ಸುಪ್ರೀಂ ಕೋರ್ಟ್ ನ ಒಳ ಮೀಸಲಾತಿ ತೀರ್ಪುನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಒತ್ತಾಯ

ತುಮಕೂರು:- 30 ವರ್ಷಗಳ ಕಾಲ ಸುಧೀರ್ಘವಾದ ಮಾದಿಗ ಸಮುದಾಯದ ಹೋರಾಟಕ್ಕೆ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ಪರಿಶಿಷ್ಟ ಜಾತಿ ಜನಾಂಗದ ಮಾದಿಗ ಸಂಬಂಧಿಸಿದ ಸಮುದಾಯಕ್ಕೆ ಒಳ ಮೀಸಲಾತಿ ನೀಡುವಂತೆ ಮಹತ್ತರವಾದ ತೀರ್ಪು ನೀಡಿದ್ದು ಇದನ್ನ ಪಕ್ಕದ ತೆಲಂಗಾಣ ರಾಜ್ಯ ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಸ್ವಾಗತಿಸಿ ಅನುಷ್ಠಾನಗೊಳಿಸಲು ಮುಂದಾಗಿದ್ದು ಅದೇ ರೀತಿಯಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ತಕ್ಷಣವೇ ಒಳ ಮೀಸಲಾತಿಯನ್ನು ಜಾರಿ ಮಾಡಬೇಕು ಎಂದು ಆದಿ ಜಾಂಬವ ಮಹಾಮೈತ್ರಿ ಸಭಾದ ಅಧ್ಯಕ್ಷ ಪ್ರೊ.ಕೆ. ದೊರೈರಾಜ್ ಅವರು ಒತ್ತಾಯಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಆದಿ ಜಾಂಬವ ಮಹಾಮಾಯಿತ್ರಿ ಸಭಾ ವತಿಯಿಂದ ನಡೆದ ಪರಿಶಿಷ್ಟ ಜಾತಿ ವರ್ಗಗಳಲ್ಲಿ ಒಳ ಮೀಸಲಾತಿ ಜಾರಿ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿರುವ ಭಾರತದ ಉಚ್ಚ ನ್ಯಾಯಾಲಯದ ತೀರ್ಪಿನ ಕುರಿತು ಕಾನೂನು ತಜ್ಞರಿಂದ ಅರಿವು ಮತ್ತು ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು ಒಳ ಮೀಸಲಾತಿಗಾಗಿ ಮಾದಿಗ ಸಮುದಾಯವು ಸುಮಾರು ವರ್ಷಗಳ ಕಾಲ ತಾಲೂಕು ಜಿಲ್ಲೆ ಸೇರಿದಂತೆ ರಾಜ್ಯಮಟ್ಟಗಳಲ್ಲಿ ಪಾದಯಾತ್ರೆ ಪ್ರತಿಭಟನೆ ನಡೆಸಿದ ಫಲವಾಗಿ ಸುಪ್ರೀಂ ಕೋರ್ಟ್ ಇಂದು ಮಹತ್ತರವಾದ ತೀರ್ಪು ಪ್ರಕಟಿಸಿದೆ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ತೀರ್ಪು ಸ್ವಾಗತಿಸಿರುವುದು ಶ್ಲಾಘನೀಯ ಆದರೆ ತತಕ್ಷಣದಿಂದ ಈ ವರದಿಯ ಅಂಶವನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು ಯಾವುದೇ ಸಬೂಬು ಹೇಳಬಾರದು ಎಂದು ಒತ್ತಾಯಿಸಿದರು.

ನಿರ್ಣಾಯಕ ಹೋರಾಟ ಮಾಡಲು ಚಳುವಳಿ ಹುಟ್ಟು ಹಾಕಿದ್ದು ತುಮಕೂರು ಜಿಲ್ಲೆ, ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪನ್ನು ಕೇವಲ ಸರ್ಕಾರಗಳು ಜಾರಿ ಮಾಡುತ್ತವೆ ಎಂದು ತಿಳಿಯದೆ ಇದರ ಬಗ್ಗೆ ವಿಸ್ತೃತವಾದ ಭೌದ್ಧಿಕ ಚರ್ಚೆಯಾಗಬೇಕು, ಮೀಸಲಾತಿ ಬಗ್ಗೆ ಚಿಂತನೆಗಳ ಆಗದಿದ್ದರೆ ಮುಂದೆ ಅದು ವಿಷವಾಗಬಹುದು ಮೀಸಲಾತಿಯೆಂಬುದು ಯಾವಾಗಲೂ ಚಲನಶೀಲವಾಗಿರಬೇಕು, ಇದನ್ನು ಮುಂದಿನ ಪೀಳಿಗೆಯವರು ಮನಗಣಬೇಕು, ಸುಮಾರು ವರ್ಷಗಳ ಹಿಂದೆ ತುಮಕೂರಿನಲ್ಲಿ ಮೀಸಲಾತಿಗೆ ನಾಂದಿ ಹಾಡಿದವರು ಒಳಮೀಸಲಾತಿ ಹೋರಾಟಗಾರ ಪಾರ್ಥಸಾರಥಿ ಎಂದು ಹೇಳಿದರು.

ಒಳ ಮೀಸಲಾತಿಯ ಆದೇಶ ಯಾವುದೇ ರಾಜಕೀಯ ಪಕ್ಷದ ಕೊಡುಗೆಯಲ್ಲ ಸಮುದಾಯದ ಜನರ ಹೋರಾಟಕ್ಕೆ ಸಂದ ಜಯವಾಗಿದ್ದು, ಡಿಎಸ್ಎಸ್ ಸಂಘಟನೆಗಳ ತಿಕ್ಕಾಟದಿಂದಾಗಿ ಹೊರಹೊಮಿದ್ದ ಒಳ ಮೀಸಲಾತಿಯ ಚರ್ಚೆ ವಿಚಾರವಾಗಿ ದಕ್ಷಿಣ ಭಾಗದಲ್ಲಿ ಮಾದಿಗ ಸಮುದಾಯ ಸಂಬಂಧಿತ ಜಾತಿಗಳನ್ನ ಒಟ್ಟುಗೂಡಿಸಿ ಅಧ್ಯಯನ ಮಾಡಿ ದಕ್ಷಿಣ ಭಾರತದ ಎಲ್ಲಾ ವರದಿಗಳನ್ನು ಪರಿಶೀಲಿಸಿ ಸಮುದಾಯಕ್ಕೆ ಒಳ ಮೀಸಲಾತಿ ನೀಡಬೇಕು ಎಂದು ಕಡೆಗೆ ನಿವೃತ್ತ ನ್ಯಾಯಾಧೀಶರಾದ ನಾಗಮೋಹನ್ ದಾಸ್ ಅವರಿಂದ ವರದಿ ತಯಾರಿಸಿ ಸರ್ಕಾರಕ್ಕೆ ನೀಡಿದ ಪರಿಣಾಮ ಇಂದು ಒಳ ಮೀಸಲಾತಿ ಜಾರಿಯಾಗಿದೆ ಇದನ್ನು ಸರ್ಕಾರ ಕೂಡಲೇ ಮನ ಗಂಡು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೂ ಮುನ್ನ ಸಪ್ರೀಂಕೋರ್ಟ್‍ನ ಏಳು ಸದಸ್ಯರ ಪೀಠ ನೀಡಿರುವ ಒಳಮೀಸಲಾತಿಯ ಬಗ್ಗೆ ಹೈಕೋರ್ಟ್ ವಕೀಲರು ಹಾಗೂ ಕಾನೂನು ತಜ್ಞರಾದ ಎಚ್ ವಿ ಮಂಜುನಾಥ್ ಅವರು ಸದೀರ್ಘವಾಗಿ ಮಾತನಾಡಿ ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಪರವಾಗಿ ನೀಡಿರುವ ಕೋರ್ಟ್ ನ ಆದೇಶದ ಪ್ರತಿಯನ್ನು ಅಧ್ಯಯನ ಮಾಡಿ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಚಂದ್ರಚೂಡ ಸೇರಿದಂತೆ ಏಳು ಸದಸ್ಯರ ಪೀಠ ವಿವಿಧ ರಾಜ್ಯಗಳ ಮೀಸಲಾತಿ ಪ್ರಕರಣಗಳನ್ನು ಅಧ್ಯಯನ ಮಾಡಿ ತಮ್ಮದೇ ಆದ ವರದಿ ಸಲ್ಲಿಸಿದ ಬಳಿಕ ಸಾಧಕ-ಬಾಧಕ ಯೋಚಿಸಿ ಪರಿಶಿಷ್ಟ ಜಾತಿ ಮಾದಿಗ ಸಮುದಾಯ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಸಂವಿಧಾನದ ಪರಿಚ್ಛೇದದ ಅನುಸಾರ ಪರಿಶಿಷ್ಠ ಜಾತಿಯಲ್ಲಿ ಹಿಂದುಳಿದ ಸಮುದಾಯಗಳಿಗೆ ಒಳ ಮೀಸಲಾತಿ ನೀಡಬೇಕೆಂಬುದು ಅಂಶವಿದ್ದು ಈ ದೆಸೆಯಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಲಾಗಿದೆ ಎಂದು ವಿವಿಧ ನ್ಯಾಯಾಧೀಶರುಗಳ ವರದಿಯನ್ನ ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪಿನ ಬಗ್ಗೆ ವಿಸ್ತರವಾಗಿ ಮಾಹಿತಿ ನೀಡಿದರು.

ಪಾವಗಡದ ಮಾಜಿ ಶಾಸಕ ತಿಮ್ಮರಾಯಪ್ಪ ಅವರು ಮಾತನಾಡಿ ಮೂರು ದಶಕಗಳ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಗುರುತರವಾದ ತೀರ್ಪು ನೀಡಿದ್ದು ಒಳಮಿಸಲಾತಿಗಾಗಿ ಅನೇಕ ಜನರು ಅರ್ಪಣೆ ಮಾಡಿಕೊಂಡಿದ್ದಾರೆ ಹೋರಾಟದಂತೆ ಈಗಲೂ ಅನೇಕ ಸಂಘ ಸಂಸ್ಥೆಗಳು ಚಳುವಳಿಗಳು ಒಂದಾಗಿ ಸುಪ್ರೀಂ ಕೋರ್ಟ್ ನ ತೀರ್ಪುನ್ನು ಯಥಾವತ್ತಾಗಿ ಜಾರಿ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಡ ತರಬೇಕು ಈ ಕುರಿತಾಗಿ ರಾಜ್ಯದಲ್ಲಿ ಕಲುಷಿತವಾದ ವಾತಾವರಣವಿದ್ದು ಈ ಬಗ್ಗೆ ಈ ಹಿಂದೆ ಸದನಗಳಲ್ಲಿ ಗಲಾಟೆಗಳು ನಡೆದಿವೆ ಹೀಗಾಗಿ ಮುಖ್ಯಮಂತ್ರಿಗಳು ಅನುμÁ್ಠನಗೊಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೇಷ್ಮೆ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕರಾದ ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ ಒಳಮೀಸಲಾತಿ ಸುಪ್ರೀಂಕೋರ್ಟ್‍ನಲ್ಲಿ ತೀರ್ಪು ಬರಲು ದಿವಂಗತ ಪಾರ್ಥಸಾರತಿಯ ಹೋರಾಟ ಮತ್ತು ಕಾನೂನು ತಜ್ಞರಿಂದ ಸುಪ್ರೀಂಕೋರ್ಟ್‍ಗೆ ವಿವಿಧ ರಾಜ್ಯಗಳಲ್ಲಿ ಒಳ ಮೀಸಲಾತಿ ಜಾರಿಯಾಗಿರುವ ಮಾಹಿತಿ ಮತ್ತು ಆದೇಶಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ, ಒಳಮೀಸಲಾತಿಗಾಗಿ ಪಾರ್ಥಸಾರತಿ ಹಗಲು ರಾತ್ರಿ ದುಡಿದಿರುವುದನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಮಾದಿಗ ದಂಡೋರದ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್ ಅವರು ಮಾತನಾಡಿ ಒಳ ಮೀಸಲಾತಿಗಾಗಿ ಅನೇಕ ಜನರು ಹೋರಾಟ ಮಾಡಿ ಪ್ರಾಣ ಕಳೆದುಕೊಂಡಿದ್ದರ ಫಲವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ, ಆದರೆ ಬೆಂಗಳೂರಿನ ನಾಯಕರು ಈ ತೀರ್ಪನ್ನು ಒಪ್ಪದೇ ಕೆನಪದರ ತರಲು ಮಾತನಾಡುತ್ತಿದ್ದಾರೆ ಮಾದಿಗ ಸಮುದಾಯಕ್ಕೆ ಈ ತೀರ್ಪು ಶುಭನುಡಿಯಾಗಿದ್ದು ಇದರಲ್ಲಿ ಯಾವುದೇ ಸಮಸ್ಯೆಗಳಿಲ್ಲ, ಈಗಾಗಲೇ ನಾವು ಹಿಂದುಳಿದಿರುವುದಕ್ಕೆ ಮತ್ತು ಆರ್ಥಿಕ ಸಾಮಾಜಿಕ, ರಾಜಕೀಯವಾಗಿ ಹಿಂದೆ ಬಿದ್ದಿರುವುದಕ್ಕೆ ಅನೇಕ ವರದಿಗಳು ಸರ್ಕಾರದ ಕೈಯಲ್ಲಿದ್ದರೂ ಕೂಡ ಸಿದ್ದರಾಮಯ್ಯನವರು ತೀರ್ಪನ್ನ ಅನುμÁ್ಠನಗೊಳಿಸದೆ ಹಿಂದೆ ಮುಂದೆ ನೋಡುತ್ತಿದ್ದಾರೆ ಪಕ್ಕದ ಆಂಧ್ರ,ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ತೀರ್ಪು ಸ್ವಾಗತಿಸಿ ಅನುμÁ್ಠನಗೊಳಿಸಿ ಘೋಷಣೆ ಮಾಡಿದ್ದಾರೆ ಆದ್ದರಿಂದ ಮುಖ್ಯಮಂತ್ರಿಗಳು ಮತ್ತೆ ಹೋರಾಟಗಳಿಗೆ ಅವಕಾಶ ಕೊಡದೆ ಕೂಡಲೇ ಒಳ ಮೀಸಲಾತಿ ವರದಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಮಾದಿಗ ಸಮುದಾಯದ ಮಹಿಳಾ ಮುಖಂಡರಾದ ಡಾ. ಅರುಂಧತಿ ಅವರು ಮಾತನಾಡಿ ರಾಜ್ಯದಲ್ಲಿ ಮಾದಿಗ ಸಮುದಾಯದ ನನ್ನ ಸಹೋದರರು ಒಳ ಮೀಸಲಾತಿಗಾಗಿ ಅರಬೆತ್ತಲೆ ಮೆರವಣಿಗೆ ಸೇರಿದಂತೆ ಇತರೆ ಹೋರಾಟಗಳನ್ನು ಮಾಡಿದ್ದಾರೆ, ಇದಕ್ಕೆ ಸುಪ್ರೀಂ ಕೋರ್ಟ್‍ನಲ್ಲಿ ಜಯ ಸಿಕ್ಕಿದೆ ಹೋರಾಟಗಾರರು ಸಂಘಟನೆಗಳು ಕೋರ್ಟ್ ನ ಆದೇಶವಲ್ಲ ಸರ್ಕಾರ ಗೌರವಿಸಿ ಅನುμÁ್ಠನಗೊಳಿಸಲು ಒತ್ತಾಯಿಸಬೇಕು ಇದಕ್ಕೆ ಸಂಬಂಧಿಸಿದ ದತ್ತಾಂಶ ಕಾಂತರಾಜ್ ಕಮಿಷನ್ ಸದಾಶಿವ ಆಯೋಗ ವರದಿಯಲ್ಲಿದ್ದು ಮುಖ್ಯಮಂತ್ರಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಈ ತೀರ್ಪನ್ನ ಯಥಾವತ್ತಾಗಿ ಅನುμÁ್ಠನಗೊಳಿಸಬೇಕು ಎಂದು ತಿಳಿಸಿದರು.

