ತುಮಕೂರು:ಜೆಡಿಎಸ್ ಪಕ್ಷ ರಾಷ್ಟಿçÃಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ,ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿ.ಬಿ.ಸುರೇಶಬಾಬು ಹಾಗೂ ಯುವ ಜನತಾದಳದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಆದೇಶದಂತೆ ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನ ಮತ್ತು ಬೂತ್ ಕಮಟಿಗಳ ರಚನೆ ಮಾಡುತ್ತಿದ್ದು, ಮುಂದಿನ 15 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ ಮುಖಂಡರಿಗೆ ಸೂಚನೆ ನೀಡಿದ್ದಾರೆ.
ನಗರದ ಜೆಡಿಎಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಸದಸ್ಯತ್ವ ನೊಂದಣಿ ಅಭಿಯಾನ ಮತ್ತು ಬೂತ್ ಕಮಿಟಿಗಳ ಪದಾಧಿಕಾರಿಗಳ ನೇಮಕ ಸಂಬAಧ ಕರೆದಿದ್ದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಪಕ್ಷವನ್ನು ತಳಮಟ್ಟದಿಂದ ಕಟ್ಟುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷವನ್ನು ಕೇಡರ್ ಬೇಸ್ ಪಾರ್ಟಿಯಾಗಿ ರೂಪಿಸಲು ನಮ್ಮ ನಾಯಕರು ಹೊರಟಿದ್ದಾರೆ. ಅವರ ಕೋರಿಕೆಯಂತೆ ಮುಂದಿನ 15 ದಿನಗಳಲ್ಲಿ ತುಮಕೂರು ನಗರದ ಎಲ್ಲಾ 35 ವಾರ್ಡುಗಳಲ್ಲಿಯೂ ಎಲ್ಲಾ ವರ್ಗದ ಜನರನ್ನು ಒಳಗೊಂಡ ವಾರ್ಡ್ ಸಮಿತಿಗಳನ್ನು ರಚಿಸಿ ಪಟ್ಟಿಯನ್ನು ಪಕ್ಷದ ಕಚೇರಿಗೆ ಸಲ್ಲಿಸುವುದಲ್ಲದೆ,ಸಾರ್ವಜನಿಕರನ್ನು ಜೆಡಿಎಸ್ ಪಕ್ಷಕ್ಕೆ ನೊಂದಾಯಿಸಿ,ಪಕ್ಷವನ್ನು ಬಲಪಡಿಸುವ ಕೆಲಸ ಆಗಬೇಕು ಎಂದರು.
ಪಕ್ಷದ ತೀರ್ಮಾನದಂತೆ ಜೆಡಿಎಸ್ ಪಕ್ಷದ ಕಾರ್ಯಕರ್ತರ 25 ಜನರನ್ನು ನೊಂದಣಿ ಮಾಡಿಸಿದರೆ, ಆತನಿಗೆ ಸಕ್ರಿಯ ಸದಸ್ಯ ಎಂದು ಗುರುತಿಸುವುಲ್ಲದೆ, ಪಕ್ಷದ ಪದಾಧಿಕಾರಿ ಹುದ್ದೆ ಪಡೆಯಲು ಆರ್ಹನಾಗಿರುತ್ತಾನೆ. ಹಾಗೆಂದ ಮಾತ್ರ ತಾನೇ 25 ಜನರ ಹಣ ಕಟ್ಟಿ, ಹೆಸರು ನೊಂದಾಯಿಸುವAತಿಲ್ಲ. ಸದಸ್ಯರಾಗ ಬಯಸುವ ವ್ಯಕ್ತಿಗಳಿಂದಲೇ ತಲಾ 10 ರೂ ಸಂಗ್ರಹಿಸಿ, ಆ ಹಣವನ್ನು ಪಕ್ಷಕ್ಕೆ ಕಟ್ಟಿ ಸಂಪೂರ್ಣ ವಿಳಾಸವನ್ನು ಒಳಗೊಂಡ ನೊಂದಣಿ ಮಾಡಬೇಕು.ಇತಂಹವರಿಗೆ ಪಕ್ಷದಲ್ಲಿ ಪದಾಧಿಕಾರಿ ಹುದ್ದೆ ನೀಡುವುದಲ್ಲದೆ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ವೇಳೆಯೂ ಪರಿಗಣಿಸಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ಜೆಡಿಎಸ್ ಕಾರ್ಯಕರ್ತರು ಸಕ್ರಿಯರಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದರು.
ಚುನಾವಣಾ ಆಯೋಗದ ನಿಯಮದಂತೆ ಪ್ರತಿ 2-3 ವರ್ಷಗಳಿಗೊಮ್ಮೆ ಹೊಸ ಸದಸ್ಯರ ನೊಂದಣಿ ನಡೆಯಬೇಕಿದೆ.ಪಾಲಿಕೆಯ ಸದಸ್ಯರು ಇರುವ ವಾರ್ಡುಗಳಲ್ಲಿ ಪಾಲಿಕೆಯ ಸದಸ್ಯರು, ಇಲ್ಲದಿರುವ ಕಡೆಗಳಲ್ಲಿ ಡಿಫೀಟೆಡ್ ಕ್ಯಾಂಡಿಡೇಟ್ ಇಲ್ಲವೇ, ಸಕ್ರಿಯವಾಗಿರುವ ಕಾರ್ಯಕರ್ತರು, ಇಲ್ಲವೇ ಬೂತ್ ಕಮಿಟಿಯ ಅಧ್ಯಕ್ಷರುಗಳು ಸದಸ್ಯತ್ವ ನೊಂದಣಿ ಮಾಡಬೇಕು.ಬೂತ್ ಕಮಿಟಿ ಇಲ್ಲದಿದರುವ ಕಡೆಗಳಲ್ಲಿ ಹೊಸದಾಗಿ ಬೂತ್ ಕಮಿಟಿ ಮಾಡಿ, ಆವರ ಮೂಲಕ ಸದಸ್ಯತ್ವ ನೊಂದಣಿ ಅಭಿಯಾನ ಆರಂಭಿಸುವAತೆ ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜನಪ್ಪ ಮನವಿ ಮಾಡಿದರು.
ತುಮಕೂರು ನಗರ ಜೆಡಿಎಸ್ ಅಧ್ಯಕ್ಷ ವಿಜಯಗೌಡ ಮಾತನಾಡಿ,ಪಕ್ಷದ ಹೈಕಮಾಂಡ್ನ ತೀರ್ಮಾನದಂತೆ ಸದಸ್ಯತ್ವ ನೊಂದಣಿ ಅಭಿಯಾನ ಆರಂಭಿಸಲಾಗಿದೆ. ಯಾರು ಗೊಂದಲಕ್ಕೆ ಒಳಗಾಗದೆ,ಮುಂದೆ ಮೈತ್ರಿಯಾದರೆ ಟಿಕೇಟ್ ದೊರೆಯುವುದೋ, ಇಲ್ಲವೋ ಎಂಬ ಗೊಂದಲಕ್ಕೆ ಒಳಗಾಗದೆ, ಪಕ್ಷ ಸಂಘಟನೆಯಲ್ಲಿ ತೊಡಗಬೇಕು.ಒಂದು ವೇಳೆ ಟಿಕೇಟ್ ಸಿಗದಿದ್ದರೂ, ಪಕ್ಷದಲ್ಲಿ ಒಳ್ಳೆಯ ಹುದ್ದೆಗಳು ಸಿಗಲಿವೆ ಎಂಬು ಭರವಸೆಯನ್ನು ನೀಡಿದರು.
ಪಾಲಿಕೆ ಸದಸ್ಯ ಹೆಚ್.ಡಿ.ಕೆ.ಮಂಜುನಾಥ್ ಮಾತನಾಡಿ,ಲೋಕಸಭಾ ಚುನಾವಣೆಯ ಮೈತ್ರಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಮುಂದುವರೆದರೆ ಹಲವರು ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗುವ ಗೊಂದಲ ಇದೆ. ಈ ಬಗ್ಗೆ ಪಕ್ಷ ಸಷ್ಟನೆ ನೀಡಬೇಕು ಎಂದು ಸಲಹೆ ನೀಡಿದರು.
ಜೆಡಿಎಸ್ ಪಕ್ಷದ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ,ಮುಖಂಡರಾದ ಡಾಂಡೇಲಿ ಗಂಗಣ್ಣ,ಕAಬಣ್ಣ, ಪಾಲಿಕೆ ಸದಸ್ಯರಾದ ಧರಣೇಂದ್ರಕುಮಾರ್,ಮಹಿಳಾ ಘಟಕದ ಅಧ್ಯಕ್ಷೆ ತಾಹೀರಾ,ನಗರ ಅಧ್ಯಕ್ಷೆ ಲೀಲಾವತಿ, ವಿಶ್ವೇಶ್ವರಯ್ಯ, ಭೈರೇಶ್,ಗಣೇಶ್,ಕೆಂಪರಾಜು ಸೇರಿದಂತೆ ನಗರ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.