ತುಮಕೂರು:ಹಲವು,ಜಾತಿ, ಧರ್ಮ, ಭಾಷೆ, ಸಂಸ್ಕøತಿ, ಆಚಾರ, ವಿಚಾರಗಳಿಂದ ಕೂಡಿದ್ದ ಭಾರತದ ಸಮಗ್ರ ಅಭಿವೃದ್ದಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ರಚನೆ ಮಾಡಿಕೊಟ್ಟ ಭಾರತೀಯ ಸಂವಿಧಾನ ವಿಶ್ವದಲ್ಲಿಯೇ ಮಾನ್ಯತೆ ಪಡೆದಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ,ಸಂವಿಧಾನ ಪೀಠಿಕೆ ಬೋಧಿಸಿ,ಮಾತನಾಡುತಿದ್ದ ಅವರು,ಭಾರತದ ಸಂವಿಧಾನ ಒಂದು ವರ್ಗವನ್ನು ಗಮನದಲ್ಲಿಟ್ಟುಕೊಂಡು ರಚಿಸಿದಲ್ಲ. ಭಾರತದಲ್ಲಿರುವ ಎಲ್ಲಾ ವರ್ಗಗಳ ಜನರ ಶ್ರಯೋಭಿವೃದ್ದಿ ಉದ್ದೇಶದಿಂದಲೇ ರಚನೆಯಾಗಿದೆ.ಕಾಡುಗೊಲ್ಲ ಬುಡಕಟ್ಟು ಸಮುದಾಯದ ಸೇರಿದ ನಾನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿರುವುದೇ ಜೀವಂತ ಸಾಕ್ಷಿ ಎಂದರು.
ಏಕ ದೇಶ, ಭಾಷೆ, ಸಂಸ್ಕøತಿ, ಆಚರಣೆಯನ್ನು ಪ್ರತಿಪಾದಿಸುವ ಆರ್.ಎಸ್.ಎಸ್, ವಿಹೆಚ್‍ಪಿ,ಬಜರಂಗದಳ,ಶ್ರೀರಾಮ ಸೇನೆಯಂತಹ ಸಂಘಟನೆಗಳು,ಅಂಬೇಡ್ಕರ್ ಬರೆದ ಸಂವಿದಾನದ ಅಡಿಯಲ್ಲಿ ಬಡವರು, ಬಲ್ಲಿದರಾಗುತ್ತಿರುವುದನ್ನು ಸಹಿಸಲಾಗದೆ, ದೇವರು, ಧರ್ಮದ ಹೆಸರಿನಲ್ಲಿ ಒಡಕು ಮೂಡಿಸಲು ನಿರಂತರ ಪ್ರಯತ್ನ ನಡೆಸುತಿದ್ದು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದನ್ನು ತೀವ್ರವಾಗಿ ವಿರೋಧಿಸುವ ಜೊತೆಗೆ, ಯುವಜನತೆಗೆ ಸಂವಿಧಾನ, ಸಂವಿಧಾನದ ಅಶಯಗಳು ಬಗ್ಗೆ ತಿಳಿಸಿ ಹೇಳುವ ಮೂಲಕ ಮನುವಾದಿಗಳ ಹುನ್ನಾರಗಳು ಕೈಗೂಡದಂತೆ ಮಾಡಬೇಕಾಗಿದೆ.ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕಾರ್ಯಕರ್ತರು ತಯಾರಿ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ,ಇಂದು ಇಡೀ ಭಾರತವೇ ಸಂವಿಧಾನ ಸಮರ್ಪಣಾ ದಿನವನ್ನು ಆಚರಿಸುತ್ತಿದೆ.ಸಂವಿಧಾನ ಪೀಠಿಕೆ ಓದಿದರೆ ಸಾಲದು, ಅವರ ಒಳಗಿರುವ ಅಂಶಗಳನ್ನು ಅರ್ಥ ಮಾಡಿಕೊಂಡು, ಸಂವಿಧಾನಾತ್ಮಕ ಸಂಸ್ಥೆಗಳನ್ನು ದುಬರ್ಳಕೆ ಮಾಡಿಕೊಂಡು ಅಧಿಕಾರ ಹಿಡಿಯುತ್ತಿರುವ ಬಿಜೆಪಿಗೆ ತಕ್ಕ ಪ್ರತ್ಯಿಉತ್ತರ ನೀಡಬೇಕೆಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣ ಮಾತನಾಡಿ,ಭಾರತದ ಸಂವಿಧಾನ ದೇಶದ ಎಲ್ಲಾ ಪ್ರಜೆಗಳಿಗೆ ಹುಟ್ಟಿನಿಂದ ಸಾಯುವವರೆಗೂ ರಕ್ಷಣೆಯನ್ನು ನೀಡುತ್ತದೆ.ಬಡವ, ಬಲ್ಲಿದ,ಹುಚ್ಚ, ನೀಚ ಎಂಬ ತಾರತಮ್ಯವನ್ನು ಹೋಗಲಾಡಿಸಲು ನಿರಂತರವಾಗಿ ಕಾರ್ಯಕ್ರಮವನ್ನು ಕಾಂಗ್ರೆಸ್ ಪಕ್ಷ ನೀಡಿದೆ.ಆದರೆ ಬಿಜೆಪಿ ಭಾವನಾತ್ಮಕ ವಿಷಯಗಳ ಮೂಲಕ ದೇಶದ ಯುವಜನರನ್ನು ದಾರಿ ತಪ್ಪಿಸುತ್ತಿದೆ.ನಿರುದ್ಯೋಗ ಸಮಸ್ಯೆ ತೀವ್ರವಾಗಿದು, ಈ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕೆಂದರು.
ಕೆಪಿಸಿಸಿಯ ವೀಕ್ಷಕರಾದ ಇಬ್ರಾಹಿಂ ಖಾಲಿದ್ ಮಾತನಾಡಿ,ಚುನಾವಣಾ ಆಯೋಗದ ಮೂಲಕ ಬಿಜೆಪಿ ಅಧಿಕಾರ ಹಿಡಿಯಲು ಎಸ್.ಐ.ಆರ್ ಜಾರಿಗೆ ತರಲು ಹೊರಟಿದೆ.ಅದು ಸದ್ದಿಲ್ಲದೆ ನಮ್ಮ ನಿಮ್ಮ ಮನೆಯ ಅಂಗಳಕ್ಕೂ ತಲುಪಿದೆ.ಹಾಗಾಗಿ ಪ್ರತಿ ಮತದಾರನ ಮತವನ್ನು ರಕ್ಷಿಸುವ ಹೊಣೆ ಕಾಂಗ್ರೆಸ್ ಪಕ್ಷದ ಮೇಲಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಎಚ್ಚೆತ್ತುಕೊಂಡು ಕೆಲಸ ಮಾಡಬೇಕಾಗಿದೆ ಎಂದರು.
ಮುಖಂಡರಾದ ಇಕ್ಬಾಲ್ ಅಹಮದ್ ಮಾತನಾಡಿ,ಎರಡು ವರ್ಷ, ಹನ್ನೊಂದು ತಿಂಗಳು, ಏಳು ದಿನಗಳ ಕಾಲ ಬಿಡುವಿಲ್ಲದೆ ಕೆಲಸ ಮಾಡಿ,ಬಾಬಾ ಸಾಹೇಬರು ರಚಿಸಿದ ಸಂವಿಧಾನವನ್ನು ಉಲ್ಲಂಘಿಸಿ,ಸಂವಿಧಾನಿಕ ಸಂಸ್ಥೆಗಳ ಸಹಕಾರದೊಂದಿಗೆ ವಾಮಮಾರ್ಗದಲ್ಲಿ ಬಿಜೆಪಿ ಅಡಳಿತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಹುನ್ನಾರ ನಡೆಸುತ್ತಿದೆ.ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಕೊಡುಗೆಯನ್ನು ಜನರಿಗೆ ತಿಳಿಸಬೇಕಿದೆ. ಇದೊಂದು ಆಂದೋಲನದ ರೀತಿ ಭಾವಿಸಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದರು.
ಡಿಸಿಸಿ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಮಾತನಾಡಿ,ಸಂವಿಧಾನ ನಮ್ಮೆಲ್ಲರಿಗೆ ಪ್ರಮುಖವಾದ ಗ್ರಂಥ.ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಆಶಯವನ್ನು ಸಂವಿಧಾನ ಹೊಂದಿದೆ.ಹಾಗಾಗಿ ಇದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಹಿರಿಯರಾದ ರೇವಣ್ಣ ಸಿದ್ದಯ್ಯ, ಶಿವಾಜಿ, ಆತಿಕ್ ಅಹಮದ್,ಎಸ್ಸಿ ಸೇಲ್ ಅಧ್ಯಕ್ಷ ಬಿ.ಜಿ.ಲಿಂಗರಾಜು,ಯಶೋಧಮ್ಮ,ಷಣ್ಮುಗಪ್ಪ, ಮತ್ತಿತರರು ಸಂವಿಧಾನ ಸಮರ್ಪಣಾ ದಿನ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಫೈಯಾಜ್,ಮಹೇಶ್,ಎಸ್ಸಿ ಸೆಲ್ ಉಪಾಧ್ಯಕ್ಷರಾದ ಸಿದ್ದಾಪುರ ರಂಗಶಾಮಯ್ಯ,ವಾಲೆ ಚಂದ್ರಯ್ಯ, ಶ್ರೀನಿವಾಸ್, ಕುಮಾರ್, ಕೆಂಪರಾಜು, ಪಂಚಾರಕ್ಷಯ್ಯ,ಲಕ್ಷ್ಮಯ್ಯ,ಸಿದ್ದಗಂಗಮ್ಮ,ಸುಜಾತ,ಆದಿಲ್,ನ್ಯಾತೇಗೌಡ,ಅನಿಲ್‍ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.