ಮುಖಂಡರು ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಹೆಚ್. ಕೆಂಚಮಾರಯ್ಯ ಅವರು ಮಾತನಾಡಿ ಸದಾಶಿವ ವರದಿ ಪಾರ್ಲಿಮೆಂಟ್ ಗೆ ಹೋಗುವ ಅವಶ್ಯಕತೆ ಇಲ್ಲ, ಈಗಾಗಲೇ ಕಾನೂನು ಹೋರಾಟ ನಡೆಸಿದ್ದು ಸುಪ್ರೀಂ ಕೋರ್ಟ್ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಒಳ ಮೀಸಲಾತಿ ನೀಡಲು ಎಲ್ಲಾ ವಿಧಗಳಲ್ಲಿ ಚರ್ಚಿಸಿ ತೀರ್ಪು ನೀಡಿದ್ದು ರಾಜ್ಯ ಸರ್ಕಾರ ಸಬೂಬು ಹೇಳದೆ ವರದಿಯನ್ನು ಅನುμÁ್ಠನಗೊಳಿಸಬೇಕು ಎಂದು ಒತ್ತಾಯಿಸಿದರು.

ವೈದ್ಯರಾದ ಡಾ||ಬಸವರಾಜು ಮಾತನಾಡಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಸರ್ಕಾರ ಜಾರಿಗೆ ತರಬೇಕು, ಸರ್ಕಾರ ಮತ್ತೆ ಯಾವುದೇ ಸಬೂಬು ಹೇಳದೆ ಜಾರಿಗೆ ತರಬೇಕೆಂಬುದೇ ನಮ್ಮೆಲ್ಲರ ಒತ್ತಾಯವಾಗಿದೆ ಎಂದರು.

ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡರಾದ ಮುಖಂಡ ಡಿ.ಟಿ.ವೆಂಕಟೇಶ್ ಅವರು ಮಾತನಾಡಿ ತಜ್ಞರಿಂದ 560 ಪೇಜುಗಳುಳ್ಳ ಸುಪ್ರೀಂ ಕೋರ್ಟ್ ನ ತೀರ್ಪಿನ ಸಾರಾಂಶವನ್ನು ಈಗಾಗಲೇ ಕಾನೂನು ತಜ್ಞರುಗಳಿಂದ ತಿಳಿದುಕೊಂಡಿದ್ದು ಸಮುದಾಯದ ಎಲ್ಲರಿಗೂ ತೀರ್ಪಿನ ಅಂಶ ಅರ್ಥವಾಗಿದೆ ದಶಕಗಳ ಐತಿಹಾಸಿಕ ಹೋರಾಟಕ್ಕೆ ಬೆಲೆ ಬಂದಂತಾಗಿದ್ದು ಸರ್ಕಾರ ಇದನ್ನ ಪರಿಗಣಿಸಬೇಕಾಗಿದೆ ತುಮಕೂರು ಜಿಲ್ಲೆಯ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರಿಗೂ ಕೂಡಾ ಈ ತೀರ್ಪಿನ ಅಂಶವನ್ನು ಮನವರಿಕೆ ಮಾಡಿ ಅನುμÁ್ಠನಗೊಳಿಸಲು ಹಕ್ಕೂತ್ತಾಯ ಮಾಡಬೇಕಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಮುಖಂಡರಾದ ನರಸಿಂಹಯ್ಯ, ಪಿ.ಎನ್.ರಾಮಯ್ಯ, ಕೊಳಗೇರಿ ನರಸಿಂಹಮೂರ್ತಿ, ಮುಂತಾದವರು ಮಾತನಾಡಿದರು.

Leave a Reply

Your email address will not be published. Required fields are marked *