೆಣ್ಣುಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ಅಖಿಲ ಕರ್ನಾಟಕ ಹಂದಿಜೋಗಿ ಸಂಘದ ರಾಜ್ಯಾಧ್ಯಕ್ಷರಾದ ರಾಜೇಂದ್ರಕುಮಾರ್, ಕಾರ್ಯದರ್ಶಿ ಮಂಡ್ಯ ರಾಜು, ರಾಜ್ಯ ಹಂದಿಜೋಗಿ ಸಂಘದ ಉಪಾಧ್ಯಕ್ಷ ರಾದ ಎಂ.ವಿ.ಗೋವಿಂದರಾಜು,ಮುಖಂಡರಾದ ಎಂ.ವಿ.ವೆಂಕಟರಮಣಯ್ಯ, ಪಿಳ್ಳಣ್ಣ, ತಿಪಟೂರು ರಂಗಪ್ಪ, ತುಮಕೂರು ಗೋಪಿ, ಸೇರಿದಂತೆ ಜನಾಂಗದ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.
ಹಾಸನದ ಬಿಟ್ಟಿಗೇನಹಳ್ಳಿ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನಡೆಯಿತು.