ನಾನು ಆನೆಸ್ಟ್ ಅಲ್ಲ. ಬಟ್ ನಾನು ಕರೆಪ್ಟ್ ಅಲ್ಲ, ಉತ್ತಮ ವ್ಯಕಿ ಎಂದು ಮತ ಕೇಳುತ್ತೇನೆ-ಎಸ್.ಪಿ.ಮುದ್ದಹನುಮೇಗೌಡ

ತುಮಕೂರು : ನಾನು ಉತ್ತಮ ವ್ಯಕ್ತಿ. ತುಮಕೂರು ಲೋಕಸಭೆ ಸ್ಪರ್ಧಿಸಲು ಯೋಗ್ಯನಿದ್ದೇನೆ, ನಾನು ಆನೆಸ್ಟ್ ಅಲ್ಲ. ಬಟ್ ನಾನು ಕರೆಪ್ಟ್ ಅಲ್ಲ ಎಂದು ಜಿಲ್ಲೆಯ ಎಲ್ಲಾ ಮತದಾರನ್ನು ಮತ ಕೇಳುತ್ತೇನೆ ಎಂದು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೋಕಸಭೆ ಅತ್ಯಂತ ಪ್ರಮುಖವಾದ ಮನೆ. ದೇಶ ಯಾವರೀತಿ ಸಾಗಬೇಕು ಎಂಬುದರ ಬಗ್ಗೆ ಗಂಭೀರವಾದ ತೀರ್ಮಾನ ತೆಗೆದುಕೊಳ್ಳುವ ಮನೆಯಾಗಿದೆ. ಕಾನೂನುಗಳನ್ನು ರಚನೆ ಮಾಡುವ ಮನೆಯಾಗಿದೆ, ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಹುತೇಕ ಸ್ಪರ್ಧಿಗಳು ವಕೀಲರಾಗಿದ್ದಾರೆ ಎಂದರು.

ನಾನು ಲೋಕಸಭಾ ಸದಸ್ಯನಾದ ಮೇಲೆ ಎಚ್‍ಎಂಟಿ ಕಾರ್ಖಾನೆ ಜಾಗವನ್ನು ಇಸ್ರೊಗೆ ನೀಡಲಾಗಿದೆ. ಎಚ್‍ಎಎಲ್ ಶಿಫ್ಟ್ ಮಾಡಬೇಕು ಅಂತಾ ಗೋವಾಕ್ಕೆ ನಿರ್ಧಾರ ಆಯಿತು. ಆದರೆ ನಾನು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಬಹಳ ಹೋರಾಟ ಮಾಡಿದ ಕಾರಣ ಅದನ್ನು ಉಳಿಸಿಕೊಳ್ಳಲು ಸಾಧ್ಯವಯಿತು. ಜನಗಳ ಹಣವನ್ನು ಸದ್ವಿನಿಯೋಗ ಪಡಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದೇನೆ. ತೆಂಗು ಬೆಲೆ ಕುಸಿತವಾಗಿದೆ. ನಾನು ಇದ್ದಾಗ ಅದರ ಬಗ್ಗೆ ಚರ್ಚೆ ಮಾಡಿ 18 ಸಾವಿರ ನೀಡಲಾಗಿತ್ತು. ಆದರೆ ಈಗ ಕುಸಿತವಾಗುತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಸ್ತಾಪ ಮಾಡಿದ್ದೆ ಹಾಗಾಗಿ ಕೊಬ್ಬರಿ ಬೆಲೆ ಏರಿಕೆಯಾಗಿತ್ತು. ನನ್ನ ಸಂಸತ್ ಸದಸ್ಯರ ಅನುದಾನ 25 ಕೋಟಿ ರೂ. ಅನ್ನು ಅಭಿವೃದ್ಧಿ ಕಾಮಗಾರಿ ಮಾಡಿದ್ದೇನೆ. ಒಂದೂ ರೂ ವ್ಯರ್ಥ ಮಾಡಲು ಬಿಡಲಿಲ್ಲ. ಕುಡಿಯುವ ನೀರು, ಸಮುದಾಯದ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ ಎಂದರು.

