ಸಚಿವ ಕೆ.ಎನ್.ರಾಜಣ್ಣಗೆ ಮನುಸ್ಮøತಿ ಓದುವಂತೆ ಗುಮ್ಮಿದ ಮುಖ್ಯಮಂತ್ರಿ

ತುಮಕೂರು : ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಮನುಸ್ಮøತಿಯನ್ನು ಓದುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಮಿಕವಾಗಿ ಗುಮ್ಮಿದ ಪ್ರಸಂಗ ನಡೆಯಿತು.

ಪತ್ರಕರ್ತರ ರಾಜ್ಯ ಸಮ್ಮೇಳನದ ಉದ್ಘಾಟನಾ ಭಾಷಣದ ಮಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಭಾಷಣದಲ್ಲಿ ಸಮಾಜದಲ್ಲಿರುವ ಜಾತಿ ಜಾರತಮ್ಯವನ್ನು ಉಲ್ಲೇಖಿಸಿ ಮಾತನಾಡುವಾಗ “ಮೇಲು ಜಾತಿ-ಕಳ ಜಾತಿ”ಎನ್ನುವ ಪದ ಬಳಸಿದರು.

ಈ ವೇಳೆ ಸಚಿವ ರಾಜಣ್ಣ ಅವರು ಮೇಲುಜಾತಿ-ಕೆಳಜಾತಿ ಎನ್ನುವ ಬದಲಿಗೆ ಮುಂದುವರಿದವರು, ಹಿಂದುಳಿದವರು ಎಂದು ಹೇಳಬಹುದು ಎಂದರು. ಇದಕ್ಕೆ ಆಕ್ಷೇಪಿಸಿದ ಸಿಎಂ, ಜಾತಿ ಅನ್ನುವುದು ಈ ಸಮಾಜದಲ್ಲಿ ವಾಸ್ತವ, ನೀನು ಮನುಸ್ಮೃತಿ ಓದಿದರೆ ಈ ಬಗ್ಗೆ ಇನ್ನಷ್ಟು ಸ್ಪಷ್ಟವಾಗುತ್ತದೆ, ಜಾತಿಯ ತಾರತಮ್ಯ ಎಷ್ಟು ಭೀಕರವಾಗಿದೆ ಎಂದು ಗೊಡ್ತಾಗಬೇಕಾದರೆ ಮೊದಲು ಮನುಸ್ಮೃತಿ ಓದು ಎಂದರು.

Leave a Reply

Your email address will not be published. Required fields are marked *