ತುಮಕೂರು; ಇತ್ತೀಚೆಗೆ ಪ್ರಪಂಚದಾದ್ಯಂತ ಜಾಗತಿಕ ತಾಪಮಾನ ಹೆಚ್ಚಿದಂತೆ ವಿವಿಧ ರೀತಿಯ ಆಕ್ರಮಣಕಾರಿ ಹೊಸ ಕಾಯಿಲೆಗಳು ಸೃಷ್ಟಿಯಾಗುತ್ತದೆ ಪ್ರತಿನಿತ್ಯ ವೈದ್ಯಕೀಯ ಸಂಶೋಧಕರು ಹೊಸ ಕಾಯಿಲೆಗಳಿಗೆ ಸೂಕ್ತ ರೀತಿಯ ಔಷಧಿ ಪರಿಣಾಮಕಾರಿ ಚಿಕಿತ್ಸೆಯನ್ನು ಸಂಶೋಧನೆ ಮಾಡುತ್ತಿದ್ದರು ಮನುಷ್ಯನಿಗೆ ಒಂದಲ್ಲ ಒಂದು ರೀತಿಯಲ್ಲಿ ಕಾಯಿಲೆ ಎಂಬುದು ಕಾಡದೇ ಬಿಡುವುದಿಲ್ಲ ಅದೇ ರೀತಿಯಾಗಿ ಹರ್ನಿಯಾ ಖಾಯಿಲೆಯು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸುವ ಅತ್ಯಂತ ಸಾಮಾನ್ಯವಾದ ಚಿಕಿತ್ಸೆಯಾಗಿದೆ ಎಂದು ಬೆಂಗಳೂರಿನ ಪ್ರತಿಷ್ಠಿತ ಸ್ಪರ್ಶ ಆಸ್ಪತ್ರೆಯ ಅಗ್ನಿಯ ರೋಗ ಶಸ್ತ್ರ ಚಿಕಿತ್ಸಕ ಡಾ.ಮುರುಳಿಧರ್ ಎಸ್ ಕತ್ತಲಗೇರಿ ಅವರು ತಿಳಿಸಿದರು.

ತುಮಕೂರು ನಗರ ಹೊರ ವಲಯದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಆಸ್ಪತ್ರೆ, ಅಸೋಸಿಯೇಷನ್ ಸರ್ಜನ್ ಆಫ್ ಇಂಡಿಯಾ ತುಮಕೂರು, ಸೇರಿದಂತೆ ತುಮಕೂರಿನ ಪ್ರತಿಷ್ಠಿತ ಆಸ್ಪತ್ರೆಗಳ ಸಹಕಾರದೊಂದಿಗೆ ಆಸ್ಪತ್ರೆಯ ನಾಗಾರ್ಜುನಾ ಹಾಲ್‍ನಲ್ಲಿ ಮಾಡ್ರನ್ ಹರ್ನಿಯಾ ಸರ್ಜರಿ ಟೆಕ್ನಿಕ್ಸ್ ಕುರಿತಾದ ವಿಶೇಷ ನೇರ ಶಸ್ತ್ರ ಚಿಕಿತ್ಸಾ ದೃಶ್ಯಾವಳಿ ಕಾರ್ಯಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು, ಹರ್ನಿಯಾ ಶಸ್ತ್ರಚಿಕಿತ್ಸೆಯ ಮೂರು ಪ್ರಮುಖ ವಿಧಗಳಲ್ಲಿದ್ದು ಲ್ಯಾಪರೊಸ್ಕೋಪಿಕ್ (ಕನಿಷ್ಠ ಆಕ್ರಮಣಕಾರಿ) ಮತ್ತು ರೊಬೊಟಿಕ್ ದುರಸ್ತಿ. ನಿಮ್ಮ ಶಸ್ತ್ರಚಿಕಿತ್ಸೆ ಮತ್ತು ಚೇತರಿಕೆಯು ನೀವು ಹೊಂದಿರುವ ಹರ್ನಿಯಾದ ಪ್ರಕಾರ ಮತ್ತು ಶಸ್ತ್ರಚಿಕಿತ್ಸೆ ಎಷ್ಟು ಸಂಕೀರ್ಣವಾಗಿರುತ್ತದೆ ಎಂಬುದನ್ನು ಒಳಗೊಂಡಂತೆ ಬಹು ಅಂಶಗಳನ್ನು ಅವಲಂಬಿಸಿರುತ್ತದೆ ಹರ್ನಿಯಾದಲ್ಲಿ, ಒಂದು ಅಂಗವು ಅದನ್ನು ಹಿಡಿದಿಟ್ಟುಕೊಳ್ಳುವ ಸ್ನಾಯು ಅಥವಾ ಅಂಗಾಂಶ ಗೋಡೆಯ ಮೂಲಕ ತಳ್ಳುತ್ತದೆ. ಹೆಚ್ಚಿನ ಹರ್ನಿಯಾಗಳು ಹೊಟ್ಟೆ ಅಥವಾ ತೊಡೆಸಂದುಗಳಲ್ಲಿ ರೂಪುಗೊಳ್ಳುತ್ತವೆ ಎಂದರು.