ತೆಂಗಿನ ಉತ್ಪನ್ನ ಖರೀದಿ ಮಾಡುವ ಕಾಲ ಬರುತ್ತದೆ. ಬಹಳ ಡಿಮ್ಯಾಂಡ್ ಬರುತ್ತದೆ. ಜಿಲ್ಲೆಯಲ್ಲಿ ಚರ್ಚೆಯಲ್ಲಿರುವ ವಿಮಾನ ನಿಲ್ದಾಣ ಬರುತ್ತೆ ಎಂಬ ಬಗ್ಗೆ ಯಾವುದೇ ಅಧಿಕೃತ ಆದೇಶ ಆಗಿಲ್ಲ. ಪಾಸ್‍ಪೋರ್ಟ್ ಕಛೇರಿ ತಂದಿದ್ದೇನೆ ಎಂದರು.

ಸ್ಮಾರ್ಟ್ ಸಿಟಿ ನಮ್ಮೂರಿಗೆ ಬಂತು ಸಮಾಧಾನ ಇದೆ. ಆದರೆ ಗುಣಮಟ್ಟ ಹೇಗಿದೆ ಅನ್ನೋದು ಜನರು ಗಮನಿಸುತ್ತಿರುತ್ತಾರೆ. ಅದರ ಬಗ್ಗೆ ಮಾತನಾಡೋದು ಸಮಂಜಸವಲ್ಲ ಎಂದರು.

ಸ್ಮಾರ್ಟ್ ಸಿಟಿಗೆ ಹೊಸ ರೂಪುರೇಷೆ ಕೊಡಬೇಕು. ಆ ಬಗ್ಗೆ ಚಿಂತನೆ ನಡೆಸುತ್ತೇನೆ. ಈಗಾಗಲೇ ಸ್ಮಾರ್ಟ್ ಸಿಟಿ ಅಭಿವೃದ್ಧಿ ಕಾಮಗಾರಿಗಳನ್ನು ಗಮನಿಸಿದ್ದೇನೆ. ಹೈನುಗಾರಿಕೆಗೆ ಉತ್ತೇಜನ ಕೊಡುವ ಬಗ್ಗೆಯೂ ಕ್ರಮ ವಹಿಸಲಾಗುವುದು. ಹಳ್ಳಿಕಾರ್ ತಳಿ ಅಭಿವೃದ್ಧಿಗೆ ಒತ್ತು ಕೊಡುತ್ತೇನೆ. ಮೇವು ಬೆಳೆಯುವುದಕ್ಕೆ ಪೂರಕ ಕೆಲಸ ಮಾಡುತ್ತೇನೆ ಎಂದರು.

ತೆಂಗಿನ ಜೊತೆಗೆ, ತೆಂಗಿನ ಉಪ ಉತ್ಪನ್ನಗಳಾದ ನೀರಾ, ಎಳೆನೀರು,ತೆಂಗಿನ ಹಾಲು, ತೆಂಗಿನ ಎಣ್ಣೆ ಇವುಗಳನ್ನು ಉತ್ಪಾದಿಸುವುದರಿಂದ ಹೆಚ್ಚಿನ ಲಾಭ ರೈತರಿಗೆ ದೊರೆಯಲಿದೆ. ಈ ನಿಟ್ಟಿನಲ್ಲಿ ಒಂದು ಜಿಲ್ಲೆ, ಒಂದು ಉತ್ಪನ್ನದ ಅಡಿಯಲ್ಲಿ ತೆಂಗಿನ ಮೌಲ್ಯವರ್ಧನೆಗೆ ಅದ್ಯತೆ ನೀಡಲಾಗುವುದು ಎಂದು ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು.

ತುಮಕೂರು ರಾಜಧಾನಿ ಬೆಂಗಳೂರಿಗೆ ಪರ್ಯಾಯವಾಗಿ ಬೆಳೆಯುತ್ತಿರುವ ನಗರವಾಗಿದೆ.ಹಾಗಾಗಿ ವರ್ತುಲ ರೈಲ್ವೆ ಜೊತೆಗೆ,ಈಗಾಗಲೇ ರಾಜ್ಯದ ಬಜಟ್‍ನಲ್ಲಿ ಹೆಸರಿಸಿರುವಂತೆ ತುಮಕೂರುವರೆಗೆ ಮೆಟ್ರೋ ವಿಸ್ತರಣೆಗೆ ಕೇಂದ್ರದೊಂದಿಗೆ ವ್ಯವಹರಿಸಲಾಗುವುದು.ಅಲ್ಲದೆ ನೆನೆಗುದಿಗೆ ಬಿದ್ದಿರುವ ತುಮಕೂರು-ರಾಯದುರ್ಗ ಮತ್ತು ತುಮಕೂರು-ದಾವಣಗೆರೆ ರೈಲ್ವೆ ಯೋಜನೆಗಳ ತ್ವರಿತಗತಿ ಅನುಷ್ಠಾನ,ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಮರ್ಪಕ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ತಿಳಿಸಿದರು.

ಸಂಸದನಾದರೆ ಕುಣಿಗಲ್‍ಗೆ ಭೇಟಿ ಕೊಟ್ಟು ಕುದರೆ ಫಾರಂ ಬಗ್ಗೆ ಏನು ಮಾಡಬಹುದು ಎಂಬುದನ್ನು ಯೋಚಿಸುತ್ತೇನೆ ಎಂದರು. ಜನ ತುಂಬಾ ಜಾಗೃತರಿದ್ದಾರೆ. ಕಳೆದ ಚುನಾವಣೆಯಲ್ಲಿ ನನ್ನ ಸೀಟು ಮಾಜಿ ಪ್ರಧಾನಿಗೆ ಹೋಗಿದೆ ಎಂದು ಸಮಾಧಾನಯಿತ್ತು. ಅವರನ್ನ ಗೆಲ್ಲಿಸಬೇಕು ಎಂದು ನಾನೇ ಸ್ವಯಂ ಹೋಗಿ ಭಾಷಣ ಮಾಡಿದ್ದೇನೆ ಎಂದರು. ನಾನು ನನ್ನ ಸೀಟನ್ನು ತ್ಯಾಗ ಮಾಡಿದ್ದೇನೆ. ಸಣ್ಣ ಆರೋಪ ಬಂದಾಗ ಧರ್ಮಸ್ಥಳಕ್ಕೆ ಹೋಗಿ ಪ್ರಮಾಣ ಮಾಡಿದ್ದೇನೆ. ಹೇಮಾವತಿ ಕುಣಿಗಲ್ ಎಕ್ಸ್ ಪ್ರೆಕ್ಸ್ ಕೆನಾಲ್ ಮಾಡೋಕೆ ವಿರೋಧ ಮಾಡಿದ್ದೇ. ತುಮಕೂರು ಜಿಲ್ಲೆಯ ನಿರ್ಧಾರಕ್ಕೆ ಬದ್ಧ. ನಾಲೆಯನ್ನ ಆಧುನಿಕರಣ ಮಾಡಿ ತೆಗೆದುಕೊಂಡು ಹೋಗಿ ಎಂದಿದ್ದೆ. ಕೆರೆಗಳ ಸಂರಕ್ಷಣೆ ಆಗಬೇಕು. ಬಹುತೇಕ ಕೆರೆಗಳು ಮುಚ್ಚಿಹೋಗಿವೆ. ಅದರ ಬಗ್ಗೆಯೂ ಹೆಚ್ಚಿನ ಒತ್ತು ಕೊಡಲಾಗುವುದು. ಸುಸ್ಥಿರ ಅಭಿವೃದ್ಧಿಗಾಗಿ ನಾನು ಪಾರ್ಲಿಮೆಂಟ್‍ನಲ್ಲಿ ಮಾತಾಡಿದ್ದೇನೆ. ಪ್ರಸ್ತಾಪ ಮಾಡಿದ್ದೇನೆ. ನನಗೆ ಇಷ್ಟವಾದ ವಿಷಯವಾಗಿದೆ ಎಂದರು.

ಲೋಕಸಭೆಗೆ ಹೋಗಬೇಕಾದವರು ಕಾನೂನು ರಚಿಸುವುದಕ್ಕೆ ಹೋಗಬೇಕು. ತುಮಕೂರು ಚಿತ್ರಣ ಅರಿತು ಜನರ ಧ್ವನಿಯಾಗಿ ಕೆಲಸ ಮಾಡಬೇಕು. ನಾನು ಉತ್ತಮ ಅಂದರೆ ನನ್ನನ್ನ ಕಳುಹಿಸಿ. ನನ್ನ ಮನಸಿಗೆ ಇಷ್ಟವಾಗೋದು ಕಾಂಗ್ರೆಸ್ ಪಕ್ಷ. ನಮ್ಮ ಪಕ್ಷದ ಸಿದ್ದಾಂತಗಳೇ ಇಷ್ಟವಾಗುತ್ತದೆ. ಹಣದ ಮೇಲೆ ಚುನಾವಣೆ ಮಾಡುತ್ತೇನೆ ಎನ್ನೋದು ಮುಂದಿನ ದಿನಗಳಲ್ಲಿ ಅದು ಬಾರಿ ಅಪಾಯಕಾರಿಯಾಗುತ್ತದೆ ಸಮಾಜಕ್ಕೆ ನನ್ನನ್ನು ಯಾರು ಇವತ್ತಿನವರೆಗೂ ಪ್ರಶ್ನೆ ಮಾಡಿಲ್ಲ. ಅಷ್ಟು ಅದೃಷ್ಟವಂತ ಎಂದರು.

ನೈತಿಕತೆ ಯಾರಿಗೆ ಇದೆ ತೋರಿಸಿ. ನೈತಿಕತೆಗೆ ಎದುರಿಕೊಂಡೆ ನಾನು ಕ್ಷಮೆ ಕೇಳಿದ್ದೇನೆ. ನಾನು ಕರೆಕ್ಟ್ ಮ್ಯಾನ್ ಆಗಿದ್ದೇನೆ ಎಂದರು.

ಜಾತಿ,ಹಣದ ಆಧಾರದಲ್ಲಿ ಚುನಾವಣೆ ನಡೆಯುವುದು ಒಳ್ಳೆಯ ಬೆಳವಣಿಗೆಯಲ್ಲ.ಇದಕ್ಕೆ ನನ್ನ ವಿರೋಧವಿದೆ. ಲಿಂಗಾಯಿತರೆಲ್ಲರೂ ಬಿಜೆಪಿಗೆ ಮತ ನೀಡುತ್ತಾರೆ ಎಂಬುದು ಒಪ್ಪಲು ಸಾಧ್ಯವಿಲ್ಲ.2014ರಲ್ಲಿ ಎಲ್ಲಾ ವರ್ಗದವರು ನನ್ನ ಗೆಲುವಿಗೆ ಸಹಕಾರಿಯಾಗಿದ್ದಾರೆ.ನಾನು ಸಂಸತ್ತಿನಲ್ಲಿ ಮಾಡಿದ ಕೊನೆ ಭಾಷಣ ನಡೆದಾಡುವ ದೇವರು ಡಾ.ಶ್ರೀಶಿವಕುಮಾರ ಸ್ವಾಮೀಗಳಿಗೆ ಭಾರತ ರತ್ನ ನೀಡಬೇಕು ಎಂದು.ನಾನು ಯಾವುದೇ ಜಾತಿಗೆ ಸಿಮೀತವಾಗಿಲ್ಲ ಎಂದು ಪ್ರತಿಪಾದಿಸಿದರು.

ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಸಂಘದ ಪ್ರಧಾನ ಕಾರ್ಯದರ್ಶಿ ರಘುರಾಂ ಮತ್ತು ಎಲ್ಲಾ ಪತ್ರಕರ್ತರಿದ್ದರು.

Leave a Reply

Your email address will not be published. Required fields are marked *