ತುಮಕೂರು:ತಾಲೂಕಿನ ಹೊನ್ನುಡಿಕೆಯ ಶ್ರೀವರಗಣಪತಿ ಸ್ವಾಮಿಯ ಜಾತ್ರಾ ಮಹೋತ್ಸವ ಜನವರಿ 19 ರಿಂದ ಫೆಬ್ರವರಿ 02ರವರೆಗೆ ಹೊನ್ನುಡಿಕೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಶ್ರೀವರಗಣಪತಿ ಭಕ್ತ ಮಂಡಳಿಯ ರಾಮಚಂದ್ರಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಮಣ್ಣಿನಿಂದ ನಿರ್ಮಾಣ ಮಾಡಿರುವ ಗಣಪತಿ ಮೂರ್ತಿಯ ಪ್ರತಿಷ್ಠಾಪನೆ, ಸಂಜೆ 6 ಗಂಟೆಗೆ ಬೆಳ್ಳಿ ಕಿರೀಟ ಧಾರಣೆ ಹಾಗೂ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಲಿವೆ. ಜನವರಿ 19ರ ಭಾನುವಾರ ಬೆಳಗ್ಗೆ ಕಾರ್ಯಕ್ರಮವನ್ನು ಅರಸೀಕೆರೆ ತಾಲೂಕು ಕೋಡಿಹಳ್ಳಿ ಮಠದ ಶ್ರೀಶ್ರೀಶ್ರೀ ಮ.ನಿ.ಪ್ರ.ಸ್ವ ಡಾ.ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶಿವಗಂಗೆಯ ಮೇಲಣಗವಿ ಮಠದ ಶ್ರೀಮಲಯ ಶಾಂತಮುನಿ ದೇಶಿಕೇಂದ್ರ ಮಹಾಸ್ವಾಮಿ ಹಾಗೂ ಹೊನ್ನುಡಿಕೆಯ ಶ್ರೀಗೋಸಲ ಚನ್ನಬಸವೇಶ್ವರ ಗದ್ದುಗೆ ಮಠದ ಶ್ರೀಶ್ರೀಶ್ರೀ ಮ.ನಿ.ಪ್ರ.ಸ್ವ ಇಮ್ಮಡಿ ಬಸವರಾಜ ಮಹಾಸ್ವಾಮಿಗಳು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹೊನ್ನುಡಿಕೆ ಮತ್ತು ಸುತ್ತಮುತ್ತಲ ಗ್ರಾಮಗಳ ಭಕ್ತರ ಸಹಕಾರದಿಂದ ಸುಮಾರು 15 ಲಕ್ಷ ರೂ ಮೌಲ್ಯದ ಬೆಳ್ಳಿ ಕಿರೀಟವನ್ನು ಶ್ರೀವರಗಣಪತಿ ಸ್ವಾಮಿಗೆ ತೊಡಿಸಲಾಗುವುದು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೇಂದ್ರ ಸರಕಾರದ ಜಲಶಕ್ತಿ ಮತ್ತು ರೈಲ್ವೆ ಇಲಾಖೆಯ ರಾಜ್ಯಸಚಿವರಾದ ವಿ.ಸೋಮಣ್ಣ, ಕರ್ನಾಟಕ ಸರಕಾರದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ಶಾಸಕರಾದ ಬಿ.ಸುರೇಶಗೌಡ, ಮಾಜಿ ಶಾಸಕರಾದ ಮಸಾಲೆ ಜಯರಾಮ್ , ಡಿ.ಸಿ.ಗೌರಿಶಂಕರ್ ನಿವೃತ್ತ ಐಜಿಸಿ ಜೋತಿ ಪ್ರಕಾಶ್ ಮಿರ್ಜಿ, ಮಾಜಿ ಸಂಸದ ಮುದ್ದಹನುಮೇಗೌಡ, ಚಲನಚಿತ್ರ ನಟ ವಿಕ್ಕಿ ವರುಣ್, ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್.ಸಿದ್ದೇಶ್, ಅಹಿಂದ ಮುಖಂಡ ಹಾಗೂ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದಶಿ, ವಿಧಾನಪರಿಷತ್ ಸದಸ್ಯ ಎಸ್.ಟಿ.ಶ್ರೀನಿವಾಸ್, ಹೊನ್ನುಡಿಕೆ ಲ್ಯಾಂಡ್ ಡೆವಲ್ಪರ್ ಹೆಚ್.ಜಿ.ಉಮೇಶ್, ಮಂಡ್ಯ ಬಿಜೆಪಿ ಅಧ್ಯಕ್ಷ ಸಿ.ಪಿ.ಉಮೇಶ್, ಬೆಂಗಳೂರು ಮೆಡಿಕಲ್ ಸಿಸ್ಟಮ್ ಎಂ.ಡಿ ಡಾ.ರಕ್ಷಿತ್, ವಿಜಯ ಎಲೆಕ್ಟ್ರಿಕಲ್‍ನ ಹೆಚ್.ಎಸ್.ರಾಘವೇಂದ್ರ, ಕಂದಾಯ ತನಿಖಾಧಿಕಾರಿ ಹೆಚ್.ಎನ್.ಸಿದ್ದಲಿಂಗಸ್ವಾಮಿ, ಸ್ಪೂರ್ತಿ ಡೆವಲ್ಪರ್ಸ್‍ನ ಸ್ಪೂರ್ತಿ ಚಿದಾನಂದ್, ಹೊನ್ನುಡಿಕೆ ಗ್ರಾಮಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ, ವಾಹಿನಿ ಇರಿಗೇಷನ್‍ನ ನಿರ್ದೇಶಕರಾದ ಆನಂದ್ ಆರ್.,ಹೇವರಾಜ್ ಸೆಂಚ, ಜಿ.ಪಂ ಮಾಜಿ ಸದಸ್ಯ ರಾಮಚಂದ್ರಪ್ಪ, ಡಿಎಕ್ಸ್ ಮ್ಯಾಕ್ಸ್‍ನ ಎಂ.ಡಿ. ದಯಾನಂದ್, ತಾ.ಪಂ.ಮಾಜಿ ಅಧ್ಯಕ್ಷ ಕೆಂಪಹನುಮಯ್ಯ, ಬಿಜೆಪಿ ಮುಖಂಡ ಸಿದ್ದೇಗೌಡ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಜನವರಿ19 ರಂದು ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದ್ದು, ಫೆಬ್ರವರಿ 01ರ ಶನಿವಾರ ಸಂಜೆ ಹೊನ್ನುಡಿಕೆಯ ಗೋಸಲ ಚನ್ನಬಸವೇಶ್ವರ ಗದ್ದುಗೆ ಮಠದ ಶ್ರೀಶ್ರೀಇಮ್ಮಡಿ ಬಸವರಾಜ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ಶ್ರೀವರಗಣಪತಿ ಸ್ವಾಮೀ ಅವರ ವಿಜೃಂಭಣೆಯ ಜಾತ್ರಾ ಮಹೋತ್ಸವ ಏರ್ಪಡಿಸಲಾಗಿದೆ.ಜನವರಿ 02ರ ಭಾನುವಾರ ಬೆಳಗ್ಗೆ 9 ಗಂಟೆಗೆ ಶ್ರೀವರಗಣಪತಿ ಸ್ವಾಮಿ ಅವರ ವಿಸರ್ಜನಾ ಮಹೋತ್ಸವ ನಡೆಯಲಿದ್ದು,ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಮೆರವಣಿಗೆಯಲ್ಲಿ ವೀರಗಾಸೆ, ನಂದಿದ್ವಜ, ಚಿಟ್ಟಿಮೇಳ, ಆಂಜನೇಯ, ಚಂಡೆಮೇಳ, ಹುಲಿಕುಣಿತ, ತೆಲಂಗಾಣ ವಾದ್ಯ, ನಾಸಿಕ್ ಡೋಲು ಪ್ರದರ್ಶನ ನಡೆಯಲಿದೆ ಎಂದು ರಾಮಚಂದ್ರಪ್ಪ ತಿಳಿಸಿದರು.
ಶ್ರೀವರಗಣಪತಿ ಭಕ್ತ ಮಂಡಳಿಯ ನಿರ್ದೇಶಕರಾದ ಬಸವರಾಜು ಮಾತನಾಡಿ, ಕಳೆದ 60 ವರ್ಷಗಳಿಂದ ಗ್ರಾಮದ ಹಿರಿಯರು ಸೇರಿ ಈ ಹಬ್ಬವನ್ನುಆಚರಿಸಿಕೊಂಡು ಬರುತ್ತಿದ್ದು, ಈಗ ಯುವ ಸಮೂಹಕ್ಕೆ ವಹಿಸಲಾಗಿದೆ. ಯುವಕರು ಮುಂದಿನ ದಿನಗಳಲ್ಲಿ ಮತ್ತಷ್ಟು ಜವಾಬ್ದಾರಿಯಿಂದ ಜಾತ್ರಾ ಮಹೋತ್ಸವ ನಡೆಸಲಿ ಎಂಬುದು ನಮ್ಮ ಇಚ್ಚೆಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀವರಗಣಪತಿ ಭಕ್ತ ಮಂಡಳಿ ಹಾಗೂ ಶ್ರೀವರಗಣಪತಿ ಗೆಳೆಯರ ಬಳಗದ ಮುಖಂಡರು ಪಾಲ್ಗೊಂಡಿದ್ದರು.