ಹರ್ನಿಯಾ ಶಸ್ತ್ರಚಿಕಿತ್ಸೆಯು ನಿಮ್ಮ ಶಸ್ತ್ರಚಿಕಿತ್ಸಕ ಅಂಗ ಮತ್ತು ಹರ್ನಿಯೇಟೆಡ್ ಅಂಗಾಂಶವನ್ನು ಮತ್ತೆ ಸ್ಥಳಕ್ಕೆ ತಳ್ಳಲು ಮತ್ತು ಹೊಲಿಗೆಗಳು ಅಥವಾ ಶಸ್ತ್ರಚಿಕಿತ್ಸಾ ಜಾಲರಿಯನ್ನು ಬಳಸಿಕೊಂಡು ಅದನ್ನು ಹಿಡಿದಿಟ್ಟುಕೊಳ್ಳುವ ತಡೆಗೋಡೆಯನ್ನು ಬಲಪಡಿಸಲು ಅನುವು ಮಾಡಿಕೊಡುತ್ತದೆ ನಿಮ್ಮ ಅಂಡವಾಯು ಎಲ್ಲಿದೆ ಎಂಬುದರ ಆಧಾರದ ಮೇಲೆ, ಇದು ಇತರ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ತೊಡಕುಗಳನ್ನು ಉಂಟುಮಾಡಬಹುದು., ಉದಾಹರಣೆಗೆ, ನಿಮಗೆ ವೃಷಣಗಳಿದ್ದರೆ, ಹರ್ನಿಯಾ ಸ್ನಾಯುವಿನ ಗೋಡೆಯಿಂದ ಹೊರಗೆ ಹೋಗಿ ನಿಮ್ಮ ವೃಷಣಕೋಶಕ್ಕೆ ಜಾರಿ, ಊತ, ಸಂಭೋಗದ ಸಮಯದಲ್ಲಿ ನೋವು ಅಥವಾ ಇತರ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದರು.
ಶ್ರೀ ಸಿದ್ಧಾರ್ಥ ಮೆಡಿಕಲ್ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಜಿ.ಎನ್ ಪ್ರಭಾಕರ್ ಅವರು ಮಾತನಾಡುತ್ತಾ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ಇತ್ತೀಚಿಗೆ ಒಂದಲ್ಲ ಒಂದು ಕಾಯಿಲೆಗಳಿಗೆ ಸೂಕ್ತ ರೀತಿಯ ಪರಿಹಾರಗಳನ್ನು ಕಂಡುಕೊಳ್ಳಲು ನುರಿತ ವೈದ್ಯರುಳಿಂದ ಯಶಸ್ವಿಯಾಗಿದ್ದು ವೈದ್ಯಕೀಯ ಕಾಲೇಜಿನ ಕಲಿಕಾ ವಿದ್ಯಾರ್ಥಿಗಳಿಗೂ ಪ್ರಾಯೋಗಿಕವಾಗಿಯೂ ಮನದಟ್ಟಾಗಲಿ ಎಂಬ ಕಾರಣದಿಂದ ಬೆಂಗಳೂರಿನ ಪ್ರತಿಷ್ಠಿತ ಸ್ಪರ್ಶ ಆಸ್ಪತ್ರೆಯ ಡಾ.ಮುರಳಿಧರ್ ಎಸ್ ಕತ್ತಲ ಗೇರಿ ಸೇರಿದಂತೆ ತುಮಕೂರಿನ ಪ್ರತಿಷ್ಠಿತ ಆಸ್ಪತ್ರೆಯ ತಜ್ಞ ನುರಿತ ವೈದ್ಯರುಗಳ ತಂಡ ನೇರ ದೃಶ್ಯಾವಳಿಯ ಮೂಲಕ ಶತ್ರು ಚಿಕಿತ್ಸೆಗೆ ಒಳಗಾಗುವ ರೋಗಿಗಳಿಗೆ ನೇರವಾಗಿ ಹರ್ನಿಯಾ ಕುರಿತಾದ ಶಸ್ತ್ರ ಚಿಕಿತ್ಸೆಯ ಕಾರ್ಯವಿಧಾನ ಗುಣಲಕ್ಷಣ ಸೇರಿದಂತೆ ಎದುರಾಗುವ ಸಮಸ್ಯೆಗಳು ಹಾಗೂ ಪರಿಹಾರ ಮಾರ್ಗೋಪಾಯಗಳನ್ನ ತಿಳಿಸಿಕೊಡುವ ಸಲುವಾಗಿ ಹರ್ನಿಯಾ ಶಸ್ತ್ರ ಚಿಕಿತ್ಸೆ ಈ ಕಾರ್ಯಾಗಾರದಲ್ಲಿ ಉಪಯೋಗವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜಿನ ಮುಖ್ಯ ಆಡಳಿತಾಧಿಕಾರಿಗಳಾದ ಡಾ.ಕೀರಣ್ ಕುಮಾರ್, ಮೆಡಿಕಲ್ ಸೂಪರಿಂಡೆಂಟ್ ವೆಂಕಟೇಶ್ ಎನ್‍ಎಸ್ ಸೇರಿದಂತೆ ಶ್ರೀದೇವಿ ಮತ್ತು ಸಿದ್ದಗಂಗಾ ವೈದ್ಯಕೀಯ ಕಾಲೇಜಿನ ಶಸ್ತ್ರ ಚಿಕಿತ್ಸಕರು ಹರ್ನಿಯಾ ಕಾರ್ಯಾಗಾರದ ವ್ಯವಸ್ಥಾಪಕರು ಇತರರು ಉಪಸ್ಥಿತರಿದ್ದರು.