ವಿದ್ಯುತ್ ಬಿಲ್ಲು ಕಟ್ಟದಿದ್ದರೆ ಮೀಟರ್ ಕಿತ್ತು, ಶಾಶ್ವತ ವಿದ್ಯುತ್ ಕಡಿತ

ತುಮಕೂರು : ಬೆಸ್ಕಾಂ ನಗರ ಉಪ ವಿಭಾಗ-1ರ ಗ್ರಾಹಕರು ವಿದ್ಯುತ್ ಸ್ಥಾವರದ ಬಿಲ್ ಮೊತ್ತವನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆ.ಇ.ಆರ್.ಸಿ)ದ ನಿಯಮಾನುಸಾರ ಶಾಶ್ವತ ವಿದ್ಯುತ್ ಸಂಪರ್ಕ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ಪಿ. ನಾಗರಾಜು ತಿಳಿಸಿದ್ದಾರೆ.

ಸತತವಾಗಿ 2 ತಿಂಗಳು ವಿದ್ಯುತ್ ಬಿಲ್ಲು ಪಾವತಿಸದಿದ್ದಲ್ಲಿ, 3ನೇ ತಿಂಗಳಲ್ಲಿ ಗ್ರಾಹಕರ ವಿದ್ಯುತ್ ಸ್ಥಾವರದ ಮಾಪಕವನ್ನು (ಮೀಟರ್) ಕಳಚಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು.

ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ ನಂತರ ಅದೇ ವಿದ್ಯುತ್ ಸ್ಥಾವರಕ್ಕೆ ಪುನಃ ವಿದ್ಯುತ್ ಸಂಪರ್ಕ ಬೇಕಾದರೆ ಉಚ್ಛ ನ್ಯಾಯಾಲಯದ ಆದೇಶದ ಪ್ರಕಾರ ವಾಸ ಧೃಡೀಕರಣ ಪತ್ರ (Occupancy Certificate) ದೊಂದಿಗೆ ಹೊಸದಾಗಿ ಅರ್ಜಿ ಸಲ್ಲಿಸಬೇಕು. ಎಲ್ಲ ಗ್ರಾಹಕರು ತಮ್ಮ ಬಾಕಿ ವಿದ್ಯುತ್ ಬಿಲ್ಲನ್ನು ತಕ್ಷಣವೇ ಪಾವತಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *