ವಿಶ್ವ ಹೃದಯ ದಿನ: ‘ಸಿದ್ಧಾರ್ಥ ಅಡ್ವಾನ್ಸ್ಡ್‍ಹಾರ್ಟ್ ಸೆಂಟರ್ ನಿಂದ ನಗರದಲ್ಲಿ ಸೈಕ್ಲೋಥಾನ್

ತುಮಕೂರು; ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್‍ಸೆಂಟರ್ ವತಿಯಿಂದ ವಿಶ್ವ ಹೃದಯ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಹೃದಯದ ಸಂರಕ್ಷಣೆ ಮತ್ತು ಜೋಪಾನ ಕುರಿತ ಜನಜಾಗೃತಿ ಮೂಡಿಸಲ ಶನಿವಾರದಂದು (ಸೆ.30) ನಗರದಲ್ಲಿ ಸೈಕ್ಲೋಥಾನ್ ರ್ಯಾಲಿ ನಡೆಸಲಾಯಿತು.

ಶ್ರೀ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿನಿಂದ ಮುಂಭಾಗದಿಂದ ಆರಂಭಗೊಂಡ ರ್ಯಾಲಿಗೆ, ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್‍ಸೆಂಟರ್‍ನ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಡಾ. ಪ್ರಭಾಕರ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನುಷ್ಯ ಆರೋಗ್ಯವಂತರಾಗಿರಬೇಕಾದರೆ, ದೇಹದ ಎಲ್ಲ ಭಾಗಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಅದರಲ್ಲು ನಿರಂತರವಾಗಿ ಕೆಲಸ ಮಾಡುವ ಹೃದಯದ ಪಾತ್ರ ಅತಿ ಮಹತ್ವದ್ದಾಗಿದೆ. ಆ ಭಾಗದ ಜೋಪಾನ ಮಾಡಿಕೊಳ್ಳಬೇಕು ಮತ್ತು ಸಾಮಥ್ರ್ಯವನ್ನು ಕಾಪಾಡಿಕೊಳ್ಳಲು ನಿರಂತರವಾಗಿ ವ್ಯಾಯಾಮ ಹಾಗೂ ಕ್ರಿಯಾತ್ಮಕ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್‍ಸೆಂಟರ್ ಮುಖ್ಯಸ್ಥರಾದ ಡಾ.ತಮೀಮ್ ಅಹಮ್ಮದ್ ಮಾತಾನಾಡಿ, ನಿರಂತರವಾಗಿ ದೈಹಿಕ ಕಸರತ್ತು ಮಾಡಿ, ಹೃದಯದ ಕೂಗಿಗೆ ಸದಾ ಸ್ಪಂದಿಸಿ. ನಿರ್ಲಕ್ಷ್ಯಮಾಡದೆ ಭಯಬಿಟ್ಟು ವೈದ್ಯರೊಂದಿಗೆ ಸಮಾಲೋಚಿಸುವುದನ್ನು ರೂಢಿ ಮಾಡಿಕೊಳ್ಳಿ, ಆಗ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ ಎಂದರು.

ಇಂಜಿನಿಯರಿಂಗ್ ಕಾಲೇಜಿನಿಂದ ಆರಂಭಗೊಂಡ ಸೈಕ್ಲೋಥಾನ್ ರ್ಯಾಲಿ ಸಿದ್ದಗಂಗಾ ಸ್ವಾಮೀಜಿ ಸರ್ಕಲ್ ಮೂಲಕ ಮಹಾತ್ಮ ಗಾಂಧೀಜಿ ಸೇಡಿಯಂ ತಲುಪಿ, ಅಲ್ಲಿಂದ ತುಮಕೂರು ಗಾಜಿನಮನೆ ಮಾರ್ಗವಾಗಿ ಮಂಡಿ ಪೇಟೆ, ಗುಬ್ಬಿ ಗೇಟ್ ಮೂಲಕ ಅಗಳಕೋಟೆಯಲ್ಲಿರುವ ಶ್ರೀ ಸಿದ್ದಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಅಂತ್ಯಗೊಂಡಿತು.

Leave a Reply

Your email address will not be published. Required fields are marked *