ತುಮಕೂರು: ಭಾರತೀಯ ವೈದ್ಯಕೀಯ ಸಂಘ ಮತ್ತು ಮಹಿಳಾ ವೈದ್ಯ ವೃಂದಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನಗರದ ಟೌನ್‍ಹಾಲ್ ಸಮೀಪವಿರುವ ಐಎಂಎ ಸಭಾಂಗಣದಲ್ಲಿ ಮಾರ್ಚ್ 22 ರಂದು ಸಂಜೆ 4.30ಕ್ಕೆ ಏರ್ಪಡಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಸಿದ್ದಗಂಗಾ ವೈದ್ಯಕೀಯ ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ. ಶಾಲಿನಿ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಐಎಂಎ ಮಹಿಳಾ ಘಟಕದ ಅಧ್ಯಕ್ಷರಾದ ಡಾ. ಅನಿತಾ ಡಿ. ಗೌಡ ವಹಿಸುವರು. ಐಎಂಎ ಜಿಲ್ಲಾಧ್ಯಕ್ಷರಾದ ಡಾ. ಹೆಚ್.ವಿ. ರಂಗಸ್ವಾಮಿ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಅಜ್ಗರ್ ಬೇಗ್ ರವರನ್ನು ಗೌರವಿಸಲಾಗುವುದು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ನಿವೃತ್ತ ಶಸ್ತ್ರಚಿಕಿತ್ಸಕರಾದ ಡಾ. ಹೆಚ್. ವೀಣಾ, ದಯಾಭವನದ ಶುಶ್ರೂಷಕಿ ಲತಾಕುಮಾರಿ, ಕ್ರೀಡಾಪಟು ರಶ್ಮಿ ಅವರನ್ನು ಸನ್ಮಾನಿಸಲಾಗುವುದು ಎಂದು ಐಎಂಎ ಪ್ರಧಾನ ಕಾರ್ಯದರ್ಶಿ ಡಾ. ಮಹೇಶ್ ತಿಳಿಸಿದ್ದಾರೆ.