ಜ್ಞಾನವಂತರಾದರೆ ಸಂಪತ್ತು ತಾನಾಗಿಯೇ ಹಿಂಬಾಲಿಸುತ್ತದೆ

ತುಮಕೂರು:ಜ್ಞಾನವೆಂಬುದು ಸಂಪತ್ತು. ಹಣ ಒಮ್ಮೆ ಬರಬಹುದು, ಹೋಗಲು ಬಹುದು.ಆದರೆ ಜ್ಞಾನ ಒಮ್ಮೆ ನಿಮ್ಮೊಳಗೆ ಬಂದರೆ ಅದು ನಿರಂತರ ವೃದ್ದಿಯಾಗುತ್ತದೆ, ಹಾಗಾಗಿ ನೀವು ಜ್ಞಾನವಂತರಾಗಲು ಹೆಚ್ಚಿನ ಗಮನ ನೀಡಿ, ನಂತರ ಸಂಪತ್ತು ನಿಮ್ಮನ್ನು ತಾನಾಗಿಯೇ ಹಿಂಬಾಲಿಸುತ್ತದೆ ಎಂದು ಮೈಸೂರು ವಿವಿ ಅರ್ಥಶಾಸ್ತ್ರ ಆಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ.ಶಿವಚಿತ್ತಯ್ಯ ಅಭಿಪ್ರಾಯಪಟ್ಟರು.

ನಗರದ ಶ್ರೀಸಿದ್ದಗಂಗಾ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜುವತಿಯಿಂದ ಹಮ್ಮಿಕೊಂಡಿದ್ದ ಸ್ಪೂರ್ತಿ ಎನ್.ಎಸ್.ಎಸ್,ಯುವ ರೆಡ್‍ಕ್ರಾಸ್ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ನಿಮ್ಮ ಗುರಿ ಏನೇ ಇರಲಿ.ಅದಕ್ಕೆ ತಕ್ಕದಾದ ಜ್ಞಾನವನ್ನು ಸಂಪಾದಿಸಿ,ಆಗ ಮಾತ್ರ ಸಮಾಜದಲ್ಲಿ ನಿಮಗೆ ಗೌರವ ದೊರೆಯುತ್ತದೆ ಎಂದರು.

ನಿಮ್ಮ ತಂದೆ ತಾಯಿಗಳು ನಿಮ್ಮಿಂದ ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಅದರ ಜೊತೆಗೆ ನಿಮ್ಮ ಮುಂದೆ ಅನೇಕ ಆಕರ್ಷಣೆಗಳಿವೆ.ಬಾಹ್ಯ ಅಕರ್ಷಣೆಗಳಿಂದ ದೂರವಾದರೆ ಸಾಧನೆ ನಿಮ್ಮದಾಗುತ್ತದೆ.ಲಾಯರ್,ಎಂಜಿನಿಯರ್,ಉಪನ್ಯಾಸಕ, ರಾಜಕಾರಣಿಯಾಗಲು ಅವಕಾಶಗಳ ಬಾಗಿಲು ತೆರೆದಿದೆ.ಆಯ್ಕೆ ನಿಮ್ಮದು.ಅದಕ್ಕೆ ಬೇಕಾದ ತಯಾರಿಯನ್ನು ಈಗಿನಿಂದಲೇ ಮಾಡಿಕೊಳ್ಳಿ,ಇದಕ್ಕೆ ಪೂರಕವಾಗಿ ನಿಮ್ಮಗೆ ಎನ್.ಎಸ್.ಎಸ್,ರೆಡ್‍ಕ್ರಾಸ್,ಕಲೆ ಮತ್ತು ಕ್ರೀಡಾ ಚಟುವಟಿಕೆಗಳು ಸಹಕಾರಿ ಯಾಗಲಿವೆ.ಸರಿದಾರಿಯಲ್ಲಿ,ನಿರಂತರ ಪರಿಶ್ರಮದಿಂದ ಮುನ್ನಡೆದರೆ ವೇದಿಕೆಯ ಮುಂದಿರುವ ನೀವು,ಮುಂದೊಂದು ದಿನ ವೇದಿಕೆಯ ಮೇಲೆ ನಿಂತು,ನನ್ನಂತೆಯೇ ಸಾವಿರಾರು ಯುವಜನರಿಗೆ ಮಾರ್ಗದರ್ಶನ ಮಾಡಬಹುದು ಎಂದು ಪ್ರೊ.ಶಿವಚಿತ್ತಪ್ಪ ಮಕ್ಕಳಿಗೆ ಸ್ಪೂರ್ತಿಯ ಮಾತುಗಳನ್ನಾಡಿದರು.

ಜಾನಪದ ಕಲಾವಿದರಾದ ಅಮ್ಮ ರಾಮಚಂದ್ರಪ್ಪ ಮಾತನಾಡಿ,ನಾನು ಕ್ರಮಬದ್ದ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿಲ್ಲ.ಆದರೂ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ತಂದುಕೊಟ್ಟಿದ್ದೇನೆ.ಇದು ಸಂಗೀತಕ್ಕೆ ಇರುವ ಶಕ್ತಿ,ಕಡು ಬಡತನದಲ್ಲಿಯೇ ಹುಟ್ಟಿ, ಮೂರು ಹೊತ್ತಿನ ಊಟಕ್ಕೂ ಪರದಾಡುತ್ತಿನ ನನ್ನನ್ನು ಇದುವರೆಗೂ ಸಾಕಿ,ಸಲಹಿರುವುದು ಈ ಜನಪದ ಸಂಗೀತ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದಗಂಗಾ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ರಾದ ಡಾ.ಹೆಚ್,ಎಂ.ದಕ್ಷಿಣಮೂರ್ತಿ ಮಾತನಾಡಿ,ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕಾಗಿ ಹಲವಾರು ಸಾಂಸ್ಕøತಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ.ಎನ್.ಎಸ್.ಎಸ್ ಹಲವಾರು ವಿದ್ಯಾರ್ಥಿ ಯುವಜನರಿಗೆ ತಮ್ಮ ಬದುಕು ಕಟ್ಟಿಕೊಳ್ಳಲು ವೇದಿಕೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರೊ.ಶೀಲ.ಕೆ.ಪಿ, ಶ್ರೀಮತಿ ದಿವ್ಯ,ಶ್ರೀಮತಿ ಪಾವನ,ಶ್ರೀಮತಿ ಶ್ವೇತ.ಸಿ.ಎಸ್. ಮತ್ತಿತರರು ಪಾಲ್ಗೊಂಡಿದ್ದರು. ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

Leave a Reply

Your email address will not be published. Required fields are marked *