ಚರಕ ಕಿಡ್ನಿ ಸ್ಟೋನ್ ಮತ್ತು ಯುರೋಲಜಿ ಸೆಂಟರ್ ಉದ್ಘಾಟನೆ

ತುಮಕೂರು: ನಗರದ ಡಾ.ಶಿವಕುಮಾರ ಸ್ವಾಮೀಜಿ ವೃತ್ತದ ಸಮೀಪವಿರುವ ಬಿ.ಎಚ್.ರಸ್ತೆಯಲ್ಲಿ ಡಾ. ಎಂ.ಬಿ. ಅತಿಶ ಮತ್ತು ಡಾ.ಎಂ.ರಂಜಿತ ಆರಂಭಿಸಿರುವ ಚರಕ ಕಿಡ್ನಿ ಸ್ಟೋನ್ ಮತ್ತು ಯುರೋಲಜಿ ಸೆಂಟರ್ ಹಾಗೂ ಚರಕ ಫರ್ಟಿಲಿಟಿ ಮತ್ತು ಐವಿಎಫ್ ಸೆಂಟರ್ ಆಸ್ಪತ್ರೆಯನ್ನು ಗುರುವಾರ ಉದ್ಘಾಟಿಸಲಾಯಿತು.

ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್, ಜನಪರ ಚಿಂತಕ ಕೆ.ದೊರೈರಾಜ್ ಹಾಗೂ ಹಿರಿಯ ಪತ್ರಕರ್ತ ಎಸ್.ನಾಗಣ್ಣ ಆಸ್ಪತ್ರೆಗೆ ಚಾಲನೆ ನೀಡಿ ಡಾ.ಎಂ.ಬಿ.ಅತಿಶ ದಂಪತಿಗೆ ಶುಭ ಹಾರೈಸಿದರು.

ಕಿಡ್ನಿ ಸ್ಟೋನ್ ಮತ್ತು ಯರಾಲಜಿ ಸೆಂಟರ್‍ನಲ್ಲಿ ಮೂತ್ರಪಿಂಡ ಕಲ್ಲುಗಳ ನಿರ್ವಹಣೆ, ಪ್ರಾಸ್ಟೇಟ್ ಸಮಸ್ಯೆಗೆ ಚಿಕಿತ್ಸೆ, ನಿಮಿರುವಿಕೆ ಸಮಸ್ಯೆಗೆ ಚಿಕಿತ್ಸೆ, ಪುರುಷ ಸಂತಾನಹೀನತೆ ಸೇವೆಗಳು, ಮೂತ್ರಪಿಂಡ, ಮೂತ್ರಕೋಶ ಕ್ಯಾನ್ಸರ್ ಚಿಕಿತ್ಸೆ ಮತ್ತು ಎಲ್ಲಾ ತರಹದ ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆ ಸೇವೆಗಳು ಲಭ್ಯವಿವೆ ಎಂದು ಕಿಡ್ನಿ ಕಸಿ ತಜ್ಞ ಡಾ.ಎಂ.ಬಿ.ಅತಿಶ ತಿಳಿಸಿದರು.

ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಮತ್ತು ಫರ್ಟಿಲಿಟಿ ತಜ್ಞೆಯಾದ ಡಾ.ಎಂ.ರಂಜಿತ ಮಾತನಾಡಿ, ಸಂತಾನೋತ್ಪತ್ತಿ ಮತ್ತು ಐವಿಎಫ್ ಕೇಂದ್ರದಲ್ಲಿ ಫಲವತ್ತತೆ ಮತ್ತು ಸಂತಾನಹೀನತೆ ಪರೀಕ್ಷೆ ನಡೆಸಲಾಗುವುದು, ಅಂಡೋತ್ಪತ್ತಿ, ಗರ್ಭಾಶಯದ ಗರ್ಭಧಾರಣೆ, ಇನ್ಪಿಟ್ರೊ ಫರ್ಟಿಲೈಸೇಷನ್ ಮತ್ತು ಇಂಟ್ರಾ ಸೈಟೋಪ್ಲಾಸ್ಮಿಕ್ ಸ್ಪರ್ಮ್ ಇಂಜೆಕ್ಷನ್ ಸೇವೆಗಳು ದೊರೆಯುತ್ತದೆ ಎಂದು ಹೇಳಿದರು.

ಮಲ್ಟಿ ಸ್ಟೆಷಾಲಟಿಯಲ್ಲಿ ಹಲವು ಸೇವೆಗಳು ಲಭ್ಯವಿದ್ದು, ನಿರಂತರ 24 ಗಂಟೆಯೂ ತುರ್ತು ಸೇವೆಗಳು, ಸಾಮಾನ್ಯ ರೋಗಗಳಿಗೆ ಚಿಕಿತ್ಸೆಗಳು ದೊರೆಯುತ್ತವೆ. ಪ್ರಸೂತಿ ಮತ್ತು ಸ್ತ್ರೀ ರೋಗ ಶಸ್ತ್ರಚಿಕಿತ್ಸೆ ಸೇವೆಗಳು, ಮಕ್ಕಳ ಖಾಯಿಲೆಗಳ ಚಿಕಿತ್ಸೆ, ಎನ್‍ಐಸಿಯು ಮತ್ತು ಐಸಿಯು ಸೇವೆಗಳು, ಅಂಕಾಲಜಿ (ಕ್ಯಾನ್ಸರ್ ಕೇರ್) ಹಾಗೂ ಹೃದ್ರೋಗ ಮತ್ತು ರಕ್ತನಾಳ ತೊಂದರೆಗಳ ಚಿಕಿತ್ಸೆ ನೀಡಲಾಗುತ್ತದೆ ಎಂದು ಚರಕ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಬಸವರಾಜು ತಿಳಿಸಿದರು.

ಡಾ.ಅಸ್ರಣ್ಣ ಸೇರಿದಂತೆ ವಿವಿಧ ಆಸ್ಪತ್ರೆಯ ಹಿರಿಯ ವೈದ್ಯರು, ಹಿರಿಯ ಮುಖಂಡ ನರಸೀಯಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಕೆಂಚಮಾರಯ್ಯ, ಉಪನ್ಯಾಸಕರಾದ ಎಚ್.ಗೋವಿಂದಯ್ಯ, ಡಾ.ಶಿವಣ್ಣ ತಿಮ್ಲಾಪುರ, ವಿರೂಪಾಕ್ಷ ಡ್ಯಾಗೇರಹಳ್ಳಿ, ಪಿ.ಎನ್.ಲಕ್ಷ್ಮಣ್, ಚರಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಡಾ.ಅತಿಶ ಮತ್ತು ಡಾ.ಎಂ.ರಂಜಿತ ಹಾಗೂ ಡಾ.ಬಸವರಾಜು ಅವರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾ ಬಸವರಾಜು ಇದ್ದರು.

Leave a Reply

Your email address will not be published. Required fields are marked *