ತುಮಕೂರು: ನರಳುತ್ತಿರುವ ಮಾನವೀಯತೆಯ ಮುಖದಲ್ಲಿ ನಗು ತರಿಸುವ ಮಹತ್ತರ ಜವಾಬ್ದಾರಿ ವೈದ್ಯರ ಮೇಲಿದೆ ಎಂದು ಶ್ರೀ ಸಿದ್ಧಾರ್ಥ ದಂತ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಪದ್ಮಜಾ ಅವರು ಅಭಿಪ್ರಾಯಪಟ್ಟಿದ್ದಾರೆ.
ನಗರದ ಶ್ರೀ ಚೈತನ್ಯ ಟೆಕ್ನೋ ಶಾಲೆಯಲ್ಲಿ ಇಂದು (ಜುಲೈ 1) ಏರ್ಪಟ್ಟ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜದ ಯೋಗ ಕ್ಷೇಮವನ್ನು ನೋಡಿಕೊಳ್ಳಲು ಜಗತ್ತಿನಾದ್ಯಂತ ಹಗಲಿರುಳು ಶ್ರಮಿಸುವ ವೈದ್ಯರ ಮನೋಭಾವವನ್ನು ಸ್ಮರಿಸಲು ಮತ್ತು ಕೃತಜ್ಞತೆಯ ಸಂಕೇತವಾಗಿ ಆಚರಣೆ ಮಾಡುವುದರಿಂದ ವೈದ್ಯರ ಮೇಲಿನ ಹೊನೆಗಾರಿಕೆ ಹೆಚ್ಚಿದೆ ಎಂದು ಡಾ. ಪದ್ಮಜಾ ಅವರು ವಿದ್ಯಾರ್ಥಿ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳಬೇಕು ಮತ್ತು ಶಿಕ್ಷಕರ ಮೌಲ್ಯವನ್ನು ಉಳಿಸಿಕೊಳ್ಳುವ ಕೆಲಸವನ್ನು ವಿದ್ಯಾರ್ಥಿಗಳಿಗೆ ಮಾಡಬೇಕು ಎಂದು ಕರೆಯಿತ್ತರು.
ಚಿಕ್ಕ ವಯಸ್ಸಿನಿಂದಲೇ ಪರಿಶ್ರಮ ಮತ್ತು ಸಮತೋಲಿತ ಆಹಾರದ ಬಗ್ಗೆ ಮಕ್ಕಳಿಗೆ ಅವರು ಕೆಲವು ಸಲಹೆಗಳನ್ನು ನೀಡಿದರು. ಆರೋಗ್ಯ ಕೈಕೊಟ್ಟಾಗ ವೈದ್ಯರ ಪ್ರಾಮುಖ್ಯತೆಯ ಮತ್ತು ಪ್ರಸ್ತುತಿಯನ್ನು ಮಕ್ಕಳಿಗೆ ಡಾ. ಪದ್ಮಜಾ ಅವರು ತಿಳಿಸಿಕೊಟ್ಟರು
ಶ್ರೀ ಚೈತನ್ಯ ಟೆಕ್ನೋ ಶಾಲೆಯ ಪ್ರಾಂಶುಪಾಲರಾದ ಟಿ. ಅನ್ನಪೂರ್ಣ, ಪ್ರಾಥಮಿಕ ವಿಭಾಗದ ಶ್ರೀಮತಿ ರೇಖಾ, ಶಿಕ್ಷಕರಾದ ಐಶ್ವರ್ಯ, ರಘುಮಾ ಮತ್ತು ಅರ್ಪಿತಾ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.