ತುಮಕೂರು : ಗೆಳೆಯ ರೆಡ್ಡಿಚಿನ್ನಯಲ್ಲಪ್ಪನವರ ಪ್ರಾರ್ಥೀವ ಶರೀರದ ಮುಂದೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಗದ್ಗಿತರಾಗಿ, ಕಣ್ಣೀರು ಹಾಕಿ, ಅಂತಿಮ ನಮನ ಸಲ್ಲಿಸಿದರು.
ಆಗಸ್ಟ್ 12ರ ಸೋಮವಾರ ನಿಧನರಾದ ತಮ್ಮ ಬಾಲ್ಯದ ಗೆಳೆಯ ಹಾಗೂ ತಮ್ಮ ರಾಜಕೀಯದ ಏಳು-ಬೀಳುಗಳ ಒಡನಾಡಿಯಾಗಿದ್ದ ರೆಡ್ಡಿಚಿನ್ನಯಲ್ಲಪ್ಪನವರಿಗೆ ಪುಷ್ಪನಮನ ಸಲ್ಲಿಸಿ ತಮ್ಮ ಗೆಳೆಯನನ್ನು ಕಳೆದುಕೊಂಡಿರುವುದಕ್ಕೆ ಸಚಿವರು ದು:ಖಿತರಾದರು.
ಸಚಿವರು ಈ ಸಂದರ್ಭದಲ್ಲಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ತುಮಕೂರಿನ ಕಾಂಗ್ರೆಸ್ ಹಿರಿಯ ಮುಖಂಡ ರೆಡ್ಡಿ ಚಿನ್ನಯಲ್ಲಪ್ಪನವರ ನಿವಾಸಕ್ಕೆ ಮಾಜಿ ಸಚಿವರಾದ ಜೆ.ಸಿ ಮಾಧುಸ್ವಾಮಿ, ಸೊಗಡು ಶಿವಣ್ಣ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಶಾಸಕ ಡಾ.ರಫೀಕ್ ಅಹ್ಮದ್, ಮುರುಳೀಧರ ಹಾಲಪ್ಪ, ಇಕ್ಬಾಲ್ ಅಹಮದ್ ಹಾಗೂ ತುಮಕೂರಿನ ಗಣ್ಯರು, ರೆಡ್ಡಿಚಿನ್ನಯಲ್ಲಪ್ಪನವರ ಒಡನಾಡಿಗಳು, ಗೆಳೆಯರು ಭೇಟಿ ನೀಡಿ ರೆಡ್ಡಿಚಿನ್ನಯಲ್ಲಪ್ಪನವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು.
ತುಮಕೂರಿನ ಕಾಂಗ್ರೆಸ್ ಹಿರಿಯ ಮುಖಂಡ ರೆಡ್ಡಿ ಚಿನ್ನಯಲ್ಲಪ್ಪನವರ ನಿವಾಸಕ್ಕೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಭೇಟಿ ನೀಡಿ ರೆಡ್ಡಿಚಿನ್ನಯಲ್ಲಪ್ಪನವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು.
ರೆಡ್ಡಿಚಿನ್ನಯಲ್ಲಪ್ಪನವರು ರಾಜಕೀಯದಲ್ಲಿ ಅಜಾತಶತ್ರುವಾಗಿದ್ದವರು ಎಲ್ಲಾ ಪಕ್ಷಗಳ ಮುಖಂಡರುಗಳ ಜೊತೆಯು ಆತ್ಮೀಯತೆ ಸ್ನೇಹದಿಂದ ಇದ್ದು ಪ್ರೀತಿ ವಿಶ್ವಾಸ ಗಳಿಸಿದ್ದರು.
ರೆಡ್ಡಿಚಿನ್ನಯಲ್ಲಪ್ಪನವರ ಅಂತ್ಯಕ್ರಿಯೆಯು ತುಮಕೂರು ಗಾರ್ಡನ್ ರಸ್ತೆಯ ರುದ್ರಭೂಮಿಯಲ್ಲಿ ಸಂಜೆ ನಡೆಯಿತು.