ಜ.12ರಂದು ‘ಕಲಾ ಜಂಗಮ’ ಅಭಿನಂದನಾ ಗ್ರಂಥ ಬಿಡುಗಡೆ

ತುಮಕೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ದರೈಸ್ತ್ರೀ ಕಲ್ಚರಲ್ ಟ್ರಸ್ಟ್, ಸಮತಾ ಪ್ರಕಾಶನ ಇವರ ಸಹಯೋಗದೊಂದಿಗೆ ಕೆ.ಸಣ್ಣಹೊನ್ನಯ್ಯ ಕಂಟಲಗೆರೆ ಅವರ ‘ಕಲಾ ಜಂಗಮ’ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಜನವರಿ 12ರ ಭಾನುವಾರ ಬೆಳಿಗ್ಗೆ 10.30ಕ್ಕೆ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಸ್. ಸಿದ್ದಲಿಂಗಪ್ಪ ವಹಿಸಲಿದ್ದು, ಅಭಿನಂದನಾ ಗ್ರಂಥವನ್ನು ಬಯಲಾಟ ಅಕಾಡೆಮಿ ಅಧ್ಯಕ್ಷರಾದ ಡಾ.ಕೆ.ಆರ್.ದುರ್ಗಾದಾಸ್ ಮಾಡುವರು,ಕೃತಿ ಕುರಿತು ಪಂಚಾಯತ್‍ರಾಜ್ ಒಕ್ಕೂಟದ ರಾಜ್ಯಾಧ್ಯಕ್ಷರಾದ ಸತೀಶ್ ಕಾಡಶೆಟ್ಟಿಹಳ್ಳಿ ಮಾತನಾಡುವರು.

ಮುಖ್ಯ ಅತಿಥಿಗಳಾಗಿ ಪದವಿ ಪೂರ್ವ ಶಿಕ್ಷಣ ಇಲಾಕೆಯ ಉಪನಿರ್ದೇಶಕ ಡಾ.ಬಾಲಗುರುಮೂರ್ತಿ, ಮೈಸೂರಿನ ಬಾಬುಜಗಜೀವನರಾಮ್ ಅಧ್ಯಯನ ಪೀಠದ ಮಾಜಿ ಅಧ್ಯಕ್ಷರಾದ ಡಾ.ಮೈಲನಹಳ್ಳಿ ರೇವಣ್ಣ, ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಕರಿಯಣ್ಣ ಮಾಳಿಗೆ, ರಂಗಭೂಮಿ ಕಲಾವಿದರಾದ ಡಾ.ಲಕ್ಷ್ಮಣದಾಸ್, ಶ್ರೀ ಕೃಷ್ಣ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಶ್ರೀಮತಿ ಮರಿಚನ್ನಮ್ಮ, ಚರಕ ಆಸ್ಪತ್ರೆಯ ಡಾ.ಬಸವರಾಜು ಭಾಗವಹಿಸುವರು.

ಕೆ.ಸಣ್ಣಹೊನ್ನಯ್ಯ ಕಂಟಲಗೆರೆ ಅವರನ್ನು ಅಭಿನಂದಿಸಲಾಗುವುದು, ಅಭಿನಂದನಾ ಗ್ರಂಥದ ಸಂಪಾಸಕರಾದ ಡಾ.ಎಸ್.ಕೃಷ್ಣಪ್ಪ, ಡಾ.ಶಿವಣ್ಣ ತಿಮ್ಲಾಪುರ ಅವರು ಉಪಸ್ಥಿತರಿರುವರು.

Leave a Reply

Your email address will not be published. Required fields are marked *