ತುಮಕೂರು : 7ನೇ ಸುತ್ತು ಮತ ಎಣಿಕೆ ಮುಗಿದರೂ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರು ತೀವ್ರ ಹಿನ್ನಡೆ ಅನುಭವಿಸಿದ್ದು, ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 32,328 ಮತಗಳಿಂದ ಮುನ್ನಡೆಯನ್ನು ಸಾಧಿಸಿದ್ದಾರೆ.
ಆರಂಭಿಕ ಸುತ್ತಿನಿಂದಲೇ ಮುನ್ನಡೆಯನ್ನು ಕಾಯ್ದುಕೊಂಡು ಬಂದಿರುವ ವಿ.ಸೋಮಣ್ಣ ಗೆಲುವಿನತ್ತ ಸಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರು ಆರಂಭಿಕ ಸುತ್ತಿನಿಂದಲೇ ಹಿನ್ನಡೆ ಪಡೆದುಕೊಂಡಿದ್ದು, 7ನೇ ಸುತ್ತಿನಲ್ಲಿ ವಿ.ಸೋಮಣ್ಣ 1,51,927 ಮತ ಪಡೆದರೆ, ಎಸ್.ಪಿ.ಮುದ್ದಹನುಮೇಗೌಡರು 1,19,599 ಮತ ಪಡೆದು 32,328 ಮತಗಳ ಹಿನ್ನಡೆಯನ್ನು ಪಡೆದುಕೊಂಡಿದ್ದಾರೆ.