ಪೊಲೀಸ್ ಇಲಾಖೆ ಜನಸ್ನೇಹಿ ಮಾಡುಲು ಕ್ರಮಕೈಗೊಳ್ಳಲಾಗಿದೆ-ಗೃಹ ಸಚಿವರು.

ತುಮಕೂರು :ಪೊಲೀಸ್ ಇಲಾಖೆಯನ್ನು ಜನಸ್ನೇಹಿ ಮಾಡುವ ಎಲ್ಲಾ ಪ್ರಯತ್ನಗಳು ನಡೆಯುತ್ತಾ ಇವೆ ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಹೇಳಿದರು.

ಅವರಿಂದು ತುಮಕೂರು ಜಿಲ್ಲೆ ಪೊಲೀಸರು ವಿವಿಧ ಕಳ್ಳತನಗಳ ಪ್ರಕರಣಗಳನ್ನು ಭೇದಿಸಿ ಮಾಲೀಕರಿಗೆ ಹಸ್ತಾರಿಸಿದ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಠಾಣೆಗಳನ್ನು ಜನಸ್ನೇಹಿ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ, ಜರ್ಮನಿಯಲ್ಲಿ ಜನಸ್ನೇಹಿ ಪೊಲೀಸ್ ಠಾಣೆಗಳನ್ನು ಮಾಡಲು 40 ವರ್ಷಗಳನ್ನು ತೆಗೆದುಕೊಂಡರು, ನಾವು ಅಷ್ಟು ಸಮಯವನ್ನು ತೆಗೆದುಕೊಳ್ಳುವುದಿಲ್ಲ, ಇನ್ನೊದೆರಡು ವರ್ಷಗಳಲ್ಲೇ ಮಾಡಲಾಗುವುದು,ಬೆಂಗಳೂರಿನಲ್ಲಿ ಈಗಾಗಲೇ ಜನಸ್ನೇಹಿ ಕೆಲಸ ನಡೆಯುತಾ ಇದೆ ಎಂದರು.

ಈ ಕೆಲಸಮಾಡಲು ಪೊಲೀಸರ ಮನಸ್ಸುಗಳು ಸಹ ಜನಸ್ನೇಹಿಯಂತೆ ಬದಲಾಗಬೇಕು, ಮನಸ್ಸುಗಳು ಬದಲಾಗದಿದ್ದರೆ ಅದು ಸಾಧ್ಯವಿಲ್ಲ, ಆದ್ದರಿಂದ ಮೊದಲು ಪೊಲೀಸರ ಕಾರ್ಯವನ್ನು ಜನರಿಗೆ ಸ್ಪಂದಿಸುವಂತೆ ಮಾಡಲು ಎಲ್ಲಾ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು.

ಪಿಎಸ್‍ಐ ಹಗರಣದಿಂದ ಪಿಎಸ್‍ಐ ನೇಮಕಾತಿ ನೆನೆಗುದಿಗೆ ಬಿದ್ದಿತ್ತು, ಈಗ ಕೋರ್ಟ್ ಮರು ಪರೀಕ್ಷೆ ನಡೆಸಿ ನೇಮಕಾತಿ ಮಾಡಿಕೊಳ್ಳುವಂತೆ ತೀರ್ಪು ನೀಡಿರುವುದರಿಂದ, 543 ಜನರ ಪಿಎಸ್‍ಐ ನೇಮಕಾತಿಗೆ ಪರೀಕ್ಷೆ ನಡೆಯಲಿದ್ದು, ಇದರ ಜೊತೆಗೆ ಇನ್ನೂ ಸಾವಿರ ಪಿಎಸ್‍ಐಗಳನ್ನು ನೇಮಿಸಿಕೋಳುವುದಾಗಿ ಗೃಹ ಸಚಿವರು ತಿಳಿಸಿದರು.

543 ಪಿಎಸ್‍ಐ ನೇಮಕದ ಹಗರಣಕ್ಕೆ ಸಂಬಂಧಿಸಿದಂತೆ ಪರೀಕ್ಷೆ ನಕಲಿಗೆ ಬ್ಲೂಟೂತ್ ಬಳಸಲಾಗಿದೆ, ಓಎಂಆರ್ ಸೀಟುಗಳ ತಿದ್ದಿರುವುದು, ಈ ಎಲ್ಲಾ ಗಮನಕ್ಕೆ ಬಂದ ಮೇಲೆ, ನೇಮಕಾತಿಯನ್ನು ನಿಲ್ಲಿಸಿ, ತನಿಖೆ ಮಾಡಿ ಒಬ್ಬ ಎಡಿಜಿಪಿ ಅಧಿಕಾರಿಯನ್ನು ಬಂಧಿಸಲಾಗಿದೆ, ಇವರ ಜೊತೆಗೆ 8ಜನ ಅಧಿಕಾರಿಗಳನ್ನು ಬಂಧಿಸಿ, ಆ ಪರೀಕ್ಷೆಯನ್ನು ಸ್ಥಗಿತ ಮಾಡಿದ್ದೆವು, ಸರ್ಕಾರ ಮರು ಪರೀಕ್ಷೆ ಮಾಡಬೇಕೆಂದು ಆದೇಶ ಹೊರಡಿಸಿದಾಗ ಕೆಲವರು ಕೋರ್ಟ್‍ಗೆ ಹೋಗಿದ್ದರು, ಈಗ ಕೋರ್ಟ್ ಮರು ಪರೀಕ್ಷೆಗೆ ಆದೇಶ ನೀಡಿದ ಹಿನ್ನಲೆಯಲ್ಲಿ ಪಿಎಸ್‍ಐ ನೇಮಲಾತಿ ಪರೀಕ್ಷೆ 54 ಸಾವಿರ ಅಭ್ಯರ್ಥಿಗಳಿಗೂ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *