ತುಮಕೂರು: ನಗರದ ಶಿರಾರಸ್ತೆಯ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಹೃದ್ರೋಗ ವಿಭಾಗದ 2ನೇ ಕ್ಯಾಥ್ ಲ್ಯಾಬ್ ಉದ್ಘಾಟನೆ ಮತ್ತು ಸಿ.ಎಂ.ಇ ಕಾರ್ಯಾಗಾರವನ್ನು ಶ್ರೀದೇವಿ ಆಸ್ಪತ್ರೆಯ ಅಡಿಟೋರಿಯಂ ಸಭಾಂಗಣದಲ್ಲಿ ಫೆ. 19ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್‍ರವರು ಉದ್ಘಾಟಿಸಲಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಸೇವೆಗೆ ಸಮರ್ಪಿತವಾದ ಆಚಾರ್ಯ ಡಾ.ಎಂ.ನಾಗರಾಜುರವರ ಲೈಫ್ ಮಿಷನ್ ಪುಸ್ತಕವನ್ನು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಸಗೋಡು ಜಯಸಿಂಹರವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಅಧ್ಯಕ್ಷತೆಯನ್ನು ಶ್ರೀದೇವಿ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್‍ರವರು ವಹಿಸಲಿದ್ದಾರೆ. ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಜಪಾನಿನ ಸಿಮಾಂಜೋ ಕಂಪನಿಯ ಭಾರತೀಯ ವ್ಯಾಪಾರ ಅಭಿವೃದ್ಧಿಯ ವ್ಯವಸ್ಥಾಪಕರಾದ ಉಯಾಮಾ ಡೈಕಿ ಮತ್ತು ಭಾರತೀಯ ಗವರ್ನಲ್ ಮ್ಯಾನೇಜರ್ (ಸೇಲ್ಸ್) ರಾಜೀವ್ ಝಾ, ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಎಂ ಹುಲಿನಾಯ್ಕರ್, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್, ಶ್ರೀದೇವಿ ಆಸ್ಪತ್ರೆಯ ನೇತ್ರ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾದ ಡಾ.ಪಿ.ಲಾವಣ್ಯ, ಶ್ರೀದೇವಿ ಚಾರಿಟಬಲ್ ಟ್ರಸ್ಟ್‍ನ ಟ್ರಸ್ಟಿಯಾದ ಶ್ರೀಮತಿ ಅಂಬಿಕಾ ಎಂ ಹುಲಿನಾಯ್ಕರ್, ಶ್ರೀದೇವಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎಲ್. ಹರೇಂದ್ರಕುಮಾರ್, ಉಪಪ್ರಾಂಶುಪಾಲರಾದ ಡಾ.ರೇಖಾಗುರುಮೂರ್ತಿ, ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಅಧೀಕ್ಷಕರಾದ ಡಾ.ಕೆ.ಮೋಹನ್‍ಕುಮಾರ್, ಶ್ರೀದೇವಿ ವೈದ್ಯಕೀಯ ಆಡಳಿತ ವಿಭಾಗದ ಉಪಪ್ರಾಂಶುಪಾಲರಾದ ಡಾ.ಎಂ.ಎನ್.ಹೇಮಂತ್‍ರಾಜ್, ಶ್ರೀದೇವಿ ಆಸ್ಪತ್ರೆಯ ಹೃದಯ ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಸುರೇಶ್.ಎಸ್.ರವರು ಭಾಗವಹಿಸಲಿದ್ದಾರೆ.