ತುಮಕೂರು : ಸ್ವಾತಂತ್ರ್ಯ ಬಂದಾಗಿನಿಂದ ಬಾಬಾ ಸಾಹೇಬ್‍ರ ಪ್ರತಿಮೆ ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಮಹಾನಗರ ಪಾಲಿಕೆಯಲ್ಲಿ ಅನೇಕ ಬಾರಿ ನಿರ್ಧರಿಸಿದ್ದರು ಸಾಧ್ಯವಾಗಲಿಲ್ಲ. ಎಲ್ಲ ಜಿಲ್ಲೆಗಳಲ್ಲೂ ಬಾಬಾ ಸಾಹೇಬ್ ಪ್ರತಿಮೆ ಇಡಲಾಗಿತ್ತು. ಬೆಂಗಳೂರಿಗೆ ಹತ್ತಿರವಿರುವ ತುಮಕೂರಿನಲ್ಲಿ ಇಡಲಾಗಿಲ್ಲ ಎಂಬ ಕೊರಗು ಇತ್ತು. ಪ್ರತಿಮೆ ಇಡಲು ಎಲ್ಲರು ಒಕ್ಕರಲಿನಿಂದ ಸಹಕರಿಸಿದರು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಅವರಿಂದು ನಗರದ ಟೌನ್‍ಹಾಲ್ ಮುಂಭಾಗದಲ್ಲಿ ನೂತನವಾಗಿ ಸ್ಥಾಪಿಸಲಾದ ಸಂವಿಧಾನಶಿಲ್ಪಿ, ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ 12 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಹಾಗೂ ಮಹಾನಗರ ಪಾಲಿಕೆ ಆವರಣದಲ್ಲಿ ಅಳವಡಿಸಲಾದ ‘ಲೈಟ್ ಯುಟಿಲಿಟಿ ಹೆಲಿಕ್ಯಾಪ್ಟರ್’ ಮಾದರಿಯನ್ನು ಉದ್ಘಾಟಿಸಿ ಮಾನ್ಯ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ನೀಡದೇ ಹೋಗಿದ್ದರೆ ಭಾರತ ಯಾವ ಸ್ಥಾನಮಾನದಲ್ಲಿ ಇರುತ್ತಿತ್ತು ಎಂಬುದು ಊಹಿಸಲು ಸಾಧ್ಯವಿಲ್ಲ. ಸ್ವಾತಂತ್ರ್ಯದ ನಂತರ ಪ್ರತಿಯೊಂದು ಜಾತಿ, ಧರ್ಮ ಸಮಾನವಾಗಿ ಬಾಳಬೇಕೆಂಬ ಮಾತುಗಳು ಕೇಳಿ ಬಂದಾಗ ಸಂವಿಧಾನ ರಚಿಸುವ ಜವಾಬ್ಧಾರಿ ಅಂಬೇಡ್ಕರ್ ರವರ ಹೆಗಲ ಮೇಲೆ ಬೀಳುತ್ತದೆ ಎಂದು ಹೇಳಿದರು.
ಪ್ರತಿಯೊಬ್ಬ ಭಾರತೀಯನಿಗೆ ಸಮಾನತೆ ಸಿಗಬೇಕು. ಭ್ರಾತೃತ್ವ, ಸಹೋದರತ್ವದಿಂದ ಬಾಳಬೇಕು. ಈ ಎಲ್ಲ ವೈವಿದ್ಯಮಯವಾದ ಚಿಂತನೆಯಿಂದ ಸಂವಿಧಾನ ಕೊಟ್ಟಿದ್ದಾರೆ. ಯಾವುದೇ ರಾಜ್ಯದ ಅಧಿವೇಶನ, ಲೋಕಸಭೆ ಅಧಿವೇಶನ ನಡೆದರೂ ಬಾಬಾ ಸಾಹೇಬ್‍ರನ್ನು ನೆಪು ಮಾಡಿಕೊಳ್ಳದ ದಿನವೇ ಇಲ್ಲ ಎಂದರು.
ಅಭಿಮಾನದಿಂದ ಸಂವಿಧಾನವನ್ನು ಜ್ಞಾಪಿಸಿಕೊಳ್ಳುತ್ತಾರೆ. ದೇಶ ಸದೃಡವಾಗಿ ಪ್ರಜಾಪ್ರಭುತ್ವವಾಗಿ ನಿಂತಿರುವುದಕ್ಕೆ ಸಂವಿಧಾನ ಕಾರಣ ಈ ದೇಶದಲ್ಲಿ ಸಮಾನತೆ ಬರಬೇಕು. ಜಾತಿವ್ಯವಸ್ಥೆ ನಮ್ಮ ತಿನ್ನುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಬಾಬಾ ಸಾಹೇಬ್‍ರು ಹಿಂದೂ ವಿರೋಧಿಯಲ್ಲ. ಹಿಂದೂ ಸಮಾಜವನ್ನು ಬದಲಾವಣೆ ಮಾಡಲು ಮುಂದಾದರು. ಮನುಸ್ಮೃತಿಯನ್ನು ಸುಟ್ಟರು. ಆದರು ಬದಲಾವಣೆ ಆಗಲಿಲ್ಲ. ಜಾತಿವ್ಯವಸ್ಥೆ, ಸಮಾಜ ಬದಲಾಗಲಿಲ್ಲ. ಇದರಿಂದ ಮನನೊಂದು, ‘ಆಕಸ್ಮಿಕವಾಗಿ ಹಿಂದೂವಾಗಿ ಹುಟ್ಟಿದ್ದೇನೆ. ಹಿಂದೂವಾಗಿ ಸಾಯಲಾರೇ’ ಎನ್ನುತ್ತಾರೆ. ಸಹೋದರತ್ವ ಭಾವನೆ ಬರಲಿಲ್ಲವಲ್ಲ ಎಂದು ಬೌದ್ಧ ಧರ್ಮಕ್ಕೆ ಸೇರ್ಪಡೆಯಾಗುತ್ತಾರೆ ಎಂದು ಹೇಳಿದರು.
