ತುಮಕೂರು:ಮಳೆ ನೀರು ಸಂಗ್ರಹ ಮತ್ತು ಬಳಕೆ ಜನತೆ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ನೀರಿಲ್ಲದೆ ಮಹಾನಗರಗಳು ಖಾಲಿಯಾಗುವ ಸಾಧ್ಯತೆಗಳಿವೆ ಎಂದು ಮಳೆ ನೀರು ತಜ್ಞರಾದ ಶಿವಕುಮಾರ್ ಎಚ್ಚರಿಕೆ ನೀಡಿದರು.
ನಗರದ ಅಮಾನಿಕೆರೆ ಗಾಜಿನಮನೆಯಲ್ಲಿ ತುಮಕೂರು ಜಿಲ್ಲಾ ಪ್ಲಂಬರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿ ಸಿದ್ದ ಮಳೆ ನೀರು ಸಂಗ್ರಹ ಮತತು ಬಳಕೆ ಮಾಡುವ ಬಗ್ಗೆ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ನೀರನ್ನು ಉತ್ಪತ್ತಿ ಮಾಡಲು ಸಾಧ್ಯವಿಲ್ಲ.ಹಾಗಾಗಿ ಇರುವ ನೀರನ್ನು ಸಂಪರ್ಕವಾಗಿ ಬಳಕೆ ಮಾಡುವುದು ಹೇಗೆಂದು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು.
ಭೂಮಿಯ ಮೇಲೆ ನೀರಿನ ಸಮಸ್ಯೆ ಎದುರಾಗಿಲ್ಲ.10 ವರ್ಷಗಳ ಹಿಂದೆ ಎಷ್ಟು ನೀರಿತ್ತೋ,ಆಷ್ಟೇ ನೀರು ಈಗಲೂ ಇದೆ. ಆದರೆ ಅದರ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ.ನೀರು ಇರುವ ಕಡೆ ಮನುಷ್ಯರಿಲ್ಲ,ಮನುಷ್ಯರು ಇರುವ ಕಡೆ ನೀರಿಲ್ಲದಂತಹ ಪರಿಸ್ಥಿತಿ ಇದೆ.ಇದು ನಗರೀಕರಣದ ಪರಿಣಾಮ ಒಂದಾದರೆ, ಹವಾಮಾನ ವೈಫರಿತ್ಯವೂ ಕಾರಣವಾಗಿದೆ. ಹಾಗಾಗಿ ಭೂಮಿಯ ಮೇಲೆ ಬೀಳುವ ಪ್ರತಿ ಮನೆಹನಿಯನ್ನು ಭೂಮಿಯಲ್ಲಿ ಹಿಂಗುವಂತೆ ಮಾಡಬೇಕು. ಇಲ್ಲವೇ ಅದನ್ನು ಸಂಗ್ರಹಿಸಿ ಬಳಕೆ ಮಾಡುವಂತೆ ಮಾಡಿದಾಗ ಮಾತ್ರ ನಾವು ಎದುರಿಸುತ್ತಿರುವ ನೀರಿನ ಕೊರತೆಯಿಂದ ಹೊರಬರಲು ಇರುವ ಏಕೈಕ ಮಾರ್ಗ ಎಂದು ಶಿವಕುಮಾರ್ ತಿಳಿಸಿದರು.
ತುಮಕೂರಿನಂತಹ ಒಣ ಪ್ರದೇಶದಲ್ಲಿಯೂ ವರ್ಷದಲ್ಲಿ 45-50 ದಿನಗಳ ಕಾಲ ಮಳೆಯಾಗುತ್ತೆ,ಒಂದು 30*40 ಮನೆಯ ಮೇಲೆ ಬೀಳುವ ಮಳೆ ನೀರಿನಿಂದ ಎಂಟು ಜನರ ಕುಟುಂಬ ವರ್ಷವಿಡಿ ಬೇರೆಯಾವುದೇ ನೀರಿನ ಆಧಾರವಿಲ್ಲದೆ ಬದುಕು ನಡೆಸಬಹುದು.ಹಾಗಾಗಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಮಳೆನೀರು ಕೋಯ್ಲು ಯೋಜನೆಯನ್ನು ಬಳಸಿಕೊಂಡು ಇಂದು ದೇಶ ಅನುಭವಿಸುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಮಳೆನೀರು ತಜ್ಞ ಶಿವಕುಮಾರ್ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಹಿನಿ ಇರಿಗೇಷನ್ ನಿರ್ದೇಶಕರಾದ ಆನಂದ್.ಆರ್. ವಹಿಸಿದ್ದರು.ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಗಿರೀಶ್,ವಕೀಲರಾದ ಶಿವಣ್ಣ,ತುಮಕೂರು ಜಿಲ್ಲಾ ಪ್ಲಬರ್ಸ್ ಅಸೋಸಿಯೇಷನ್‍ನ ಅಧ್ಯಕ್ಷ ಕೆ.ಬಿ.ಜಯಣ್ಣ, ಗೌರವಾಧ್ಯಕ್ಷ ಹುಚ್ಚೇಗೌಡ, ಉಪಾಧ್ಯಕ್ಷ ಕುಮಾರನಾಯ್ಕ್, ಜೆಸಿಬಿ ವೆಂಕಟೇಶ್, ಜಿಲ್ಲಾ ಉಸ್ತುವಾರಿ ಜೆ.ಮಂಜುನಾಥ್, ಹಂದ್ರಾಳ್ ನಾಗಭೂಷಣ್, ಗೋಪಾಲಕೃಷ್ಣ, ಹಾರ್ಡ್‍ವೇರ್ಸ್ ಅಂಗಡಿಗಳ ಮಾಲೀಕರಾದ ರಂಗನಾಥ್, ಚಂದ್ರು,ಸುನಿಲ್, ತೇಜಸ್, ವಿನಯ್,ವಿಶ್ವನಾಥ್, ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಖಜಾಂಚಿ ಆಶ್ವಥನಾರಾಯಣ್ ಅವರುಗಳು ಪಾಲ್ಗೊಂಡಿದ್ದರು.