ಮಹಿಳೆಯರ ಬಗ್ಗೆ ಕೀಳು ಮಾತು, ಕಲ್ಲಡ್ಕ ಪ್ರಭಾಕರ ಭಟ್ಟರ ಮೇಲೆ ಕಾನೂನು ಕ್ರಮಕ್ಕೆ ಜಾಗೃತ ನಾಗರಿಕರ ಒತ್ತಾಯ

ಸಮಾಜದಲ್ಲಿ ದ್ವೇಷ ಬಿತ್ತುವ- ಮಹಿಳೆಯರ ಕುರಿತು ಕೀಳಾಗಿ ನಾಲಗೆ ಹರಿ ಬಿಟ್ಟ ಕಲ್ಲಡ್ಕ ಪ್ರಭಾಕರ ಭಟ್ಟ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಜಾಗೃತ ನಾಗರಿಕರು ಕರ್ನಾಟಕ  ಒತ್ತಾಯಿದೆ.

ಪ್ರೊ.ಕೆ.ಮರುಳಸಿದ್ದಪ್ಪ,ಡಾ.ಜಿ.ರಾಮಕೃಷ್ಣ,ಡಾ.ವಿಜಯಾ,ಪ್ರೊ.ಎಸ್.ಜಿ.ಸಿದ್ದರಾಮಯ್ಯ,ಪ್ರೊ.ರಾಜೇಂದ್ರ ಚೆನ್ನಿ,ಡಾ.ಬಂಜಗೆರೆ ಜಯಪ್ರಕಾಶ್,ಬಿ.ಶ್ರೀಪಾದ ಭಟ್,
ವಿಮಲಾ.ಕೆ.ಎಸ್.,ಟಿ.ಸುರೇಂದ್ರ ರಾವ್,ಸುಷ್ಮ,,ವೆಂಕಟೇಶ ಪ್ರಸಾದ್,ಡಾ.ಎನ್.ಗಾಯತ್ರಿ,,ಮೂಡ್ನಾಕೂಡು ಚಿನ್ನಸ್ವಾಮಿ,ಡಾ.ಲೀಲಾಸಂಪಿಗೆ,ಡಾ.ಎಚ್.ಜಿ‌.ಜಯಲಕ್ಷ್ಮಿ,ಡಾ.ಬಿ.ಆರ್‌.ಮಂಜುನಾಥ್,
ಜೆ.ಸಿ.ಶಶಿಧರ್,ವಾಸುದೇವ ಉಚ್ಚಿಲ,ಬಿ.ಎನ್‌.ಯೋಗಾನಂದ,ಡಾ.ಮೀನಾಕ್ಷಿ ಬಾಳಿ
ಡಾ.ವಸುಂಧರಾ ಭೂಪತಿ,ಜಾಣಗೆರೆ ವೆಂಕಟರಾಮಯ್ಯ ಅವರುಗಳು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಒತ್ತಾಯಿಸಿದ್ದಾರೆ.

ಮಂಡ್ಯದಲ್ಲಿ  ನಡೆದ ಹನುಮಾನ್ ಸಂಕೀರ್ತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್ಟ ‘ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡ, ಮುಸ್ಲಿಂರಿಗೆ ಮೋದಿ ಬಂದ ಮೇಲೆ ಪರ್ಮನೆಂಟ್ ಗಂಡ ಕೊಟ್ಟಿದ್ದು’ ಎಂದು ಹೇಳಿದರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ  ಎಂದು ತಿಳಿದ್ದಾರೆ.

ಮಹಿಳೆಯರ ಕುರಿತು ಅತ್ಯಂತ ಕೀಳು ಮಟ್ಟದ ಅವಮಾನಕರ ಈ ಹೇಳಿಕೆಯನ್ನು ನಾವು ಖಂಡಿಸುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿದ್ದಾರೆ.

ಮರ್ಯಾದ ಪುರುಷೋತ್ತಮ ರಾಮನನ್ನು ಹಿಂದೂ ಧಾರ್ಮಿಕತೆಗೆ ಬಳಸಿಕೊಂಡು ವೈಭವೀಕರಿಸುವ ಇವರು ಕಾಲ ಕಾಲಕ್ಕೆ ಈ ರೀತಿಯ ಜೀವ ವಿರೋಧಿ ಹೇಳಿಕೆ ಕೊಡುತ್ತಾ ಬಂದಿದ್ದಾರೆ.

