ಹಾಸ್ಯದಿಂದ ಮನುಷ್ಯ ಆಸ್ಪತ್ರೆಯ ಮುಂದೆ ಕ್ಯೂ ನಿಲ್ಲುವುದು ತಪ್ಪುತ್ತದೆ-ಹಿರೇಮಗಳೂರು ಕಣ್ಣನ್

ತುಮಕೂರು:ಹಾಸ್ಯ ಲೇಖನಗಳು,ಬರಹಗಳು ಮಾನಸಿಕ ಒತ್ತಡಗಳಿಂದ ಮನುಷ್ಯನನ್ನು ದೂರ ಮಾಡುತ್ತೇವೆ ಎಂದು ಹಿರಿಯ ವಾಗ್ಮಿ ಹಿರೇಮಗಳೂರು ಕಣ್ಣನ್ ತಿಳಿಸಿದ್ದಾರೆ.

ನಗರದ ಕನ್ನಡ ಭವನದಲ್ಲಿ ನೆಗೆಮಲ್ಲಿಗೆ ಬಳಗ-ತುಮಕೂರು, ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಂಟಿಯಾಗಿ ಆಯೋಜಿಸಿದ್ದ ಮೂರ್ಖರ ದಿನಾಚರಣೆ ಮೂವತ್ತನೇ ವರ್ಷದ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಾಸ್ಯ ರಸಾಯನ ಎಂಬ ವಿಷಯ ಕುರಿತು ಮಾತನಾಡಿದ ಅವರು,ಹಾಸ್ಯಕ್ಕೆ ಇಂತಹದ್ದೇ ವಸ್ತು ಎಂಬುವಂತಿಲ್ಲ.ಕೆಲವೊಮ್ಮೆ ಜೀವನದಲ್ಲಿನ ಎಡವಟ್ಟುಗಳೇ ಹಾಸ್ಯಕ್ಕೆ ವಸ್ತುವಾಗುತ್ತವೆ.ಹಾಸ್ಯದಿಂದ ಮನುಷ್ಯ ಆಸ್ಪತ್ರೆಯ ಮುಂದೆ ಕ್ಯೂ ನಿಲ್ಲುವುದು ತಪ್ಪುತ್ತದೆ ಎಂದರು.

ಕವಿತೆಗಳೆಂದರೆ ಅಕ್ಷರಗಳ ಜೋಡಣೆಯಲ್ಲ. ಕವಿತೆಗಳು ಜನರ ಹೃದಯ ಮಟ್ಟಬೇಕು ಮತ್ತು ತಟ್ಟಬೇಕು.ನಮ್ಮ ಸಂಸ್ಕøತಿ, ಪರಂಪರೆಯನ್ನು ಉಳಿಸುವ ಜವಾಬ್ದಾರಿ ಎಲ್ಲಾ ಸಾಹಿತಿಗಳ ಮೇಲೂ ಇದೆ. ಹಾಸ್ಯದ ಮೂಲಕ ಒಂದು ವಸ್ತುವನ್ನು ಕಟ್ಟಿಕೊಡುವುದು ಕಷ್ಟ. ಹಾಗಾಗಿ ಇದಕ್ಕೆ ತಯಾರಿ ಅಗತ್ಯ, ಕಮ್ಮಟಗಳು ನಡೆಯಬೇಕು. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿರುವ ಹಾಸ್ಯವನ್ನು ಹೆಕ್ಕಿ ತೆಗೆಯುವಂತಹ ಕೆಲಸ ಆಗಬೇಕು. ಕನ್ನಡದಲ್ಲಿ ಹಾಸ್ಯ ಸಾಹಿತಿಗಳ ದೊಡ್ಡ ಪರಂಪರೆಯೆ ಇದೆ. ಬೀಚಿ, ಆ.ರಾ.ಮಿತ್ರ ಇನ್ನಿತರ ಹಾಸ್ಯ ಸಾಹಿತಿಗಳ ಪುಸ್ತಕಗಳನ್ನು ಓದುವ ಮೂಲಕ ಅವುಗಳಲ್ಲಿ ತಿಳಿ ಹಾಸ್ಯಗಳನ್ನು ಜೀವನದಲ್ಲಿ ಅಳವಡಿಸುವ ಕೆಲಸ ಆಗಬೇಕೆಂದು ಹಿರೇಮಗಳೂರು ಕಣ್ಣನ್ ನುಡಿದರು.

ಮೂರ್ಖರ ದಿನಾಚರಣೆ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅವರು,ಹಾಸ್ಯ ಬರಹಗಾರ, ಪತ್ರಕರ್ತ ಮಣ್ಣೆರಾಜು ಅವರಿಗೆ ಗೌಡನಕಟ್ಟೆ ತಿಮ್ಮಯ್ಯ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಿರಿಯ ಸಾಹಿತಿಗಳಾದ ಜಿ.ವಿ.ವಿ.ಶಾಸ್ತ್ರಿ ಅವರಿಗೆ ಇದೇ ವೇಳೆ ಅಭಿನಂದಿಸಲಾಯಿತು.ಕವಿ ಹಾಗೂ ಲೇಖಕಿ ಡಾ.ಬಿ.ಸಿ.ಶೈಲಾ ನಾಗರಾಜು ಅವರ ಅಧ್ಯಕ್ಷತೆಯಲ್ಲಿ ಹಾಸ್ಯ ಕವಿಗೋಷ್ಠಿ ನಡೆಯಿತು.ಕವಿಗಳಾದ ಸುಮ ಬೆಳಗೆರೆ,ಓಂಕಾರಪ್ರಿಯ ಬಾಗೆಪಲ್ಲಿ, ಕಮಲಾ ರಾಜೇಶ್,ಸಿಹಿಜೀವಿ ವೆಂಕಟೇಶ್ವರ, ಅಬ್ಬಿನಹೊಳೆ ಸುರೇಶ್,ತುರುವೇಕೆರೆ ಪ್ರಸಾದ್,ಸಂಕೇತ್ ಗುರುದತ್ತ, ಅರುಣಕುಮಾರ್ ಕಲ್ಲೂರು, ಇಂದಿರಾ.ಸಿ.ಎ ಅವರುಗಳು ತಮ್ಮ ಕವನ ವಾಚಿಸಿದರು.ಕವಿಗೋಷ್ಠಿಯನ್ನು ದೊಂಬರನಹಳ್ಳಿ ನಾಗರಾಜು ನಿರೂಪಿಸಿದರು.

ಮೂರ್ಖರ ದಿನಾಚರಣೆ ಕಾರ್ಯಕ್ರಮವನ್ನು ಸಂಸ್ಕಾರ ಭಾರತಿ ಅಧ್ಯಕ್ಷರಾದ ಬಿ.ಆರ್.ನಟರಾಜಶೆಟ್ಟಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಗೆಮಲ್ಲಿಗೆ ಬಳಗದ ಅಧ್ಯಕ್ಷರಾದ ಬಾ.ಹ.ರಮಾಕುಮಾರಿ ವಹಿಸಿದ್ದರು.ಸಂಸ್ಕøತ ಉಪನ್ಯಾಸಕರಾದ ವಿದ್ವಾನ್ ವೆಂಕಟಾಚಲ ಗೌ.ತಿ.ಆಶಯ ನುಡಿಗಳನ್ನಾಡಿದರು.ವಿಜಯ ಕಾರ್ಪೋರೇಷನ್‍ನ ಬಿ.ಎಂ. ಮಂಜುನಾಥ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.ಮೂರ್ಖರ ದಿನಾಚರಣೆ ಕಾರ್ಯಕ್ರಮವನ್ನು ಕರ್ನಾಟಕ ಇಂಜಿನಿಯರ್ಸ್ ಸೇವಾ ಸಂಘದ ಜಿಲ್ಲಾಧ್ಯಕ್ಷ ಹಾಗೂ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ಹಾಗೂ ಇಂಜಿನಿಯರ್ಸ್ ಇಂಜಿನಿಯರ್ ಜಿ.ಎನ್.ರಾಧಾಕೃಷ್ಣ ನಿರೂಪಿಸಿದರು.

ಕಾರ್ಯಕ್ರಮದ ಅಂಗವಾಗಿ ತುಮಕೂರು ಜಿಲ್ಲೆಯ ವ್ಯಂಗ್ಯಚಿತ್ರಕಾರರಿಂದ ರಚಿತವಾದ ವ್ಯಂಗ್ಯ ಚಿತ್ರಗಳ ಪ್ರದರ್ಶನವನ್ನು ಕನ್ನಡಭವನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

Leave a Reply

Your email address will not be published. Required fields are marked *