ತುಮಕೂರು : ತುಮಕೂರು ವಾರ್ತಾ ಮತ್ತು ಸಾರ್ವಜನಿಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಎಂ.ಆರ್.ಮಮತ ಅವರು ಇಂದು ದೈವಾಧೀನರಾಗಿದ್ದಾರೆ.
ಶ್ರೀಮತಿಯವರು ಪ್ರಸಕ್ತ ತುಮಕೂರು ಜಿಲ್ಲಾ ವಾರ್ತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಪತಿ ಹಿರಿಯ ಪತ್ರಕರ್ತ ಎಚ್ ಆರ್ ರವೀಶ್ ,ಮಗ ಪ್ರಜ್ವಲ್ ಹಾಗೂ ಅಪಾರ ಬಂಧುಬಾಂಧವರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ತುಮಕೂರು ತಾಲ್ಲೂಕು ಹಾಲನೂರು ಗ್ರಾಮದ ಅವರ ತೋಟದಲ್ಲಿ ಆಗಸ್ಟ್ 3ರ ಶನಿವಾರ ಮಧ್ಯಾಹ್ನ ನೆರವೇರಲಿದೆ.
ಬೆಂಗಳೂರಿನ ಅವರ ಮನೆಯಲ್ಲಿ ಇಂದು ಸಂಜೆ 8 ಗಂಟೆಯಿಂದ ನಾಳೆ ಬೆಳಿಗ್ಗೆ 8 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಇಡಲಾಗುವುದು ಕುಟುಂಬ ಮೂಲಗಳು ತಿಳಿಸಿವೆ.
ಮಿದುಳು ರಕ್ತಸ್ರಾವದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಕಳೆದ ಕೆಲದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಪತಿ ಹಿರಿಯ ಪತ್ರಕರ್ತ ಎಚ್ ಆರ್ ರವೀಶ್ ,ಮಗ ಪ್ರಜ್ವಲ್ ಹಾಗೂ ಅಪಾರ ಬಂಧುಬಾಂಧವರನ್ನು ಅಗಲಿದ್ದಾರೆ.
ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಮೈತ್ರಿನ್ಯೂಸ್ ಪತ್ರಿಕಾ ಬಳಗ ಪ್ರಾರ್ಥಿಸಿದೆ.