ಒಂದು ಕಾಲಕ್ಕೆ ಬಡತನದ ದೇಶವಾಗಿದ್ದ ಬಾಬರತ, ಇಂದು ವಿಶ್ವದಲ್ಲಿ 4ನೇ ಅರ್ಥಿಕ ದೇಶವಾಗಿ ಬೆಳೆದಿರುವುದಕ್ಕೆ ಸಂವಿಧಾನ ಕಾರಣ.ರಿಸರ್ವ್ ಬ್ಯಾಂಕ್ ಇಲ್ಲವಾಗಿದ್ದರೆ ನಮ್ಮ ಅರ್ಥಿಕ ಮಟ್ಟ ಏನಾಗಿರುತ್ತಿತ್ತು ಎಂದು ಊಹಿಸಲು ಅಸಾಧ್ಯ. ಪ್ರಸ್ತುತ ಸಂದರ್ಭದಲ್ಲಿ ಬದಲಾವಣೆ ಆಗುತ್ತಿವೆ. ವಿದ್ಯಾವಂತರಾಗುತ್ತಿದ್ದಾರೆ ಮನಸ್ಸು ಬದಲಾಗುತ್ತಿಲ್ಲ. ಸಮಾಜ ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದರೆ ಹೀಗೆ ಉಳಿದುಬಿಡುತ್ತೇವೆ. ಬದಲಾವಣೆ ಎಂಬುದು ಸಂವಿಧಾನದ ಪುಟದಲ್ಲಿ ಇದ್ದರೆ ಸಾಲದು ಎಂದು ಹೇಳಿದರು.
ಸರ್ಕಾರಗಳು ನೀಡುವ ಎಲ್ಲ ಯೋಜನೆ, ಸವಲತ್ತುಗಳು ಬದಲಾವಣೆ ತರಲೇ ಇಲ್ಲ. ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಅವರು ಮಾತನಾಡಿ ಅನೇಕ ಬದಲಾವಣೆ ತಂದಿದ್ದಾರೆ. ಸಂವಿಧಾನದಪೂರ್ವಪೀಠಿಕೆಯನ್ನು ಮನೆಮನೆಗೆ ತಲುಪಿಸಿ ಅರ್ಥ ಮಾಡಿಸುವ ಕೆಲಸ ಮಾಡಿದ್ದಾರೆ. ಇದೇ ನಮ್ಮ ಬೈಬಲ್, ಕುರಾನ್ ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ಯಾವ ಜನ ಹಿಂದುಳಿದಿದ್ದಾರೆ. ಅವರಿಗೆ ಕಾರ್ಯಕ್ರಮ ಕೊಟ್ಟು ಸಮಾಜದ ಮುನ್ನೆಲೆಗೆ ತರುತ್ತೇವೆ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ ಎಂದು ಹೇಳಿದರು.
ಶ್ರಮಪಟ್ಟು ಈ ಕಾರ್ಯಕ್ರಮ ರೂಪಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಸಿಇಒ ಪ್ರಭು, ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜಾ, ಎಸ್‍ಪಿ ಅಶೋಕ್ ಅವರಿಗೆ ವಿಶೇಷ ಅಭಿನಂದನೆಗಳು. ಬಾಬು ಜಗಜೀವನ್ ರಾಮ್ ಅವರ ಜನ್ಮ ದಿನವನ್ನು ಏಪ್ರಿಲ್ 5ರಂದು ಸಾಂಕೇತಿಕವಾಗಿ ಆಚರಿಸಿದ್ದೇವೆ. ಎಲ್ಲ ಸಲಹೆ ಮೇರೆಗೆ ಇಂದು ಆಚರಿಸಲಾಗುತ್ತಿದೆ ಎಂದರು.
ಅವರ ಆಡಳಿತ ಸಂದರ್ಭದಲ್ಲಿ ಪಾಕಿಸ್ಥಾನ್ಒಂದಿ್ಎ ಯುದ್ಧವಾಯಿತು. ದೇಶದಲ್ಲಿ ಕ್ಷಾಮ, ಬಡತನವಿದ್ದಾಗ ಕೃಷಿ ಇಲಾಖೆಯನ್ನು ತೆಗೆದುಕೊಂಡು ಹಸಿರು ಕ್ರಾಂತಿ ಮಾಡಿದರು. ಎಲ್ಲ ಬಡವರಿಗೆ ಹತ್ತು ಕೆ.ಜಿ. ಅಕ್ಕಿ ನೀಡುತ್ತಿರುವ ಶಕ್ತಿ ಬಂದಿರುವುದು ಬಾಬು ಜಗಜೀವನ್ ರಾಮ್ ರವರ ಕೊಡುಗೆಯಿಂದ ಸಾಧ್ಯವಾಗಿದೆ ಎಂದರು.
ಕೇಂದ್ರ ಸಚಿವರಾದ ವಿ.ಸೋಮಣ್ಣ, ಸಹಕಾರ ಸಚಿವ ಕೆ.ಎನ್.ರಾಜಣ್ಣ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‍ಗೌಡ, ಡಾ. ಹೆಚ್.ಡಿ.ರಂಗನಾಥ್, ಹೆಚ್.ವಿ.ವೆಂಕಟೇಶ್, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಸಿ.ವೇಣುಗೋಪಾಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ್ ಗೌಡ ಅವರು ಹಾಗೂ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.