ನಾಗರಿಕ ಸಮಾಜದ ವರ್ತನೆಗಳನ್ನು ತಿರಸ್ಕರಿಸುವ ಇವರ ಹೇಳಿಕೆಗಳು ಕೇವಲ ಮುಸ್ಲಿಂ ಮಹಿಳೆಯರಿಗೆ ಮಾತ್ರವಲ್ಲ, ಎಲ್ಲಾ ಸಮುದಾಯದ ಮಹಿಳೆಯರಿಗೆ ಮಾಡಿದ ಅವಮಾನ ಮತ್ತು ಹೀಗಳಿಕೆ ಎಂದು ಹೇಳ ಬಯಸುತ್ತೇವೆ ಎಂದಿದ್ದಾರೆ.

ಆದರೆ ಕಲ್ಲಡ್ಕ ಪ್ರಭಾಕರ ಭಟ್ಟರಂತಹವರನ್ನು ಅಭಿಮಾನಿಸುವ, ಹಿಂಬಾಲಿಸುವ ಜನರಿದ್ದಾರೆ ಎನ್ನುವ ಸಂಗತಿಯೇ ಅತ್ಯಂತ ಕಳವಳಕಾರಿಯಾಗಿದೆ ಎಂದು ಆತಂತ ವ್ಯಕ್ತ ಪಡಿಸಿದ್ದಾರೆ.

ನ್ಯಾಷನಲ್ ಕ್ರೈಂ ರಿಪೋರ್ಟ್ ಬ್ಯೂರೋ ‘2022ರಲ್ಲಿ ದೇಶದಲ್ಲಿ ಮಹಿಳೆಯರ ವಿರುದ್ಧ 4,45,256 ದೌರ್ಜನ್ಯ ಪ್ರಕರಣಗಳು ದಾಖಲಾಗಿದೆ. 2019-21ರ ಅವಧಿಯಲ್ಲಿ 13.13 ಲಕ್ಷ ಮಹಿಳೆಯರು ಮತ್ತು ಹುಡುಗಿಯರು ಕಾಣೆಯಾಗಿದ್ದಾರೆ. ಕರ್ನಾಟಕದಲ್ಲಿ 40,000 ಮಹಿಳೆಯರು ಕಾಣೆಯಾಗಿದ್ದಾರೆ ಎಂದು ವರದಿ ನೀಡಿದೆ. ಮಹಿಳೆಯರ ಆಸ್ತಿತ್ವಕ್ಕೆ
ಧಕ್ಕೆಯಾಗುತ್ತಿರುವ ಇಂತಹ ದುರಿತ ಕಾಲದಲ್ಲಿ ಅವರಿಗೆ ಒತ್ತಾಸೆಯಾಗಿ ನಿಲ್ಲಬೇಕಾಗಿರುವುದು ಮಾನವ ಧರ್ಮ ಎಂದಿದ್ದಾರೆ.

ಆದರೆ ಕಲ್ಲಡ್ಕ ಪ್ರಭಾಕರ ಭಟ್ಟನಂತಹವರು ಇದಕ್ಕೆ ಪ್ರತಿಕೂಲವಾಗಿ ವರ್ತಿಸುತ್ತಾ ಮಹಿಳೆಯರ ಘನತೆ, ಗೌರವಕ್ಕೆ ಧಕ್ಕೆ ತರುತ್ತಿರುವುದು ಇದೇ ಮೊದಲಲ್ಲ. ಇಂತಹ ಸಂದರ್ಭಗಳಲ್ಲಿ ನೆಲದ ಕಾನೂನು ತನ್ನ ಕೆಲಸ ಮಾಡಿದರೆ ಇಂತಹ ಕ್ಷುದ್ರ ಮನಸ್ಸಿನ‌ ಜನರು ತಹಬಂದಿಯಲ್ಲಿರುತ್ತಾರೆ.

ಸರ್ಕಾರವು ಈಗಲೂ ಮೌನವಾಗಿರಬಾರದೆಂದು ಆಗ್ರಹಿಸಿದ್ದಾರೆ.

ಈ ಕೂಡಲೇ ಕಲ್ಲಡ್ಕ ಪ್ರಭಾಕರ ಭಟ್ಟನ ವಿರುದ್ಧ  ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *