ತುಮಕೂರು : ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗಸ್ವಾಮೀಜಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರುಗಳು ಇಂದು ಬೆಳಿಗ್ಗೆಯೇ ಮತ ಚಲಾವಣೆ ಮಾಡಿದರು.

ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಸ್ವಾಮಿಗಳು ಮಠದ ಶಾಲೆಯಲ್ಲಿ ಬೆಳಿಗ್ಗೆ 7.30ಕ್ಕೆ ಮತದಾನವನ್ನು ಮತದಾನ ಮಾಡಿದರೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಹೆಗ್ಗೆರೆ ಗೊಲ್ಲಹಳ್ಳಿಯ ಸರ್ಕಾರಿ ಶಾಲೆಯಲ್ಲಿ ತಮ್ಮ ಪತ್ನಿ ಕನ್ನಿಕಾಪರಮೇಶ್ವರಿ ಅವರ ಜೊತೆ ಬಂದು ಮತದಾನ ಮಾಡಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಅವರು ಶಿರಾಗೇಟಿನ ಕಾಳಿದಾಸ ಪ್ರೌಢಶಾಲೆಯಲ್ಲಿ ಮತದಾನ ಮಾಡಿದರು. ಜಿಲ್ಲಾಧಿಕಾರಿಗಳು ತಮ್ಮ ಪತಿಯೊಡನೆ ಬಂದು ಮತದಾನ ಮಾಡಿದ್ದು ವಿಶೇಷವಾಗಿತ್ತು.

ಹಾಲಿ ಸಂಸದ ಜಿ.ಎಸ್. ಬಸವರಾಜುರವರು ಗಾಂಧಿನಗರದ ಸರ್ಕಾರಿ ಶಾಲೆಯಲ್ಲಿ ತಮ್ಮ ಪತ್ನಿ ಜೊತೆ ಆಗಮಿಸಿ ಮತ ಚಲಾಯಿಸಿದರು.

ಕೆಲವು ಕಡೆ 75ರಿಂದ80 ವರ್ಷದ ವೃದ್ದರು ಮತ್ತು ಅಂಗವಿಕಲರು ವ್ಹೀಲ್ ಚೇರ್‍ನಲ್ಲಿ ಬಂದು ಮತ ಚಲಾಯಿಸಿದ್ದು ವಿಶೇಷವಾಗಿತ್ತು, ಕೆಲ ಯುವಕ-ಯುವತಿಯರು ಮೊದಲ ಬಾರಿಗೆ ಮತ ಚಲಾಯಿಸಿ ಖುಷಿ ಪಟ್ಟರು.

ಮಧ್ಯಾಹ್ನ ಬಿಸಿಲು ಹೆಚ್ಚಿರುವುದರಿಂದ ಮತದಾರರು ಬೆಳಿಗ್ಗೆಯೇ ಮತ ಚಲಾಯಿಸಲು ಮತಗಟ್ಟೆಗಳ ಬಳಿ ಸಾಲುಗಟ್ಟಿ ನಿಂತಿರುವುದು ಸಾಮಾನ್ಯವಾಗಿತ್ತು.
ಬೆಳಿಗ್ಗೆ 11ಗಂಟೆಯ ವೇಳೆಗೆ ತುಮಕೂರು ಲೋಕಸಭಾ ವ್ಯಾಪ್ತಿಯ ಚಿ.ನಾ.ಹಳ್ಳಿ 22.31%, ಗುಬ್ಬಿ 27.58%, ಕೊರಟಗೆರೆ 23.81%, ಮಧುಗಿರಿ 21.90%, ತಿಪಟೂರು 23.85%, ತುಮಕೂರು 23.36%, ತುಮಕೂರು ಗ್ರಾಮಾಂತರ 21.72% ಮತ್ತು ತುರುವೇಕೆರೆ23.66% ಶೇಕಡ ಮತದಾನವಾಗಿದ್ದು ಒಟ್ಟು 23.33%ರಷ್ಟು ಮತದಾನವಾಗಿದೆ.