ವಾಣಿಜ್ಯೋದ್ಯಮಿಗಳಾದರೆ ಇಡೀ ಪ್ರಪಂಚವನ್ನೇ ಆಳಬಹುದು

ತುಮಕೂರು: ಕೇವಲ ಪದವಿಗಾಗಿ ವಾಣಿಜ್ಯಶಾಸ್ತ್ರ ಅಧ್ಯಯನ ಮಾಡಬೇಡಿ. ವಾಣಿಜ್ಯೋದ್ಯಮಿಗಳಾದರೆ ಇಡೀ ಪ್ರಪಂಚವನ್ನೇ ಆಳಬಹುದು ಎಂದು ಕುಲಸಚಿವೆ ನಾಹಿದಾ ಜûಮ್ ಜûಮ್ ಹೇಳಿದರು.

ತುಮಕೂರು ವಿವಿ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗವು ಶನಿವಾರ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.

ಹೊಸ ಕಲ್ಪನೆಗಳು, ಆಲೋಚನೆಗಳಿಂದ ಸಂಪಾದನೆಯನ್ನು ವಿಶಿಷ್ಟ ರೀತಿಯಲ್ಲಿ ಮಾಡಬಹುದು. ಸ್ವಯಂ ಉದ್ಯೋಗದ ಕುರಿತು ವಿಚಾರಮಾಡಿ. ಪ್ರತಿ ದಿನಕ್ಕೂ ಬೆಲೆ ಇದೆ. ಮೃದು ಕೌಶಲ್ಯಗಳು, ಸಂವಹನದ ಕಡೆ ಗಮನಹರಿಸಿ ಎಂದು ಕಿವಿಮಾತು ಹೇಳಿದರು.

ವಿವಿ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷ ಪ್ರೊ. ಬಿ. ಶೇಖರ್, ಹಿರಿಯ ಪ್ರಾಧ್ಯಾಪಕರಾದ ಪ್ರೊ. ಪಿ. ಪರಮಶಿವಯ್ಯ, ಪ್ರೊ. ಜಿ. ಸುದರ್ಶನ ರೆಡ್ಡಿ, ಸಹ ಪ್ರಾಧ್ಯಾಪಕ ಡಾ. ಸುರೇಶ್ ಬಿ. ಕೆ., ಕರ್ನಾಟಕ ಕೇಂದ್ರಿಯ ವಿವಿಯ ಪ್ರಾಧ್ಯಾಪಕ ಪ್ರೊ. ದೇವರಾಜಪ್ಪ ಎಸ್., ಉಪನ್ಯಾಸಕ ವಿಜಯ್ ಎನ್. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *